ರಾಷ್ಟ್ರೀಯ ಚಿಂತನೆಗಳ ಮುಖೇನ ಸದೃಢ ದೇಶ ನಿರ್ಮಾಣ ಸಾಧ್ಯ: ಎಸ್. ಆರ್. ರಂಗಮೂರ್ತಿ

Upayuktha
0

ವಿವೇಕಾನಂದ ಕಾಲೇಜಿನಲ್ಲಿ ‘ಪ್ರೇರಣಾ’ ಪ್ರಾಧ್ಯಾಪಕರ ಪುನಶ್ಚೇತನ ಕಾರ್ಯಾಗಾರ ಉದ್ಘಾಟನೆ



ಪುತ್ತೂರು: ಹಲವರ ಸ್ವಾರ್ಥಕ್ಕೆ ಅಖಂಡ ಭಾರತ ಬಲಿಯಾಗುತ್ತಿದ್ದು, ಭವಿಷ್ಯದ ದಿನಗಳಲ್ಲಿ ರಾಷ್ಟ್ರೀಯತೆಯನ್ನು ಉಳಿಸುವತ್ತ ಶ್ರಮ ವಹಿಸಬೇಕಾಗಿದೆ. ನೂರಾರು ವರ್ಷಗಳ ಹೋರಾಟದಿಂದ ಸಮಾಜ ವಿಚಲಿತಗೊಂಡಿದ್ದು ಸದೃಢ ದೇಶದ ನಿರ್ಮಾಣ ರಾಷ್ಟ್ರೀಯ ಚಿಂತನೆಯ ಮುಖೇನ ನಡೆಯಲು ಸಾಧ್ಯ. ಈ ಕಾರ್ಯ ರಾಷ್ಟೀಯ ಸ್ವಯಂ ಸೇವಕ ಸಂಘಟನೆಯಿಂದ ಸಾಧ್ಯವಾಗುತ್ತಿದೆ ಎಂದು ಕೆ.ಪಿ.ಎಸ್.ಸಿ ಮಾಜಿ ಸದಸ್ಯ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪೂರ್ವಾಧ್ಯಕ್ಷ ಎಸ್. ಆರ್. ರಂಗಮೂರ್ತಿ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಆಶ್ರಯದಲ್ಲಿ ಆಯೋಜಿಸಲಾದ ಪ್ರೇರಣಾ ಎಂಬ ಪ್ರಾಧ್ಯಾಪಕರಿಗೆ ಪುನಶ್ವೇತನ ನೀಡುವ 2 ದಿನದ ಕಾರ್ಯಾಗಾರ ಉದ್ಘಾಟಿಸಿ ಸೋಮವಾರ ಮಾತನಾಡಿದರು.


ದಾರ್ಶನಿಕ ತತ್ವಗಳನ್ನು ನಂಬಿಕೊಂಡು ಬದುಕುತ್ತಿರುವ ಭಾರತದ ಬಗ್ಗೆ ವಿದೇಶಿ ನೆಲದಲ್ಲೂ ಮಹತ್ವದ ಸ್ಥಾನವಿದೆ. ದೇಶದ ಮೂಲ ಸಂಸ್ಕøತಿಯ ಬಗ್ಗೆ ತಿಳಿದುಕೊಂಡು ರಾಷ್ಟೀಯ ಚಿಂತನೆಯ ನೆಲೆಗಟ್ಟಿನಲ್ಲಿ ವಿದ್ಯಾರ್ಜನೆ ನೀಡುತ್ತಿರುವ ವಿವೇಕಾನಂದ ಸಂಸ್ಥೆ ಹಲವು ವರ್ಷಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆ ಇನ್ನಷ್ಟು ರಾಷ್ಟ್ರ ಭಕ್ತರಿಗೆ ಪ್ರೇರಣೆಯಾಗಲಿ ಎಂದು ಅಭಿಪ್ರಾಯಪಟ್ಟರು.


