ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಯಶೋಗಾಥೆಯ ಸಚಿತ್ರ ಮಾಹಿತಿ ಗ್ರಂಥದ ಮುಖಪುಟದಲ್ಲಿ ಪಟ್ಲರ ಕೈಯಾಸರೆಯಲ್ಲಿ ಸಂತೃಪ್ತಿಯ ಭಾವದೊಂದಿಗೆ ಹೆಜ್ಜೆ ಇಡುತ್ತಿರುವ ವೃದ್ದ... ಕಾಟುಕುಕ್ಕೆ ಕೊರಗಪ್ಪ ನಾಯ್ಕರು ಇನ್ನಿಲ್ಲ.
ಕಟೀಲು ಮೇಳದಲ್ಲಿ ಅವರು ಸಂಗೀತಗಾರರಾಗಿದ್ದ ಕಾಲದಲ್ಲಿ... ರಂಗಸ್ಥಳದ ಮುಂಬಾಗದಲ್ಲಿ ಬೈರಾಸು ಹಾಸಿ ಕುಳಿತು ಕೇಳಿದ್ದ "ಚಿಕ್ಕ ಪ್ರಾಯದ ಬಾಲೆ..." ಹಾಡು ಈಗಲೂ ಅನುರಣಿಸುತ್ತಿದೆ.
ಮಳೆಗಾಲದಲ್ಲಿ ಮನೆಗೆ ಬರುತ್ತಿದ್ದ ಸಿರಿ ವೇಷ (ಚಿಕ್ಕ ಮೇಳ)ದ ತಂಡದಲ್ಲಿ ಭಾಗವತರಾಗಿ ಅವರು ಬರುತ್ತಿದ್ದಾಗ ಹತ್ತಿರದಲ್ಲಿ ನೋಡಿ, ಮಾತನಾಡಿಸಿದ ನೆನಪು...
ಸಾಂಪ್ರದಾಯಿಕ ಮುಂಡಾಸಿನ ರಾಜ ಗಾಂಭೀರ್ಯದ "ಸಣ್ಣ ಭಾಗವತ"ರಿಗೆ ಶ್ರದ್ದಾಂಜಲಿ.
-ಕದ್ರಿ ನವನೀತ ಶೆಟ್ಟಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