ಬೆಂಗಳೂರು: ಕರುನಾಡ ಗುರುಕುಲ ಶ್ರೀ ಪುರಂದರ ಇಂಟರ್ನ್ಯಾಷನಲ್ ಟ್ರಸ್ಟ್ ವತಿಯಿಂದ ಇದೇ ಮೇ 7 ಶನಿವಾರ ನಾಗಸಂದ್ರ ಮೆಟ್ರೋ ಪಕ್ಕ ವಿಡಿಯ ಪೂರ್ಣಪ್ರಜ್ಞ ಶಾಲೆ ರಸ್ತೆಯ ಎಂಎಸ್ ರಾಮಯ್ಯ ಲೇಔಟ್ ಶಾಸಕರ ಕಚೇರಿಯಲ್ಲಿ 23 ನೇ ವರ್ಷದ ಮಹಿಳಾ ಮತ್ತು ಮಕ್ಕಳ ಸಾಂಸ್ಕೃತಿಕ ಮೇಳ ಹಾಗೂ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು.
ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ರವರು ಕಾರ್ಯಕ್ರಮ ಉದ್ಘಾಟಿಸಿದರು. ಸೌಂದರ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಸಂಸ್ಥಾಪಕ ಮಂಜಪ್ಪನವರು ಕರ್ನಾಟಕ ಸೀನಿಯರ್ ಸಿಟಿಜನ್ ಫೆಡರೇಷನ್‌ನ ಬಾಲಚಂದ್ರನ್ ರವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ ನವರತ್ನಮಾಲಿಕೆ ಸಿಡಿ, ಸವಿಗಾನ ಸಿರಿ- ನವಜೀವನ ಸಂಗಾತಿ ಕಿರು ಗ್ರಂಥ ಬಿಡುಗಡೆಗೊಂಡಿತು. ಸಮಾಜ ಸೇವಕ ಜೈಶಂಕರ್ ಕೆ ಬಿ ನಾಗರಾಜ್, ಬ್ರಾಹ್ಮಣ ಸಭಾದ ಮಂಜುನಾಥ್ ಮುಖ್ಯ ಅತಿಥಿಗಳಾಗಿ ಗಣ್ಯರಾದ ಕೆಎಸ್ ಶ್ರೀಧರ್, ಸಿಎಲ್ ರಾಮಮೂರ್ತಿ, ಸಂಗೀತ ವಿದುಷಿ ಜಲಜಾ ಪ್ರಸಾದ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ಜನಪದ ಗೀತೆ, ಭಾವಗೀತೆ, ವಚನ ಗಾಯನ, ಕಿರುನಾಟಕ, ಭರತನಾಟ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಂಡದ ಸದಸ್ಯರು ನಡೆಸಿಕೊಟ್ಟರು ಎಂದು ಆಯೋಜಕರಾದ ಡಾ. ಸುವರ್ಣ ಮೋಹನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