||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಚಯ: ಹಿರಿಯ ಸಾಹಿತಿ, ವ್ಯಕ್ತಿತ್ವ ವಿಕಸನ ಪ್ರವಚನಕಾರ ಮಠ ಶಂಕರ ಭಟ್

ಪರಿಚಯ: ಹಿರಿಯ ಸಾಹಿತಿ, ವ್ಯಕ್ತಿತ್ವ ವಿಕಸನ ಪ್ರವಚನಕಾರ ಮಠ ಶಂಕರ ಭಟ್


ಹಿರಿಯರಾದ ಮಠ ಶಂಕರ ಭಟ್ ಅವರು ಬರೆದ ಕನ್ನಡ ಕಾದಂಬರಿ 'ದೊಂಬಿ' ಯನ್ನು ಸರಣಿ ರೂಪದಲ್ಲಿ ಉಪಯುಕ್ತ ನ್ಯೂಸ್ ಪ್ರಕಟಿಸುತ್ತಿದೆ.

ಅದಕ್ಕೆ ಮುನ್ನ ಲೇಖಕರ ಪರಿಚಯ:

ಶ್ರೀಯುತ ಮಠ ಶಂಕರ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದವರು. ಕುರ್ನಾಡು-ಮುಡಿಪುವಿನ ಬೋರ್ಡ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಪಡೆದು ಬಳಿಕ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಪಡೆದರು.


ಕೇನ್ಟ್ರೆಡ್ಸ್‌ ಪ್ರೈವೇಟ್ ಲಿಮಿಟೆಡ್ ಮಂಗಳೂರು ಸಮಸ್ಥೆಯಲ್ಲಿ ಉದ್ಯೋಗಿಯಾಗಿ, ರಾಜ್ಯ ಬಹಾಯಿ ಮಂಡಳಿ ಕಾರ್ಯಕಾರಿ ಕಾರ್ಯದರ್ಶಿಯಾಗಿ ಅನುಭವ ಹೊಂದಿದವರು. ಒಂದು ವರ್ಷ ಕಾಲ ಚೀನಾದಲ್ಲಿ ಆಂಗ್ಲ ಭಾಷೆಯ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರ.


ಬಳಿಕ ವೃತ್ತಿಯಲ್ಲಿ ಅಧ್ಯಾಪಕರಾಗಿ ಹಲವು ಶಾಲೆಗಳಲ್ಲಿ ಕಾರ್ಯನಿರ್ವಹಿಸಿರುವ ಶಂಕರ ಭಟ್ಟರು ಪ್ರಸ್ತುತ 73 ವರ್ಷದವರಾಗಿದ್ದು ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಆತ್ಮ ವಿಕಸನದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರವನ ನಡೆಸುತ್ತಿರುವ ಇವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ವ್ಯಕ್ತಿತ್ವ ವಿಕಸನದ ಬಗ್ಗೆ ಹಲವು ಉಪನ್ಯಾಸಗಳನ್ನು ನೀಡಿದ್ದಾರೆ.


ಸಾಹಿತ್ಯದ ಆಸಕ್ತಿಯಿಂದ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕಥೆ, ಕವನಗಳು ಮತ್ತು ಕಾದಂಬರಿಗಳನ್ನೂ ಬರೆದಿದ್ದಾರೆ.


ಪ್ರವಾಸ: ಉಜ್ಬೆಕಿಸ್ತಾನ್, ಕಿರ್ಗಿಸ್ತಾನ್, ಖಜಕಿಸ್ತಾನ, ರಷ್ಯಾ, [ಸೈಬೀರಿಯಾದ ಉಲಾನ್ ಉದೆ, ಜಪಾನ್ ಬಳಿಯ ಯೂಜ್ನಸಖಲಿನ್ ದ್ವೀಪ], ದುಬೈ, ಸಿಂಗಾಪುರ, ಹಾಂಗ್ ಕಾಂಗ್, ಮಕಾವು, ಚೈನಾ, ಶ್ರೀಲಂಕ, ಆಸ್ತ್ರೇಲಿಯಾ ಮತ್ತು ಇಸ್ರೇಲ್ ಮುಂತಾದ ದೇಶ ಸುತ್ತಿದ್ದಾರೆ.


ಸಾಹಿತ್ಯಾಸಕ್ತಿ: ಇಂಗ್ಲಿಷ್ : ಕವನಗಳು: ದಿ ಇಂಗ್ಲಿಷ್ ಲಿಟರೇಚರ್ ಎಂಡ್ ಪೋಯೆಟ್ರಿ

ದಿ ಇಂಗ್ಲಿಷ್ ಪೋಯೆಟ್ರಿ ಇನ್ ಇಂಡಿಯ

ಮ್ಯೂಸಿಂಗ್ಸ್ ಆಫ್ ಎ ಗ್ರೋಸರ್


ಕನ್ನಡ: ಕಾದಂಬರಿಗಳು, ನ್ಯಾನೋ ಮತ್ತು ನೀಳ್ಗತೆಗಳು

ಷಟ್ಪದಿ, ಮುಕ್ತಕಗಳು, ಲಾವಣಿ, ವಚನಗಳು, ನವ್ಯ ಕವಿತೆಗಳು

ಗಝಲ್, ರುಬಾಯಿ ಚುಟುಕುಗಳು, ನಗೆ ಬರಹ, ಪ್ರವಾಸಾನುಭವಗಳು ಇತ್ಯಾದಿ.


ಯುಟ್ಯೂಬರ್: ಭಟ್ ಎಂಡ್ ಶಂಕರ್- ಆಧ್ಯಾತ್ಮಿಕ ತತ್ವವಿಚಾರಗಳಬಗ್ಗೆ ಕನ್ನಡ 

ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಪ್ರವಚನ

120 ಕ್ಕೂ ಹೆಚ್ಚು  ಆತ್ಮೋನ್ನತಿಯ ಬಗೆಗಿನ ಅಶು ಪ್ರವಚನ ಕನ್ನಡದ ವಾಟ್ಸ್ ಆಪ್ ಬಳಗಗಳಲ್ಲಿ ಪ್ರಸಾರ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post