||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ ಅಪ್ರತಿಮ ಕ್ರಾಂತಿಜ್ಯೋತಿ ಸಾವರ್ಕರ್ ಅವರ ಜನ್ಮದಿನವಿಂದು

ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ ಅಪ್ರತಿಮ ಕ್ರಾಂತಿಜ್ಯೋತಿ ಸಾವರ್ಕರ್ ಅವರ ಜನ್ಮದಿನವಿಂದು


(ಚಿತ್ರ ಕೃಪೆ: ಝೀ ನ್ಯೂಸ್)


ವಿನಾಯಕ ದಾಮೋದರ ಸಾವರ್ಕರ್ ಜನಿಸಿದ್ದು 28.5.1883. ತನ್ನ ಬಾಲ್ಯದಲ್ಲೇ ದೇಶದ ಬಗ್ಗೆ ಅಪಾರ ಒಲವು ಹೊಂದಿದ ಸ್ವಯಂಭು ದೇಶಭಕ್ತನಿಗೆ ನುಡಿನಮನಗಳು.


ಜನ್ಮದಿನದ ಪ್ರಯುಕ್ತ ಸಾವರ್ಕರ್ ದೇಶಕ್ಕಾಗಿ ತನ್ನನ್ನು ತಾನು ಅರ್ಪಿಸಿದ ಪರಿಯನ್ನು ಈ ಲೇಖನದ ಮೂಲಕ ತಿಳಿಸಲು ಪ್ರಯತ್ನಿಸುತ್ತೇನೆ.


ಸಾವರ್ಕರ್ ಗೆ ಸುಮಾರು 12-13 ವರ್ಷ ಆ ಸಂದರ್ಭದಲ್ಲಿ ಮಹಾರಾಷ್ಟ್ರ ಪ್ಲೇಗ್ ಎಂಬ ಮಾರಕ ಕಾಯಿಲೆಗೆ ಬಲಿಯಾಗುತ್ತಾಯಿತ್ತು, ಪ್ಲೇಗ್ ಕಾಯಿಲೆ ತಡೆಗಟ್ಟಲು ಬ್ರಿಟಿಷ್ ಸರ್ಕಾರ 1897ರಲ್ಲಿ ರ್ಯಾಂಡ್ ಎಂಬ ಅಧಿಕಾರಿಯನ್ನು ನಿಯೋಜಿಸಿತು.


ಆದರೇ ಈ ರ್ಯಾಂಡ್ ಪ್ಲೇಗ್ ನ ಹೆಸರಿನಲ್ಲಿ ಎಷ್ಟು ಅನ್ಯಾಯ ಮಾಡಿದನೆಂದರೆ ಪ್ಲೇಗ್ ನ ಹೆಸರಿನಲ್ಲಿ ಮನೆ ಮನೆ ಕೊಳ್ಳೆಹೊಡೆದು ಪ್ಲೇಗ್ ಬಂದವರನ್ನೆಲ್ಲ ಒಂದು ಕಡೆ ಸೇರಿಸಿ ಬೆಂಕಿಹಚ್ಚಿ ಸಾಮೂಹಿಕವಾಗಿ ದಹಿಸಿದ(ಆ ಸಂದರ್ಭದಲ್ಲಿ ಎಷ್ಟೋ ಜನ ಬದುಕಿರುವವರನ್ನು ಸಹ ದಹಿಸಿದ) ಪಾಪಿ.


ಆಗ ಇದನ್ನೆಲ್ಲಾ ಕಂಡ ತಿಲಕರು ತನ್ನ ಕೇಸರಿ ಪತ್ರಿಕೆಯಲ್ಲಿ "ಆ ರ್ಯಾಂಡ್ ಎಂಬ ಇಂಗ್ಲೆಂಡಿನ ನಾಯಿಯನ್ನು ಪ್ರಶ್ನೆ ಮಾಡುವ ಪೌರುಷ ನಮ್ಮಲ್ಲಿ ಯಾರಿಗೂ ಇಲ್ವಾ" ಎಂದು ಸಂಪಾದಕೀಯವನ್ನು ಪ್ರಕಟಿಸಿದರು,


ಇದರಿಂದ ಪ್ರೇರಿತರಾಗಿ 3 ಜನ ವಾಸುದೇವ ಚಾಪೆಕರ್, ಬಾಳಕೃಷ್ಣ ಚಾಪೆಕರ್ ಮತ್ತು ದಾಮೋದರ ಚಾಪೆಕರ್ ಸೇರಿ ಚಾಪೆಕರ್ ಕ್ಲಬ್ ಸ್ಥಾಪಿಸಿ ಗುಂಡು ಹೊಡೆಯುವ ಅಭ್ಯಾಸ ಪ್ರಾರಂಭಿಸಿದರು, ನಂತರ 1897 ವಿಕ್ಟೊರಿಯಾ ರಾಣಿಯ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಡಿದು ತುರಾಡುತ್ತಾ ಬರುತ್ತಿದ್ದ ರ್ಯಾಂಡ್ ನನ್ನು ಕತ್ತಲಲ್ಲಿ ಹೊಂಚುಹಾಕಿ ಕುಳಿತ್ತಿದ್ದ ಚಾಪೆಕರ್ ಬ್ರದರ್ಸ್ ಕೊಂದರು, ದುರಾದೃಷ್ಟವಷತ್ ಗಣೇಶ್ ಶಂಕರ್ ದ್ರವಿಡ್ ಎಂಬ ದೇಶದ್ರೋಹಿ ಎಂಜಲಿನ ಆಸೆಗಾಗಿ ಚಾಪೆಕರ್ ಬ್ರದರ್ಸ್ನ ಹೆಸರು ಬ್ರಿಟಿಷ್ ಸರ್ಕಾರಕ್ಕೆ ಹೇಳಿದ,


ಆಗ- ಟೈಮ್ಸ್ ಆಫ್ ಇಂಡಿಯಾ, ಕೊಲೆಗಡುಕರನ್ನು ಸೆರೆಹಿಡಿದಿದೆ ಎಂದು ವರದಿ ಮಾಡಿತು.


ಆ ಸಂದರ್ಭದಲ್ಲಿ ಕೊಲೆಯಲ್ಲ ಎಂದು ಹೇಳಿದವನು ಸಾವರ್ಕರ್ ಒಬ್ಬನೇ.

12 ವರ್ಷದ ಬಾಲಕ ಹೇಳುತ್ತಾನೆ "ಸ್ವಂತದ ಸ್ವಾರ್ಥಕ್ಕಾಗಿ ಯಾರನ್ನಾದರೂ ಕೊಂದರೆ ಅದು ಕೊಲೆ ಸಮಾಜದ ಹಿತಕ್ಕಾಗಿ ಯಾರನ್ನಾದರೂ ಕೊಂದರೆ ಅದು ಸಂಹಾರ" ಕೃಷ್ಣ ಕಂಸನನ್ನು ಕೊಂದ ಅವನನ್ನು ಕೊಲೆಗಾರ ಅಂತಾ ಯಾರು ಹೇಳಲ್ಲಾ ಅಲ್ವಾ ಅದು ಕಂಸವದೆ ಹಾಗೇ ಇಲ್ಲಿ ರ್ಯಾಂಡ್ ನ ವದೆ ನಡೆಯಿತು ಎಂದು ಪತ್ರ ಬರೆದ.


ತಿಲಕರು ಆ ಪತ್ರವನ್ನು ಪ್ರಕಟ ಮಾಡಿದರು ಮುಖವಿಸ್ಮಿತವಾಗಿ ಜನಸ್ತೋಮ ನೋಡಿತು.


