ಮೂಡುಬಿದರೆ: ನಾರಾಯಣಾನಂದ ಸರಸ್ವತಿ ಸ್ವಾಮಿ ಟ್ರಸ್ಟ್ ವತಿಯಿಂದ ನೀಡಲಾಗುವ ವಿಪ್ರ ಭೂಷಣ ಪ್ರಶಸ್ತಿ ಈ ಬಾರಿ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಪರಾಡ್ಕರ್ ಅವರಿಗೆ ಲಭಿಸಿದೆ.
ಮೇ 5ರಂದು ಸಂಜೆ 4 ಗಂಟೆಗೆ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಮ್ಯಾನೇಜಿಂಗ್ ಟ್ರಸ್ಟಿ ಯಜ್ಞೇಶ್ವರ ಭಟ್ ತಿಳಿಸಿದ್ದಾರೆ.
ಕಟೀಲು ಆನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಆಶ್ವತ್ಥಪುರ ಕ್ಷೇತ್ರ ಆಡಳಿತ ಮೊಕ್ತೇಸರ ಎಲ್.ವಿ. ರಘುನಾಥ್ ಭಟ್, ಟ್ರಸ್ಟಿ ಕಿರಣ್ ಮಂಜನಬೈಲ್, ಉಡುಪಿ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚೈತನ್ಯ ಎಂ.ಜಿ., ಸಂಸ್ಕೃತ ವಿದ್ವಾಂಸ ಎ.ವಿದ್ಯನಾಥ ಶಾಸ್ತ್ರಿ ಜೋಶಿ ಭಾಗವಹಿಸುವರು.
ಬಳಿಕ ಕದ್ರಿ ಯಕ್ಷ ಕೂಟ ವತಿಯಿಂದ ರಾಮಚಂದ್ರ ಭಟ್ ಎಲ್ಲೂರು ನಿರ್ದೇಶನದಲ್ಲಿ, ಜಿತೇಂದ್ರ ಕುಂದೇಶ್ವರ ಸಂಯೋಜನೆಯಲ್ಲಿ "ಶಶಿಪ್ರಭಾ ಪರಿಣಯ" ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ವೇದಮೂರ್ತಿ ಶಿವಾನಂದ ಕೆ. ನೇತೃತ್ವದಲ್ಲಿ ಪ್ರಶಸ್ತಿ ಪುರಸ್ಕೃತರ ಪುರ ಮೆರವಣಿಗೆ ನಡೆಯಲಿದೆ. ರಾಜೇಶ್ವರ ಭಟ್, ವಿಷ್ಣು ಮೂರ್ತಿ ಭಟ್, ಛಾಯಾಪತಿ ಕಂಚಿಬೈಲ್ ಭಾಗವಹಿಸುವರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