ಉಜಿರೆ: ಶ್ರೀ ಧ. ಮಂ ಪದವಿ ಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗ ವಿದ್ಯಾರ್ಥಿ ಪರಿವರ್ತನಾ ಕಾರ್ಯಾಗಾರವನ್ನು ಮೇ 26ರಂದು ಏರ್ಪಡಿಸಿದೆ. ಕಾರ್ಯಕ್ರಮ ಐಸಿಟಿ ಅಕಾಡಮಿ ಮತ್ತು ಡಿ ಎಕ್ಸ್ ಸಿ ಸಹಯೋಗದಲ್ಲಿ 10 ದಿನಗಳ ಕಾಲ ನಡೆಯಲಿದ್ದು, ಕಾರ್ಯಕ್ರಮವನ್ನು ವಿಶ್ವ ಮಾನವ ಸಂಪನ್ಮೂಲ ಮಂಡಳಿಯ ಮಾನ್ಯತೆ ಪಡೆದ ಕೌಶಲ್ಯ ತರಬೇತುದಾರ ದಿಲೀಪ್ ಮಲ್ಲ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿ ಮಂಗಳೂರಿನ ಐಸಿಟಿ ಅಕಾಡಮಿಯ ಸಂಪರ್ಕ ಅಧಿಕಾರಿ ರೋಹಿತ್ ಕಜವ ಐಸಿಟಿಯ 7 ಮುಖ್ಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿ ಸಬಲಿಕರಣವೂ ಒಂದು. ವಿದ್ಯಾರ್ಥಿಗಳಲ್ಲಿ ಸಂವಹನ, ಸಮಯ ನಿರ್ವಹಣೆ ಮತ್ತು ಗ್ರಹಿಕೆಯ ಕೌಶಲ್ಯ ಹೆಚ್ಚಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ವಾಣಿಜ್ಯ ವಿಭಾಗದ ಆಯ್ದ 100 ವಿದ್ಯಾರ್ಥಿಗಳಿಗೂ ಕೆಲಸ ಸಿಗುವಂತಾಗಲಿ ಎಂದರು.
ನಂತರ ಪ್ರಾಂಶುಪಾಲ ಡಾ. ಉದಯಚಂದ್ರ ಕಲಿಕೆ ಮತ್ತು ಗಳಿಕೆ ಒಂದಕ್ಕೊಂದು ಹೊಂದಿಕೊಂಡಿವೆ. ಅಂಕಕ್ಕಿಂತ ಕೌಶಲ್ಯ ಗಳಿಸಿ. ನಿಮ್ಮ ಅವಶ್ಯಕತೆ ಮತ್ತು ಭವಿಷ್ಯದ ಬಗ್ಗೆ ಸೂಕ್ತ ಆಲೋಚನೆ ಹೊಂದಿರಿ ಎಂದು ಕಿವಿ ಮಾತು ಆಡಿದರು.
ಬಳಿಕ ಮಾತನಾಡಿದ ವಾಣಿಜ್ಯ ವಿಭಾಗದ ಡೀನ್ ಮತ್ತು ಬಿಬಿಎ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶಕುಂತಲಾ ಉದ್ಯೋಗ ನೀಡುವವವರ ವಿವಿಧ ಅಪೇಕ್ಷೆಗಳನ್ನು ಪೂರೈಸಬೇಕಾದರೆ ಕೌಶಲ್ಯ ವೃದ್ಧಿ ಅಗತ್ಯ. ನಿಮ್ಮ ಮತ್ತು ಉದ್ಯೋದ ಬೇಡಿಕೆಯನ್ನರಿಯಿರಿ ಎಂದರು.
ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ ಸ್ವಾಗತಿಸಿ, ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಸಂಯೋಜಕ ಹರೀಶ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ಭಟ್ ನಿರೂಪಿಸಿ ಶ್ರದ್ದಾ ಮತ್ತು ತಂಡ ಪ್ರಾರ್ಥಿಸಿದರು. ಅಧ್ಯಾಪಕರಾದ ಸಚಿನ್ ಹೆಬ್ಬಾರ್, ಪವಿತ್ರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