ಪುಟ್ಟ ಕಂದನ ಸುಂದರ ನಗುವು
ಪಟ್ಟ ಕಷ್ಟದ ನೋವಿನ ಮರೆವು
ಮುದ್ದು ಮುಖವ ನೋಡಲು ಚೆಲುವು
ತುಂಬಿ ಬಂದಿದೆ ಮಮತೆಯ ಒಲವು
ತೊದಲು ನುಡಿಗಳ ಕೇಳಲು ಚಂದ
ಮನದ ಭಾಷೆಯ ಅರಿಯಲು ಅಂದ
ಅಂಬೆಗಾಲಿಕ್ಕುತಾ ಓಡೋಡಿ ಬಂದ
ಮನೆಯ ತುಂಬೆಲ್ಲಾ ಹರುಷ ತಂದ
ಅಪ್ಪ ಅಮ್ಮನ ಕರಪಿಡಿದು ನಡೆಯುವ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಮುಂದೆ ಸಾಗುವ
ಮನದ ಚಿಂತೆ ಕಳೆದು ದೂರ ಮಾಡುವ
ಬಾಲ ಲೀಲೆಗಳಿಂದ ಮೋಡಿ ಮಾಡುವ
ಮನೆ ಮಂದಿಗೆಲ್ಲಾ ಸಂತಸ ನೀಡುವ
ತುಂಟಾಟ ಮಾಡುತ್ತಾ ಜಗವ ಮರೆಸುವ
ಜಗದ ಚೆಲುವ ತಂದು ಮನಸೊರೆಗೊಳ್ಳುವ
ಮುದ್ದು ಕಂದನು ಬಂದು ಮನೆ ಬೆಳಗುವ
-ಡಾ. ವಾಣಿಶ್ರೀ ಕಾಸರಗೋಡು, ಗಡಿನಾಡ ಕನ್ನಡತಿ