ನಂತರದ ದಿನಗಳಲ್ಲಿ ಮಿತ್ರಮೇಳ ಎಂಬ ಗೆಳೆಯರ ಗುಂಪು ಕಟ್ಟಿ ಶಿವಾಜಿ ಮಹಾರಾಜರ ಕಥನ, ಗಣೇಶೋತ್ಸವ ಮುಂತಾದ ಕೆಲಸವನ್ನು ಮಾಡಿದ,


ಕ್ಷಾಮದ ಪರಿಣಾಮ ನಾಸಿಕ ಕಕ್ಕೆ ಬಂದ ಅಲ್ಲೂ ತನ್ನ ಮಿತ್ರಮೇಳದ ಆಕ್ಟಿವಿಟ್  ಮುಂದುವರಿಸಿದ, ನಂತರ ಪುಣೆಯ ಫಾರ್ಗಿವಿಸನ್ ಕಾಲೇಜಿಗೆ ಸೇರಿದ ದೇಶಭಕ್ತರಿಗೆ ಅವಕಾಶವೇ ಇಲ್ಲದ ಆ ಕಾಲೇಜನ್ನೇ ಬದಲಾಯಿಸಿದ.


ಅಭಿನವ ಭಾರತ ಎಂಬ ಸಂಘಟನೆ ಸ್ಥಾಪಿಸಿ ಗಾಂಧೀಜಿಗಿಂತ 14 ವರ್ಷಗಳ ಮುಂಚೆ ಗಾಂಧೀಜಿಗಿಂತ 15 ವರ್ಷ ಚಿಕ್ಕವರಾದ ಸಾವರ್ಕರ್ ಸ್ವದೇಶಿ ಚಳುವಳಿ ಪ್ರಾರಂಭಿಸಿ ಪುನಾದ ಶನಿವಾರ್ ವಾಡದಲ್ಲಿ ಪಾಶ್ಚಾತ್ಯ ವಸ್ತುಗಳನ್ನು ಸೇರಿಸಿ ಬೆಂಕಿ ಹಾಕಿ ಹೋಳಿಮಾಡಿದರು.


ಉನ್ನತ ವ್ಯಾಸಂಗಕ್ಕೊಸ್ಕರ ಶ್ಯಾಮ್ ಜಿ ಕೃಷ್ಣ ವರ್ಮರ ಪ್ರೇರಣೆಯಿಂದ ಇಂಗ್ಲೆಂಡಿಗೆ ಹೋದ ಆ ಪ್ರಯಾಣದ ಸಂದರ್ಭದಲ್ಲಿ ಆ ಹಡಗಿನಲ್ಲಿ ಇದ್ದ ಎಲ್ಲರನ್ನೂ ಪ್ರತ್ಯೇಕವಾಗಿ ಮಾತನಾಡಿಸಿ ಅಭಿನವ ಭಾರತ ಗುಪ್ತ ಸಂಘಟನೆಯ ಶಪತಬದ್ಧ ಕಾರ್ಯಕರ್ತರನ್ನಾಗಿ ಮಾಡಿದರು.


