ಭರವಸೆಯ ಬೆಳಕಿನ ಅನಾವರಣ- 'ಸತ್ಸಂಗ ಸಂಪದ'

Upayuktha
0

- ಕೃತಿ: ಸತ್ಸಂಗ ಸಂಪದ 

- ಲೇಖಕರು: ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಸಂಸ್ಕೃತಿ ಚಿಂತಕರು 

- ಪ್ರಕಾಶಕರು: ಪ್ರಣವ ಮೀಡಿಯಾ ಹೌಸ್ ಪ್ರಕಾಶನ, ಬೆಂಗಳೂರು 97393 69621

- ಬೆಲೆ : ರೂ.200/-

- ಪುಟ: 248



ಇಂದಿನ ಯುವ ಪೀಳಿಗೆಯನ್ನು ಬೆಳಕಿನ ದಾರಿಯತ್ತ ಸರಿಸುವ ವ್ಯಕ್ತಿತ್ವ ವಿಕಸನದ ಚಿಂತನಗಳ ಗುಚ್ಛವಿದು. ಸಂಯುಕ್ತ ಕರ್ನಾಟಕದಲ್ಲಿ ನಿತ್ಯಾಂಕಣವಾಗಿ ಪ್ರಕಟವಾಗಿ ಸಾಕಷ್ಟು ಮನಗಳನ್ನು ತಟ್ಟಿದ ಬರಹಗಳಿವು. ಇದೀಗ ಪುಸ್ತಕ ರೂಪದಲ್ಲಿ ಸಾಕಾರಗೊಂಡಿವೆ. ಅವರಿಗೆ ದೊರೆತ ಓದುಗರ ಪ್ರೋತ್ಸಾಹ ಅಪರಿಮಿತ. ವೇದ ಶಾಸ್ತ್ರ ಪುರಾಣಗಳ ಇತಿಹಾಸ ಸಾಹಿತ್ಯಗಳ ಬೆಳಕು ಇಲ್ಲಿ ಹರಡಿದೆ. ವಿವಿಧ ವಿಷಯಗಳ ಮೇಲೆ ವಿಚಾರಪೂರ್ಣ ಬರಹಗಳು ಇಲ್ಲಿನ ವೈಶಿಷ್ಟ್ಯ. ಅಧ್ಯಯನದ ಹರವು, ಸರಳ ನಿರೂಪಣೆ ಮುಪ್ಪರಿಗೊಂಡು ಭಾರತೀಯ ಆಧ್ಯಾತ್ಮಿಕ ಚೇತನಕ್ಕೆ ನೀಡಿದ ಬೆರಗಿನ ಬೆಳಕಿದು. ಋಜು ಮಾರ್ಗದತ್ತ ಸಾಗಿಸುವ ಭಾವದೀಪ್ತಿಯು ಇಲ್ಲಿ ಪ್ರತಿ ಪುಟಗಳಲ್ಲಿ ನಮ್ಮನ್ನು ಮುನ್ನಡೆಸುತ್ತದೆ.


ಪ್ರಕಟಣೆಯ ವಿನ್ಯಾಸದ ದೃಷ್ಟಿಯಿಂದ ಇದೊಂದು ವಿಶಿಷ್ಟವಾದ ಹೊತ್ತಿಗೆ. ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯ ರಾಮಾಯಣ, ಮಹಾಭಾರತ, ಭಗವದ್‍ಗೀತೆ, ಉಪನಿಷತ್ತು ಉನ್ನತ ಆದರ್ಶಗಳನ್ನು ಮೌಲ್ಯಗಳನ್ನು ಈ ಕೃತಿ ಎತ್ತಿ ಹಿಡಿಯುತ್ತದೆ. ಉದಾರವಾದ ಅಂತದೃಷ್ಟಿಯ ಅನ್ವೇಷಣೆಯ ಭಾರತೀಯ ಸಂಸ್ಕøತಿಯ ಜೀವನಾಡಿ ಎಂಬುದನ್ನು ಸಮರ್ಥವಾಗಿ ಪ್ರತಿಪಾದಿಸುತ್ತದೆ. ಪ್ರತಿಯೊಬ್ಬ ಭಾರತೀಯನು ಮೌಲ್ಯಾಸಕ್ತ ವಿಶ್ವಮಾನವನೂ ಅವಶ್ಯವಾಗಿ ಗಮನಿಸಬೇಕಾದ ಮಾಹಿತಿ ಇಲ್ಲಿ ಆಕರ್ಷಕವಾಗಿ ಬಂದಿದೆ. ಪಾಶ್ಚಾತ್ಯ ಸಂಸ್ಕೃತಿಯ ಆಕರ್ಷಣೆಗಳಲ್ಲಿ ಬಹುವೇಗವಾಗಿ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಸನಾತನವೂ ಶಾಶ್ವತವೂ ಆದ ನಮ್ಮ ಜೀವನ ಮೌಲ್ಯಗಳನ್ನು ಪುನರುಜ್ಜೀವಿಸುವುದು ಹಾಗೂ ಮಕ್ಕಳಲ್ಲಿ ಜೀವನದ ನಿಜವಾದ ಉದ್ದೇಶವನ್ನು ಕಂಡುಕೊಳ್ಳುವ ಪ್ರಚೋದನೆ ನೀಡಿ ಅದನ್ನು ಸಾಧಿಸುವಂತೆ ಪ್ರೇರೇಪಿಸುವುದೇ ಈ ಕೃತಿಯ ಮುಖ್ಯ ಉದ್ದೇಶವಾಗಿದೆ.

- ಸಿಂಧು ಆರ್ದಶ ಹೆಗಡೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top