ಪುತ್ತೂರು: ಮುಳಿಯ ಸಿಲ್ವೆರಿಯಾ- ಬೆಳ್ಳಿ ಆಭರಣಗಳು ಮತ್ತು ಬೆಳ್ಳಿ ಪರಿಕರಗಳ ಅತ್ಯಮೋಘ ಸಂಗ್ರಹಗಳ ನೂತನ ಮಳಿಗೆ ಮೇ 1ರಂದು ನೆಲ್ಯಾಡಿಯ ದುರ್ಗಾ ಶ್ರೀ ಕಾಂಪ್ಲೆಕ್ಸ್‌ನಲ್ಲಿ ಪ್ರಾರಂಭವಾಗಲಿದೆ.
ಸಂಜೆ 5:30ಕ್ಕೆ ದೀಪೋಜ್ವಲನದೊಂದಿಗೆ ನೂತನ ಮಳಿಗೆ ಉದ್ಘಾಟನೆಯಾಗಲಿದ್ದು, 5 ಅದೃಷ್ಟಶಾಲಿ ಗ್ರಾಹಕರಿಗೆ ಬೆಳ್ಳಿ ನಾಣ್ಯಗಳು, ಹೊಸ ಜೆಎಸ್ಎಪಿ ಸದಸ್ಯತ್ವಕ್ಕೆ ಖಚಿತ ಉಡುಗೊರೆ, ಪ್ರತಿ ಖರೀದಿಗೆ ಬೋನಸ್ ವೋಚರ್ ಹಾಗೂ ಲಕ್ಷಿ ಡ್ರಾದ ಮೂಲಕ 10 ಜನ ಗ್ರಾಹಕರಿಗೆ ಬಹುಮಾನವನ್ನೂ ನೀಡಲಾಗುತ್ತದೆ ಎಂದು ಮುಳಿಯ ಜ್ಯುವೆಲ್ಸ್ ಪ್ರಕಟಣೆ ತಿಳಿಸಿದೆ.
ಇದೇ ಸಂದರ್ಭದಲ್ಲಿ, ಮುಳಿಯ ಜ್ಯುವೆಲ್ಸ್ SAP ಅಡಿಯಲ್ಲಿ ಕಂತು ಕಂತುಗಳಲ್ಲಿ ಚಿನ್ನವನ್ನು ಖರೀದಿಸುವ ಯೋಜನೆಯನ್ನು ಆರಂಭಿಸುತ್ತಿದೆ. ಮಾಸಿಕ ಹೂಡಿಕೆ ಕನಿಷ್ಠ 5,000 ರೂ.ಗಳಿಂದ ಆರಂಭಿಸಿ ಗರಿಷ್ಠ 25,000 ರೂ.ಗಳ ವರೆಗೂ ಹೂಡಿಕೆ ಮಾಡಲು ಅವಕಾಶವಿದೆ. ಈ ಸ್ಕೀಮ್ 12 ತಿಂಗಳ ಅವಧಿಯದ್ದಾಗಿರುತ್ತದೆ.
ಮಾಸಿಕ ಕನಿಷ್ಠ 5,000 ರೂ ಹೂಡಿಕೆ ಮಾಡಿದವರಿಗೆ 12 ತಿಂಗಳ ಬಳಿಕ 12.766 ಗ್ರಾಂ ಚಿನ್ನ ಲಭಿಸುತ್ತದೆ. ಜತೆಗೆ 2,500 ರೂ.ಗಳ ಬೋನಸ್ ಕೂಡ ಲಭ್ಯವಾಗುತ್ತದೆ. ಅದೇ ರೀತಿ ಗರಿಷ್ಠ 25,000 ರೂ ಹೂಡಿಕೆ ಮಾಡುವವರಿಗೆ 12 ತಿಂಗಳಲ್ಲಿ 63.830 ಗ್ರಾಂ ಚಿನ್ನ ಸಂಗ್ರಹಗೊಳ್ಳುತ್ತದೆ. ಜತೆಗೆ 12,500 ರೂ ಬೋನಸ್ ಲಭ್ಯವಾಗುತ್ತದೆ.
ಈ ರೀತಿ ಮಾಸಿಕ 6,000 ರೂ, 7,000 ರೂ, 8,000 ರೂ, 10,000 ರೂ ಮತ್ತು 20,000 ರೂ.ಗಳ ಸ್ಲಾಬ್‌ಗಳಲ್ಲಿ ಹೂಡಿಕೆ ಮಾಡುವ ಇತರ ಅವಕಾಶಗಳಿವೆ.
ಮುಳಿಯ ಜ್ಯುವೆಲ್ಸ್ PIP ಸ್ಕೀಮ್: ಪ್ರಗತಿಯ ಪಥದಲ್ಲಿ ಪಾಲುದಾರ (Partner In Progress) ಯೋಜನೆಯಡಿ ಕನಿಷ್ಠ 75,000 ರೂ ಗಳಿಂದ ಆರಂಭಿಸಿ ಗರಿಷ್ಠ 10 ಲಕ್ಷ ರೂ.ಗಳ ವರೆಗೂ ಹೂಡಿಕೆ ಮಾಡುವ ಅವಕಾಶವಿದೆ. ಚಿನ್ನಾಭರಣಗಳ ಖರೀದಿಗೆ ಮುಂಗಡ ಪಾವತಿಸಿ ಲಾಭ ಪಡೆಯಿರಿ ಎಂಬ ಘೋಷವಾಕ್ಯದೊಂದಿಗೆ ಮುಳಿಯ ಜ್ಯುವೆಲ್ಸ್ ಈ ಯೋಜನೆ ಆರಂಭಿಸಿದೆ.
10 ತಿಂಗಳ ಅವಧಿಯ ಈ ಯೋಜನೆಯಲ್ಲಿ ಕನಿಷ್ಠ 75,000 ರೂ ಹೂಡಿಕೆ ಮಾಡಿದವರಿಗೆ ಕೊನೆಗೆ 16.64 ಗ್ರಾಂ ಚಿನ್ನ ಹಾಗೂ 6,000 ರೂ.ಗಳ ಹೆಚ್ಚುವರಿ ಲಾಭಗಳು ದೊರೆಯುತ್ತವೆ. 1 ಲಕ್ಷ ರೂ ಹೂಡಿಕೆ ಮಾಡುವವರಿಗೆ 8,000 ರೂ.ಗಳ ಹೆಚ್ಚುವರಿ ಲಾಭ ದೊರಕುತ್ತದೆ.
ಇದೇ ಸಂದರ್ಭದಲ್ಲಿ ಸಂಜೆ 4:30ರಿಂದ ಮುಳಿಯ ಗಾನರಥ ವಿಜೇತರಿಂದ ಕರೋಕೆ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಬಳಿಕ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿದೆ.
ಗ್ರಾಹಕರು ಈ ಸದವಕಾಶವನ್ನು ಲಾಭದಾಯಕವಾಗಿ ಬಳಸಿಕೊಳ್ಳುವಂತೆ ಮುಳಿಯ ಜ್ಯುವೆಲ್ಸ್ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಮತ್ತು ಎಂಡಿ ಕೃಷ್ಣ ನಾರಾಯಣ ಮುಳಿಯ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