ಸಾವರ್ಕರ್ ಸಂಪರ್ಕಕ್ಕೆ ಬಂದವರು ಒಬ್ಬಬ್ಬರೂ ದೇಶಕ್ಕೋಸ್ಕರ ತಮ್ಮನ್ನೇ ತಾವು ಅರ್ಪಿಸಿದ್ದಾರೆ ನೆನಪಿದೆಯಾ ಮದನ್ ಲಾಲ್ ಧಿಂಗ್ರಾ ತಾಯಿ ಭಾರತಿಗೆ ತನ್ನ 24ನೇ ವಯಸ್ಸಿನಲ್ಲಿ "ಈಗ ನನ್ನ ದೇಶಕ್ಕೆ ಬಲಿದಾನದ ಅಗತ್ಯವಿದೆ ಭಾಷಣದಿಂದ ಸಾಧ್ಯವಿಲ್ಲ, ಅಮ್ಮ (ಭಾರತಿ) ನಿನ್ನ ಸೇವೆ ಅಂದರೆ ಅದು ಪ್ರಭು ರಾಮನ ಸೇವೆ ನಿನ್ನ ಅಪಮಾನ ಎಂದರೆ ನನ್ನ ತಾಯಿಯ ಅಪಮಾನ ನಿನ್ನಂತಹ ದೊಡ್ಡ ತಾಯಿಗೆ ನನ್ನಂತಹ ದಡ್ಡ ಮಗ ಪ್ರಾಣನಲ್ಲದೇ ಬೇರೆ ಏನು ನೀಡಲು ಸಾಧ್ಯವೆಂದು ಗಲ್ಲಿಗೇರಿದ".ಸಾವರ್ಕರ್ ಬ್ರಿಟಿಷ್ ಗ್ರಂಥಾಲಯದಲ್ಲಿ ಕುಳಿತು ಇಂಗ್ಲೆಂಡಿನಲ್ಲಿ 'ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ' ಎಂಬ ಕೃತಿಯನ್ನು ರಚಿಸಿದರು ಆ ಕೃತಿಯನ್ನು ಕದ್ದು ಓದಿದ ಬ್ರಿಟಿಷ್ ಪೊಲೀಸರು ಆ ಪ್ರಕಟನೆಯಾಗದ ಪುಸ್ತಕಗಳನ್ನು ಬ್ಯಾನ್ ಮಾಡಿ ಎಂದು ಸರ್ಕಾರಕ್ಕೆ ಹೇಳಿತು, ಕೊನೆಗೆ ಸರ್ಕಾರ ಆ ಪುಸ್ತಕಗಳನ್ನು ನಿಷೇಧಿಸಿತು ಆದರೇ ಅದನ್ನೇ ಸವಾಲಾಗಿ ಸ್ವೀಕರಿಸಿದ ಅಭಿನವ ಭಾರತದ ಯುವಕರು ಆ ಪುಸ್ತಕಗಳನ್ನು ಹಾಲೆಂಡ್ನಲ್ಲಿ ಪ್ರಿಂಟ್ ಮಾಡಿ ಬಿಟೀಶ್ ಪೊಲೀಸರ ಕಣ್ಣಿಗೆ ಮಣ್ಣೆರಚಿ ಭಾರತಕ್ಕೆ ದೊಡ್ಡ ಸಂಖ್ಯೆಯಲ್ಲಿ ತಂದರು.ಇದರಲ್ಲಿ ಸವಾರ್ಕರ್ ನ ಅಣ್ಣ ಬಾಬಾ ಸವಾರ್ಕರ್ ರ ಕೈವಾಡವಿದೆ ಎಂದು ಶಂಕೆಯ ಮೇರೆಗೆ ಬಾಬಾ ಸಾವರ್ಕರನ್ನು ಬಂಧಿಸಿದರು, ಅದನ್ನು ವಿರೋಧಿಸಿ ಅನಂತ್ ಕಾನ್ಹೆರೆ ತನ್ನ 14 ನೇ ವಯಸ್ಸಿನಲ್ಲಿ ಸವಾರ್ಕರ್ ನ ಅಣ್ಣ ಬಾಬಾ ಸವಾರ್ಕರ್ ನನ್ನು ಬಂದಿಸಿ ಅಂಡಮಾನ್ ಗೆ ಹಾಕಿದ ನಾಸಿಕದ ಜಿಲ್ಲಾ ಕಲೆಕ್ಟರ್ ಜಾಕ್ಸನ್ ನ್ನು ಕೊಂದ.


