ಯಕ್ಷಗಾನ ಒಲಿಯಲು ದೇವತಾನುಗ್ರಹ ಬೇಕು: ಗುಂಡಿಲ ಶಂಕರ ಶೆಟ್ಟಿ

Upayuktha
0

ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 9ನೆಯ ಸರಣಿ ಕಾರ್ಯಕ್ರಮ ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ಜರಗಿತು.


ಸಂಮಾನಿಸಲ್ಪಟ್ಟ ಜಿ. ಕೆ. ಭಟ್ ಸೇರಾಜೆ "ಯಕ್ಷಗಾನಕ್ಕೆ ನಾನು ಕೊಟ್ಟದ್ದು ಕಡಿಮೆ ಆದರೆ ಪಡೆದುಕೊಂದದ್ದು ಅತೀ ಹೆಚ್ಚು. ಕುರಿಯ ವಿಠ್ಠಲ ಶಾಸ್ತ್ರಿಯವರ ಅಳಿಯನಾದ ನಾನು ಯಕ್ಷಗಾನದಲ್ಲಿ ವೇಷ ಮಾಡಿದ್ದು ಕೆನರಾ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕನಾದ ಮೇಲೆ ಶಂಕರ್ ಶೆಟ್ಟಿಯವರ ಅಹ್ವಾನದ ಮೇರೆಗೆ ಪ್ರಥಮತ ವೇಷ ಮಾಡಿದೆ. ಇವತ್ತು ನನಗೆ ಮಾಡಿದ ಸಂಮಾನದ ವೇದಿಕೆ ಅತ್ಯಂತ ಪವಿತ್ರವಾದದ್ದು. ಮಹಾಮಾಯೆಯ ಸನ್ನಿಧಾನದಲ್ಲಿ ಸಂಮಾನಿಸಿದ ಸಂಘಕ್ಕೆ ಇನ್ನಷ್ಟು ಕೀರ್ತಿ ಬರಲಿ' ಎಂದು ಹಾರೈಸಿದರು.


ಅಧ್ಯಕ್ಷೀಯ ಭಾಷಣದಲ್ಲಿ ನಿವೃತ್ತ ಪ್ರಾಂಶುಪಾಲ ಗುಂಡಿಲ ಶಂಕರ ಶೆಟ್ಟರು "ಯಕ್ಷಗಾನ ಒಂದು ವಿಶಿಷ್ಟ ಕಲೆ. ಮೊಗೆದಷ್ಟು ಮುಗಿಯದ ವಿಚಾರ ಧಾರೆಯ ಸಾಗರ.ಈ ಕಲೆ ಮೈಗೂಡುವುದು ದೇವರ ಅನುಗ್ರಹ ಇದ್ದವರಿಗೆ ಮಾತ್ರ.ಇಂತಹ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿರುವ ಈ ಸಂಘದ ಕ್ರಮ ಸ್ತುತ್ಯರ್ಹ "ಎಂದರು.


ಅಭಿನಂದನೆಯನ್ನು ಮಾಡಿದ ಮೋಹನ ಬಂಗೇರರು ಜಿ.ಕೆ. ಭಟ್ಟರ ಕಲಾ ವ್ಯವಸಾಯದ ಬಗ್ಗೆ ವಿವರಗಳನ್ನು ನೀಡಿದರು. ಯಕ್ಷಗಾನ ಮಾತ್ರವಲ್ಲದೆ ನಾಟಕ ರಂಗದಲ್ಲಿಯೂ ತೊಡಗಿಸಿಕೊಂಡವರು ಜಿ. ಕೆ. ಭಟ್. ವೃತ್ತಿಯಲ್ಲಿ ಉಪನ್ಯಾಸಕರಾಗಿ ಪ್ರವೃತ್ತಿಯಲ್ಲಿ ಕಲಾ ಕ್ಷೇತ್ರವನ್ನು ಅರಿಸಿಕೊಂಡು ಅಲ್ಲಿಯೂ ಯಶಸ್ಸನ್ನು ಕಂಡವರು. ಇವರಿಗೆ ದೇವರು ಆಯುರಾರೋಗ್ಯವನ್ನು ಕರುಣಿಸಲೆಂದು ಹಾರೈಸಿದರು.


ಮುಖ್ಯ ಅತಿಥಿ ಕಿರಣ್ ಕುಮಾರ್ ಶೆಟ್ಟಿ ಶತಮಾನದ ಹೊಸ್ತಿಲಲ್ಲಿರುವ ವಾಗಿಶ್ವರೀ ಯಕ್ಷಗಾನ ಕಲಾವರ್ಧಕ ಸಂಘಕ್ಕೆ ಶುಭವನ್ನು ಹಾರೈಸಿದರು.


ಶಿವಪ್ರಸಾದ್ ಪ್ರಭು ಸ್ವಾಗತಿಸಿದರು. ಶ್ರೀಮತಿ ಶೋಭಾ ಐತಾಳ್ ಸನ್ಮಾನ ಪತ್ರವನ್ನು ಓದಿದರು. ಸಂಜಯ ಕುಮಾರ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ ಕಾಮತ್, ಶಿವಾನಂದ ಪೆರ್ಲಗುರಿ, ಅಶೋಕ ಬೋಳೂರ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ "ಖರಾಸುರ ವಧೆ" ತಾಳಮದ್ದಳೆ ಜರಗಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Views 2143

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top