ಮಂಗಳೂರಿನಲ್ಲಿ ಎರಡು ದಿನಗಳ ಮೆಗಾ ರಿಟೇಲ್ ಎಕ್ಸ್‌ಪೋಗೆ ಚಾಲನೆ

Upayuktha
0


ಮಂಗಳೂರು: ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಕಾಲ ನಡೆಯುವ ಮೆಗಾ ರೀಟೇಲ್ ಎಕ್ಸ್‌ಪೋ ಇಂದು ಬೆಳಗ್ಗೆ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.


ಜಿಲ್ಲೆಯ ಪ್ರಮುಖ ಬಿಲ್ಡರ್‌ಗಳಲ್ಲಿ ಒಂದಾದ ಮುಡಿಪುವಿನ ಪಾರ್ವತಿ ಪ್ರಾಪರ್ಟೀಸ್‌ನ ಮಾಲೀಕರಾದ ಡಾ. ಗುಣರಂಜನ್ ಮತ್ತು ವಿಜಯ ಸಾಯಿ ಅವರು ದೀಪ ಬೆಳಗಿ ಎಕ್ಸ್‌ಪೋಗೆ ಚಾಲನೆ ನೀಡಿದರು.


ಈ ಎಕ್ಸ್‌ಪೋದಲ್ಲಿ ನಿರ್ಮಾಣ ಉದ್ಯಮದ ಪ್ರಮುಖ ಸಂಸ್ಥೆಗಳಾದ ಲ್ಯಾಂಡ್‌ ಟ್ರೇಡರ್ಸ್‌ ಅಂಡ್ ಡೆವೆಲಪರ್ಸ್‌, ಏಸ್‌ ಪ್ರಮೋಟರ್ಸ್‌ ಅಂಡ್ ಡೆವಲಪರ್ಸ್‌, ಸಿಟಡೆಲ್‌ ಡೆವಲಪರ್ಸ್‌, ಇನ್‌ಲ್ಯಾಂಡ್ ಟ್ರೇಡರ್ಸ್‌, ಭಂಡಾರಿ ಬಿಲ್ಡರ್ಸ್‌, ಪಾರ್ವತಿ ಪ್ರಾಪರ್ಟೀಸ್‌ ಸೇರಿದಂತೆ 20ಕ್ಕೂ ಹೆಚ್ಚು ಉದ್ಯಮಗಳು ಭಾಗಿಯಾಗಿವೆ. ಜತೆಗೆ ಹೋಂಡಾ, ಸುಜುಕಿ ಸೇರಿದಂತೆ ಹಲವು ವಾಹನಗಳ ಮಾರಾಟ ಉದ್ಯಮ ಸಂಸ್ಥೆಗಳು ಈ ಎಕ್ಸ್‌ಪೋದಲ್ಲಿ ತಮ್ಮ ಮಳಿಗೆಗಳನ್ನು ತೆರೆದಿವೆ.


ಕೆನರಾ ಬ್ಯಾಂಕ್‌ ಮಂಗಳೂರು ವೃತ್ತದ ಜನರಲ್ ಮ್ಯಾನೇಜರ್‌ ಎಸ್. ಜಯಕುಮಾರ್ ಡೆಪ್ಯುಟಿ ಜನರಲ್ ಮ್ಯಾನೇಜರ್‌ಗಳಾದ ಶ್ರೀಕಾಂತ್ ವಿ.ಕೆ,, ರಾಘವ ನಾಯ್ಕ್‌, ಎಸ್‌. ಸುಚಿತ್ರಾ ಮತ್ತು ಬ್ಯಾಂಕಿನ ವಿವಿಧ ಶಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಎಕ್ಸ್‌ಪೋ ಉದ್ಘಾಟನೆಯ ವೇಳೆ ಹಾಜರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top