ಕಾನ್ಹೆರೆಗೆ ರಿವಾಲ್ವರ್ ಬಂದದ್ದು ಇಂಗ್ಲೆಂಡಿನಿಂದ ಇದರಲ್ಲಿ ಸಾವರ್ಕರ್ ಪಾತ್ರ ಇರಬಹುದು ಎಂಬ ಶಂಕೆಯ ಮೇರೆಗೆ ಸಾವರ್ಕರನ್ನು  ಇಂಗ್ಲೆಂಡಿನಲ್ಲಿ ಬಂಧಿಸಿದರು ನಂತರ ಭಾರತಕ್ಕೆ ಹಡಗಿನಲ್ಲಿ ತರುವ ಸಂದರ್ಭದಲ್ಲಿ ತಾನು ಜೈಲುಪಾಲದರೆ ನನ್ನ ದೇಶಸೇವೆ ಇಲ್ಲಿಗೆ ಅಂತ್ಯಕಾಣುತ್ತೇ ಎಂದು ಸವಾರ್ಕರ್ ಹಡಗಿನ ಸೌಚ ಗೃಹದ ಪುಟ್ಟ ಕಿಟಕಿಯ ಗಾಜುತುಂಡರಿಸಿ ಸಮುದ್ರದಲ್ಲಿ ಈಜಿ ಪ್ರಾನ್ಸ್ ನ ದಡ ಸೇರಿ ಒಡಲಾರಂಭಿಸಿದರು.


ಸ್ವತಂತ್ರ ಸಾರ್ವಬೌಮ ರಾಷ್ಟ್ರ ಪ್ರಾನ್ಸ್ ನಲ್ಲಿ ಬ್ರಿಟಿಷರ್ ವಾರೆಂಟ್ ಇಲ್ಲದೇ ಬಂಧಿಸಲು ಸಾಧ್ಯವಿಲ್ಲ ಎಂದು ನಂಬಿದ ಸಾವರ್ಕರ್ ನ ನಂಬಿಕೆ ಹುಸಿಯಾಯಿತು ಬ್ರಿಟಿಷ್ ಪೊಲೀಸರು ಪ್ರಾನ್ಸ್ ನಿಂದ ಸಾವರ್ಕರನ್ನು ಕರೆದೊಯ್ದರು, ಆಗ ಪ್ರಾನ್ಸ್ ನ ಜನ ಒಪ್ಪದೇ ಅಂತಾರಾಷ್ಟ್ರೀಯ ನ್ಯಾಯಾಲಯದ ಕದ ತಟ್ಟಿದರು ಕೊನೆಗೂ ಬ್ರಿಟಿಷ್ ರ ಪರವಾಗಿ ತೀರ್ಪು ಬಂದಾಗ ಪ್ರಾನ್ಸ್ ನ ಜನ ಇದು ನಮ್ಮ ಸಾರ್ವಬೌಮತೆಯ ಪ್ರಶ್ನೆ ಇದಕ್ಕೆ ಕಾರಣ ಪ್ರಧಾನಿ ಬ್ರಿಯಾನ್ಡ್ ನೀನು ರಾಜೀನಾಮೆ ನೀಡಬೇಕು ಎಂದು ಚಳುವಳಿ ಪ್ರಾರಂಭಿಸಿದರು, ತೀರ್ಪು ಬಂದ ಒಂದೇ ವಾರದಲ್ಲಿ ಪ್ರಾನ್ಸ್ ನ ಪ್ರಧಾನಿ ಬ್ರಿಯಾನ್ಡ್ ರಾಜೀನಾಮೆ ನೀಡಿದ.ಭಾರತದಲ್ಲಿ ಬ್ರಿಟಿಷ್ ಸರ್ಕಾರ ಸವಾರ್ಕರ್ ಗೆ 2 ಜನ್ಮಗಳ ಅಂಡಮಾನ್ ಕಲಾಪಾನಿ ಜೈಲಿನಲ್ಲಿ ಜೀವಾವಧಿ ಶಿಕ್ಷೆವಿಧಿಸಿತು, ಆಗ ಪೊಲೀಸ್ ಜಮಾಲ್ಡಾರ್ ಸಾವರ್ಕರ್ ಕೊರಳಿಗೆ ಒಂದು ಕಬ್ಬಿಣದ ಬಿಲ್ಲೆ ತಂದು ಹಾಕಿದ ಅದನ್ನು ಸಾವರ್ಕರ್ ಏನೆಂದು ಪ್ರಶ್ನಿಸಿದಾಗ ಆ ಜಮಾಲ್ಡಾರ್ ಹೇಳ್ತಾನೆ ನಮ್ಮ ಸರ್ಕಾರ ನಿಮ್ಮನ್ನು 1960 ಯಂದು ಬಿಡುಗಡೆ ಮಾಡುತ್ತೆ ಎಂದು ಆಗ ಸಾವರ್ಕರ್ ನೀವು ಅಷ್ಟು ದಿನ ಇಲ್ಲಿ ಇರುತ್ತೀರಿ ಎಂಬ ವಿಶ್ವಾಸವಿದೆಯಾ ಎಂದು ಪ್ರಶ್ನೆ ಮಾಡಿದರು, ಹೀಗೇ ಹೆಜ್ಜೆ ಹೆಜ್ಜೆಗೂ ಬ್ರಿಟಿಷ್ ಸರ್ಕಾರದ ಬೆವರು ಇಳಿಸುತ್ತಿದ್ದ ಅಪ್ರತಿಮ ಕ್ರಾಂತಿ ಜ್ಯೋತಿ ಸಾವರ್ಕರ್. ಅಂಡಮಾನ್ ಜೈಲಿನಲ್ಲಿ ಕೋಮು ಕೋಮು ಗಳ ನಡುವೆ ಕಂದಕ ಸೃಷ್ಟಿಸಿ ಬ್ರಿಟಿಷ್ ಸರ್ಕಾರ ನಡೆಸುತ್ತಿದ್ದ ಡಿವೈಡ್ ಅಂಡ್ ರೂಲ್ ನ್ನು ಸಾವರ್ಕರ್ ಅಂತ್ಯಗೊಳಿಸಿದರು, ಕರಿನೀರಿನ ಶಿಕ್ಷೆಯನ್ನು ಬಿಳಿನೀರಿನ ಶಿಕ್ಷೆಯಾಗಿ ಪರಿವರ್ತಿಸಿದರು , ಆಹಾರ ಪದ್ಧತಿಯನ್ನು ಮಾರ್ಪಡಿಸಿದರು.ಬಿಡುಗಡೆಯ ನಂತರ:

ನೇತಾಜಿ ಸುಭಾಷ್ ಚಂದ್ರ ಬೋಸ್ ರು ಸಾವರ್ಕರ್ ರ ಸಂಪರ್ಕಕ್ಕೆ ಬಂದಾಗ ಬೋಸ್ ರಿಗೆ ಜಾಪನ್ ಗೆ ತೆರಳುವಂತೆ ಮಾರ್ಗದರ್ಶನ ನೀಡಿದರು, ನೇತಾಜಿ 1940 ರಲ್ಲಿ ಸಿಂಗಾಪುರ ದಿಂದ ಈ ಉಪಾಯ ನೀಡಿದ ಸಾವರ್ಕರ್ ಗೆ ಧನ್ಯವಾದ ನೀಡಿದನ್ನು ಸ್ಮರಿಸಬಹುದು.ಸಾವರ್ಕರ್ ರ ಬಗ್ಗೆ ಬರೆಯುತ್ತಾ ಹೋದರೆ ಅದು ಮುಗಿಯದ ಅಧ್ಯಾಯ ಹೇಗೆ ತಾನೇ ಮರೆಯಲು ಸಾಧ್ಯ ಅವರ ತ್ಯಾಗವನ್ನು !ಆದರೆ ನೆಹರೂ ಗಾಂಧೀಜಿ ಹತ್ಯೆ ಆರೋಪಿ ಕ್ರಮಾಂಕ ಪಟ್ಟಿ 5 ನ್ನು ನೀಡಿ ತನ್ನ ಕಪಟ ಪ್ರವೃತ್ತಿಯನ್ನು ಮೆರೆದರು, ಅಹಿಂಸಾತ್ಮಕ ಚಿಂತನೆಯಿಂದಲೇ ದೇಶಾದ್ಯಂತ ಪರಿವರ್ತನೆ ಮಾಡಿದ ಮಾಹನ್ ಸಂತ ಗಾಂಧೀಜಿಯ ಅನುಯಾಯಿಗಳಲ್ಲಿ ಹಿಂಸಾತ್ಮಕ ಚಿಂತನೆ ಮುಡಿಸಿದವರು ನೆಹರ್ ನೆನಪಿಡಿ,