ವಿವೇಕಾನಂದ ಪದವಿ ಕಾಲೇಜಿನ ಅಧ್ಯಕ್ಷ ಪೆÇ್ರ. ಶ್ರೀಪತಿ ಕಲ್ಲೂರಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿಚಲಿತ ಮನಸ್ಥಿತಿ ಗಳನ್ನು ಸರಿದಾರಿಗೆ ತಂದಾಗ ಶಿಕ್ಷಕ ವೃತ್ತಿ ಸಾರ್ಥಕವೆನಿಸುತ್ತದೆ. ಬದಲಾದ ಪರಿಸ್ಥಿತಿಯಲ್ಲಿ  ಶಿಕ್ಷಕರು ವಿಶಾಲ ದೃಷ್ಟಿಕೋನ ಹೊಂದಬೇಕು. ವಿದ್ಯಾರ್ಜನೆ ಕೇವಲ ಬೋಧನೆಯಲ್ಲ ಅದು ಪ್ರೇರಣೆಯಾಗಬೇಕು. ಶಿಕ್ಷಕರು ಕೆಲಸದ ಚೌಕಟ್ಟಿನಿಂದ ಹೊರಬಂದು ವಿಸ್ತಾರವಾದ ಯೋಚನೆಗಳು ಅವರಲ್ಲಿ ಮೂಡಿದಾಗ, ಅದು ವಿದ್ಯಾರ್ಥಿಗಳ ಅಭಿವೃದ್ದಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣಭಟ್ ಕೆ.ಎಂ ಮಾತನಾಡಿ ಶೈಕ್ಷಣಿಕ ವ್ಯವಸ್ಥೆ ಹಲವು ಹೊಸತನಗಳಿಗೆ ಸಾಕ್ಷಿಯಾಗುತ್ತಿದ್ದು ಈ ಬದಲಾವಣೆಗಳಿಗೆ ಶಿಕ್ಷಕರು ಒಗ್ಗಿಕೊಳ್ಳಬೇಕಾಗಿದೆ. ವಿವಿಧ ಮನೋಭಾವಗಳನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಎದುರಿಸುವಾಗ ಅಧ್ಯಾಪಕರು ಆಂತರಿಕವಾಗಿ  ಸಮರ್ಥರಿರಬೇಕು. ಇಂತಹ ಕಾರ್ಯಗಳು 'ಪ್ರೇರಣಾ'ದಂತಹ ತರಬೇತಿ ಮುಖೇನ ಸಾಧ್ಯ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ವೇದಿಕೆಯಲ್ಲಿ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪೆÇ್ರ. ವಿಷ್ಣು ಗಣಪತಿ ಭಟ್  ಸ್ವಾಗತಿಸಿ, ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ. ಎಸ್. ವಂದಿಸಿದರು. ಉಪನ್ಯಾಸಕಿ ವರ್ಷ ಮೊಳೆಯಾರ್ ಪ್ರಾರ್ಥಿಸಿ, ಕನ್ನಡ ವಿಭಾಗದ ಉಪನ್ಯಾಸಕ ಡಾ.ಮನಮೋಹನ ಕಾರ್ಯಕ್ರಮ ನಿರೂಪಿಸಿದರು.


ಮೊದಲನೇ ದಿನದ ಗೋಷ್ಠಿ

ಮೊದಲನೇ ದಿನದ ಗೋಷ್ಠಿಯ ಮೊದಲ ಅವಧಿಯಲ್ಲಿ ‘ರಾಷ್ಟ್ರನಿರ್ಮಾಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರ' ಎಂಬ ವಿಷಯದ ಕುರಿತು ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಹಾಗೂ ಮಂಗಳೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಮುಖ್ ಎಚ್. ಅಚ್ಯುತ ನಾಯಕ್ ಸಂವಾದ ನಡೆಸಿದರು. ಎರಡನೇ ಅವಧಿಯಲ್ಲಿ ‘ಪದವಿ ವಿದ್ಯಾರ್ಥಿಗಳ ಮನೋಧರ್ಮ' ಎಂಬ ವಿಷಯದ ಕುರಿತು ಮನಃಶಾಸ್ತ್ರಜ್ಞ ಡಾ. ವಿರೂಪಾಕ್ಷ ದೇವರಮನೆ ವಿಚಾರ ಮಂಡಿಸಿದರು.


ಎರಡನೇ ದಿನದ ಗೋಷ್ಠಿ:

‘ಶಿಕ್ಷಕರ ಸಂವಹನ ಕೌಶಲಗಳು ಮತ್ತು ತರಗತಿ ನಿರ್ವಹಣೆ' ವಿಷಯದ ಕುರಿತು ವಿವೇಕಾನಂದ ಪದವಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್, ‘ಶಿಕ್ಷಕರ ವೃತ್ತಿಯ ಮೌಲ್ಯಗಳು ಮತ್ತು ತಾತ್ವಿಕತೆ' ಎಂಬ ವಿಷಯದ ಕುರಿತು ಮಂಗಳೂರು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ ವಿಷಯ ಮಂಡಿಸಲಿದ್ದಾರೆ. ಬೋಧನೆಯ ವಿಧಾನಗಳ ಕುರಿತು ಪುತ್ತೂರು ಸಂತ ಫಿಲೋಮಿನಾ ಕಾಲೇಜೀನ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಎ.ಪಿ.ರಾಧಾಕೃಷ್ಣ, ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಡಾ. ಉಮ್ಮಪ್ಪ ಪೂಜಾರಿ, ಬೆಂಗಳೂರಿನ ಕುವೆಂಪು ಭಾಷಾಭಾರತಿ ಅಧ್ಯಕ್ಷ ಡಾ. ಗಿರೀಶ್ ಭಟ್ ಅಜಕ್ಕಳ ವಿಚಾರ ಮಂಡಿಸಲಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top