ವಿವಿ ಕಾಲೇಜು: ಹಳೆ ವಿದ್ಯಾರ್ಥಿಗಳ ಸಂಘದಿಂದ ಬಿಸಿಯೂಟಕ್ಕೆ ರೂ. 75,000 ಕೊಡುಗೆ

Upayuktha
0

ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಹಂಪನಕಟ್ಟೆ ಇಲ್ಲಿನ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕಾರಿ ಸಮಿತಿಯ ಸಾಮಾನ್ಯ ಸಭೆ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.


ಈ ಸಂದರ್ಭದಲ್ಲಿ ಕಾಲೇಜಿನ ಅರ್ಹ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗಾಗಿ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ರೂ. 75,000 ನ್ನು ಸಂಘದ ಅಧ್ಯಕ್ಷ ಕರ್ನಲ್ ಎನ್ ಶರತ್ ಭಂಡಾರಿ ಚೆಕ್ ರೂಪದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅವರಿಗೆ ಹಸ್ತಾಂತರಿಸಿದರು. ಅಲ್ಲದೆ, ಸಂಘದ ವತಿಯಿಂದ ಸುಮಾರು ರೂ. 1,17,000 ಮೌಲ್ಯದ ಜೆರಾಕ್ಸ್ ಯಂತ್ರವನ್ನು ಕಚೇರಿಗೆ ನೀಡಲಾಯಿತು. ವಿವಿಧ ಅಭಿವೃದ್ಧಿ ಯೋಜನೆಗಳಿಗೆ, ವಿಶೇಷವಾಗಿ ಬಿಸಿಯೂಟದ ಯೋಜನೆಗೆ ಸಂಘ ಮೊದಲಿಂದಲೂ ನೀಡುತ್ತಾ ಬಂದಿರುವ ಬೆಂಬಲವನ್ನು ನೆನಪಿಸಿಕೊಂಡ ಕಾಲೇಜಿನ ಪ್ರಾಂಶುಪಾಲರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.  


ಕಾಲೇಜಿನ ಸ್ವಚ್ಛತಾ ಸಿಬ್ಬಂದಿ ಸುಜಾತಾ ಅವರ ಮಗಳ ವಿದ್ಯಾಭ್ಯಾಸಕ್ಕಾಗಿ ವೈಯಕ್ತಿಕ ಧನಸಹಾಯವನ್ನೂ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ಆರ್ ಲೋಹಿದಾಸ್, ರಾಮದಾಸ್ ಗೌಡ ಎಸ್, ಕಾರ್ಯದರ್ಶಿ ಯು ಮೋಹನ್ ರಾವ್, ಕೋಶಾಧಿಕಾರಿ ಡಿ. ಶ್ರೀನಿವಾಸ ನಾಯ್ಕ್, ಜೊತೆ ಕಾರ್ಯದರ್ಶಿ ಜೆ ವಿ ಶೆಟ್ಟಿ, ಸದಸ್ಯರಾದ ಶುಭೋದಯ ಕೂಡ್ಲು, ಸುರೇಶ್ ರಾವ್ ಲಾಡ್ ಕೆ, ಮೋಹನ್ದಾಸ್ ಎನ್ ಕೆ, ವಿಶ್ವನಾಥ್ ಕೋಟೇಕಾರ್, ವಿಶ್ವನಾಥ್ ಕೋಡಿಯಾಲ್ಬೈಲ್, ಹರೀಶ್ ಎಂ, ಧರ್ಮಣ್ಣ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top