ಈ ಗಾಂಧಿ ಹತ್ಯೆಗೂ ಸಾವರ್ಕರ್ ಗೂ ಸಂಬಂಧವಿಲ್ಲ ನೆಹರು ಸುಖಾ ಸುಮ್ಮನೆ ಸೇಡು ತೀರಿಸಿಕೊಳ್ಳ ಬೇಡಿ ಎಂದು ನೆಹರೂ ಕ್ಯಾಬಿನೆಟ್ ನ ಲಾ ಮಿನಿಸ್ಟರ್ ಅಂಬೇಡ್ಕರ್ ಹೇಳಿ ಪತ್ರ ಬರೆದಾಗ ಅವರ ಪತ್ರವನ್ನು ತಿರಸ್ಕರಿಸಿ 1 ವರ್ಷ ಜೈಲು ಶಿಕ್ಷೆ ವಿಧಿಸಿದರು.ಅಸತ್ಯಕ್ಕೆ ಸತ್ಯ ತಲೆಬಾಗಲಿಲ್ಲ, ಸತ್ಯಕ್ಕೆ ಕೊನೆಗೂ ಜಯವಾಯಿತು, ಆತ್ಮಚರಣ್ ಜಡ್ಜ್ "ಸಾವರ್ಕರ್ ನಿಷ್ಕಳಂಕ ಗೌರವದಿಂದ ಬಿಡುಗಡೆ ಮಾಡಿ ಎಂದು ತೀರ್ಪು ನೀಡಿದರು".ಭೋಪಾಟ್ಕರ್ ಈ ವಿಷಯದಲ್ಲಿ ಎಲ್ಲರನ್ನೂ ಕೋರ್ಟ್ ಗೆ ಏಳಿತ್ತೇನೆ ಎಂದಾಗ ಸಾವರ್ಕರ್ "ನೆಹರೂ ನನ್ನ ಪ್ರಧಾನಿ ಭಾರತ ನನ್ನ ದೇಶ" ಎಂದು ಭೋಪಾಟ್ಕರ್ ನ್ನು ಶಾಂತಿಗೊಳಿಸಿದರು.ಈಗಲೂ ಕೆಲ ನೆಹರೂ ಅನುಯಾಯಿಗಳು ಸಾವರ್ಕರ್ ಬಗ್ಗೆ ಸುಖಾಸುಮ್ಮನೆ ಇಲ್ಲ ಸಲ್ಲದ ಹೇಳಿಕೆಯನ್ನು ನೀಡಿ ವಿವಾದ ಸೃಷ್ಟಿಸುತ್ತಾ ಇದ್ದಾರೆ, ನೆನಪಿರಲಿ ಸತ್ಯ ಎಂದಿಗೂ ಅಸತ್ಯಕ್ಕೆ ತಲೆ ಬಾಗುವುದಿಲ್ಲ ನಿಮ್ಮ ಅಪಪ್ರಚಾರವೇ ನಮಗೆ ಸವಾರ್ಕರ್ ರ ನೈಜ ಇತಿಹಾಸವನ್ನು ಜನತೆಯ ಮುಂದೆ ಪರಿಚಯಿಸಲು ಸಹಾಯಕವಾಗಿದೆ.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷ್ ಸರ್ಕಾರ ಹೆಚ್ಚು ಹೆದರಿದ್ದು ಸಾವರ್ಕರ್ ಗೆ, ಅಷ್ಟೇ ಅಲ್ಲ ದೇಶಕ್ಕಾಗಿ ಹೆಚ್ಚು ತ್ಯಾಗ ಮಾಡಿದವರು ಸಾವರ್ಕರ್ ನೆನಪಿಡಿ,


