|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ಆತ್ಮದ ಸಂಗಾತಿ (ಸೋಲ್ಮೇಟ್)

ಕವನ: ಆತ್ಮದ ಸಂಗಾತಿ (ಸೋಲ್ಮೇಟ್)



ಓ ಮನಸೇ...

ಏನೋ ಮನಸ್ಸು ವಿಚಿತ್ರವೆನಿಸುತಿದೆ

ಕಣ್ಣುಗಳು ಜೋರಾಗಿ ಅಳುತ್ತಿದೆ 

ನೀನೇ ಬೇಕು ಎಂದೆನಿಸಿದೆ

ಹೃದಯದ ಬಡಿತ ನಿನಗಾಗಿ ಕಾಯುತ್ತಿದೆ 

ನೀನೇ ಇಲ್ಲದ ಜೀವನ ನನಗೆ ಸಾಕೆನಿಸಿದೆ

        ಮುಖದಲ್ಲಿ ನಗುವಿಲ್ಲ 

         ಕಣ್ಣೀನಲ್ಲಿ ಕಣ್ಣೀರಿಲ್ಲ

         ಬಯಸುತಿದೆ ನಿನ್ನನ್ನೇ 

          ಈ ಜೀವನ ನಿನ್ನಲ್ಲೇ

  ರಾತ್ರಿ ವೇಳೆಯಲ್ಲಿ ಬೀಳುವ ಕನಸು

     ಮುಂಜಾನೆಯ ಹಗಲು ಗನಸು

          ನಿನ್ನನ್ನೇ ನೆನೆಯುತ್ತಿದೆ...

ಯಾರೂ ಇಲ್ಲದ ಈ ಜೀವನದಲ್ಲಿ

ನೀನು ನನ್ನನ್ನು ಮರೆಮಾಚಿದೆಯಲ್ಲ

ಪ್ರೀತಿಯಾದ ಹೊಸದರಲ್ಲಿ ಎಷ್ಟೊಂದು 

            ಮಮಕಾರದ ನುಡಿ

        ಸೂರ್ಯನು ಬೆಳಗೆ ಮೂಡಿ  

         ಸಂಜೆಯಾದ ಹೊತ್ತಿನಲ್ಲಿ

             ನಮ್ಮ ಹರಟೆಗಳು 

             ಸದಾ ನಗುವಿನಲ್ಲಿ

     ಎಷ್ಟೊಂದು ಪ್ರೀತಿ ಕಾಳಜಿಯು 

       ಮೊದಲನೆಯ ದಿನಗಳಲ್ಲಿ 

                ಕಳೆದನು ನಾ....

              ನಿನ್ನ ನೆನಪಿನಲ್ಲಿ

        ಕಷ್ಟ-ಸುಖ-ದುಃಖಗಳನ್ನು 

          ನಿನ್ನಲ್ಲೆ ಹಂಚಿಕೊಂಡೆ

     ಸಯಾರೂ ಇಲ್ಲದೆ ಇದ್ದರೂ ನೀನು

         ನನ್ನ ಜೊತೆ ಇರುತ್ತಿಯೆಂಬ

             ಭರವಸೆ ಕಟ್ಟಿಕೊಂಡೆ

               ನೀ ಸಿಕ್ಕ ಆ ದಿನ

           ನನ್ನ ಈ ಪುಟ್ಟ ಹೃದಯದ 

                   ಪ್ರಪಂಚಕ್ಕೆ

              ಖುಷಿ ತಂದಾದಿನ

     ನೀನು ನನ್ಧ ಮೇಲಿಟ್ಟಿರುವ ಪ್ರೀತಿ 

              ನಿನ್ನ ಆ ಮುಗ್ಧತೆ

    ನನ್ನನ್ನು ಜೀವನ ಪೂರ್ತಿ ಸಂತೋಷ

                    ಪಡಿಸುತ್ತೆ

      ನಿನ್ನ ಜೊತೆ ಯಾವಗಲೂ ಹರಟೆ 

         ಹೊಡೆದು ಸದಾ ನಿನ್ನ ಜೊತೆ

           ಇರಬೇಕೆಂಬ ಕನಸು

          ಆದಷ್ಟು ಬೇಗ ನನಸಾಗಲಿ

       ಎಂಬ ನಂಬಿಕೆ ಕನಸಾಗಿಯೇ

            ಉಳಿದೇ ಹೋಯಿತು

               ಏನೋ ಗೊತ್ತಿಲ್ಲ...

         ನೀನು ದೂರವಾದರೇನು

           ನನ್ನ ಮನಸ್ಸು ನಿನ್ನನ್ನೇ

              ಕಾಯುತಿದೆ ಸದಾ...

     ಅಷ್ಟೂ ಬೇಗ ಎನಾಯಿತು ನನಗೆ

         ತಿಳಿಯದೆ ದೂರಾದೇ ನೀನು

         ಈ ಬದುಕಿನ ಪಯಣದಲ್ಲಿ

           ನೀನು ಸಿಗದಿದ್ದರೇನಂತೆ

           ಈ ಮನಸ್ಸು ಮಾತ್ರ 

              ನಿನ್ನ ಗುಂಗಿನಲ್ಲಿ 

        ಸದಾ ನಗುತ್ತಿರುತ್ತದೆಯಂತೆ...




- ರಮ್ಯ ಎಂ ಶ್ರೀನಿವಾಸ್, ಕುಪ್ಪಿಲ

ವಿವೇಕಾನಂದ ಕಾಲೇಜ್ ಪುತ್ತೂರು

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم