|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉನ್ನತ ಶಿಕ್ಷಣದ ಸುಧಾರಣೆ- ವಿವಿ ಆಡಳಿತದ ಕಾರ್ಯತಂತ್ರಗಳು: ಮೇ 30ರಂದು ವಿಶೇಷ ಸಮ್ಮೇಳನ

ಉನ್ನತ ಶಿಕ್ಷಣದ ಸುಧಾರಣೆ- ವಿವಿ ಆಡಳಿತದ ಕಾರ್ಯತಂತ್ರಗಳು: ಮೇ 30ರಂದು ವಿಶೇಷ ಸಮ್ಮೇಳನ

ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆಯ ಸಹಯೋಗದಲ್ಲಿ ಮಂಗಳೂರು ವಿವಿ ಆಯೋಜನೆ



ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆಯ ಸಹಯೋಗದೊಂದಿಗೆ “ಉನ್ನತ ಶಿಕ್ಷಣದ ಸುಧಾರಣೆ ಮತ್ತು ವಿಶ್ವವಿದ್ಯಾನಿಲಯಗಳ ಅಡಳಿತದ ಕಾರ್ಯತಂತ್ರಗಳು” ಎಂಬ ವಿಷಯದ ಕುರಿತು ಒಂದು ದಿನದ ಸಮ್ಮೇಳನವನ್ನು ಮೇ 30 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಅಯೋಜಿಸುತ್ತಿದೆ. ಈ ಸಮ್ಮೇಳನವು ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಹಿನ್ನೆಲೆಯಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ವಿಶ್ವವಿದ್ಯಾನಿಲಯಗಳಿಗಿರುವ ಅವಕಾಶಗಳು, ಆಯ್ಕೆಗಳು ಮತ್ತು ಸವಾಲುಗಳನ್ನು ಕುರಿತ ವಿಷಯಗಳನ್ನು ಚರ್ಚಿಸುವ ಉದ್ಧೇಶವನ್ನು ಹೊಂದಿದೆ.


ಈ ಸಮ್ಮೇಳನವನ್ನು ಮೇ 30ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲ ಅಕಾಡೆಮಿ ಅಫ್‌ ಹೈಯರ್‌ ಎಜುಕೇಶನ್‌ನ ಕಾರ್ಯವಿರ್ವಾಹಕ ಉಪಾಧ್ಯಕ್ಷ ಹಾಗೂ ವಿಶ್ರಾಂತ ಕುಲಪತಿ, ಡಾ. ವಿನೋದ್‌ ಭಟ್‌ ಉದ್ಘಾಟಿಸಲಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ಪಿ. ಸುಬ್ರಮಣ್ಯ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.




ಈ ಸಮ್ಮೇಳನದಲ್ಲಿ ಡಾ. ಟಿ.ವಿ ಕಟ್ಟಿಮನಿ, ಅಂದ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳು ಮತ್ತು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಅಭಿವೃದ್ದಿಗಾಗಿ ಶಿಕ್ಷಣ ಸಚಿವಾಲಯವು ರಚಿಸಿರುವ ರಾಷ್ಟ್ರೀಯ ಚಾಲನಾ ಸಮಿತಿಯ ಸದಸ್ಯರು; ಡಾ. ಎಸ್‌.ಎನ್‌ ಹೆಗ್ಡೆ, ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು; ಹಾಗೂ ಡಾ. ಕೆ ಸಿದ್ದಪ್ಪ, ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.


ಕಾರ್ಯಕ್ರಮದಲ್ಲಿ ಡಾ. ಕೆ. ಎಸ್‌ ರಂಗಪ್ಪ, ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು ಮತ್ತು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆ ಅಧ್ಯಕ್ಷರು; ಡಾ. ಸುರೇಶ್‌ ಎಸ್‌. ಹೊನ್ನಪ್ಪಗೋಳ್‌, ಕೆವಿಎಫ್‌ಎಸ್‌ಸಿ ವಿಶ್ವವಿದ್ಯಾನಿಲಯ, ಬೀದರ್‌ನ ವಿಶ್ರಾಂತ ಉಪಕುಲಪತಿಗಳು ಮತ್ತು  ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆ ಕಾರ್ಯದರ್ಶಿ; ಡಾ. ಕೆ. ನಾರಾಯಣಗೌಡ, ವಿಶ್ರಾಂತ ಕುಲಪತಿಗಳು, ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ, ಬೆಂಗಳೂರುʼ ಡಾ. ಎನ್‌ ಎಸ್‌ ರಾಮೇಗೌಡ, ವಿಶ್ರಾಂತ ಕುಲಪತಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು; ಡಾ ಎಸ್‌. ಆರ್‌ ನಿರಂಜನ ವಿಶ್ರಾಂತ ಕುಲಪತಿಗಳು, ಗುಲ್ಬರ್ಗ ವಿಶ್ವವಿದ್ಯಾನಿಲಯ; ಡಾ. ಬಿ.ಜಿ ಸಂಗಮೇಶ್ವರ, ವಿಶ್ರಾಂತ ಕುಲಪತಿಗಳು, ಜೆಎಸ್‌ಎಸ್‌ ಎಸ್‌ & ಟಿ ವಿಶ್ವವಿದ್ಯಾನಿಲಯ, ಮೈಸೂರು; ಡಾ ಎಚ್‌. ಮಹೇಶಪ್ಪ, ವಿಶ್ರಾಂತ ಕುಲಪತಿಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ಬೆಳಗಾವಿ, ಮತ್ತು ಡಾ. ಇ.ಟಿ ಪುಟ್ಟಯ್ಯ, ವಿಶ್ರಾಂತ ಕುಲಪತಿಗಳು, ಗುಲ್ಬರ್ಗ ವಿಶ್ವವಿದ್ಯಾನಿಲಯ; ಮತ್ತು ರಾಜ್ಯದ ವಿವಿಧ ಶಿಕ್ಷಣ ತಜ್ಞರು, ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಶಿಕ್ಷಕರು ಬಾಗವಹಿಸಲಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post