ೲ ಗಳಿಸಿದ್ದ ಬ್ಯಾರಿಸ್ಟರ್ ಪಡವಿಯಿಂದ ವಂಚಿತರಾದ ಮೊದಲ ನ್ಯಾಯಮೇತ ಸಾವರ್ಕರ್.


ೲ ಕರಿನೀರಿನ ಶಿಕ್ಷೆಯಾದ ನಂತರ ಮಹಾರಾಷ್ಟ್ರ ಯುನಿವರ್ಸಿಟಿ ಅವರ ಬಿ.ಎ. ಡಿಗ್ರಿ ಬಿಟಿಷರ ಅಗ್ರಹದ ಮೇರೆಗೆ ಹಿಂಪಡೆಯಿತು, ಗಳಿಸಿದ್ದ ಡಿಗ್ರಿ ಪಡವಿಯಿಂದ ವಂಚಿತರಾದ ಮೊದಲ ಪಧವಿದರ.


ೲ ಪ್ರಕಟನಾ ಪೂರ್ವಾದಲ್ಲಿ ಎರಡು ಎರಡು ದೇಶದಲ್ಲಿ ನಿಷೇಧಕ್ಕೊಳಕಾದ ಲೇಖಕ ಸಾವರ್ಕರ್.


ೲ ಅಂತಾರಾಷ್ಟ್ರೀಯ ನ್ಯಾಯಾಲಯ ಪ್ರವೇಶಿಸಿದ ಮೊದಲ ಸ್ವಾತಂತ್ರ್ಯ ಸೇನಾನಿ ಸಾವರ್ಕರ್.


ೲ ಹಡಗಿನ ಪುಟ್ಟರಂಧ್ರದ ಮೂಲಕ ಪಲಾಯನ ಮಾಡಿದ ಕ್ರಾಂತಿ ಜ್ಯೋತಿ ಸಾವರ್ಕರ್.


ೲ ಎರಡೂ ಜೀವಾವಧಿ ಶಿಕ್ಷೆ ಅನುಭವಿಸಿದ ಅಪ್ರತಿಮ ಹೋರಾಟಗಾರ ಸಾವರ್ಕರ್.


ೲ ಪೆನ್ನು ಪೇಪರ್ ಬಳಕೆಗೆ ಬಂದ ನಂತರ ಪೆನ್ನು ಪೇಪರ್ ಬಳಸದೇ ಜೈಲಿನ ಗೋಡೆಯ ಮೇಲೆ ಕೃತಿಗಳನ್ನು ರಚಿಸಿದ ಲೋಕೋತ್ತರ ಕವಿ ಸಾವರ್ಕರ್.


ೲ ಸ್ವಾತಂತ್ರ್ಯ ನಂತರ ಕೆಲವು ಕಪಟ ಪ್ರವೃತ್ತಿಯವರಿಂದ ಜೈಲು ಶಿಕ್ಷೆಅನುಭವಿಸಿದ ಸಾವರ್ಕರ್.

ಈ ಲೇಖನ ಸಾವರ್ಕರ್ ರ ಜನ್ಮದಿನದ ಪ್ರಯುಕ್ತ ದೇಶಭಕ್ತ ಸಮೂಹಕ್ಕೆ ಅರ್ಪಿಸಿದ್ದೇನೆ.- ಕೆ. ರಾಘವೇಂದ್ರ ಭಟ್

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post