ಖೇಲೋ ಇಂಡಿಯಾ ಕ್ರೀಡಾಕೂಟ: ಆಳ್ವಾಸ್‍ಗೆ 7 ಚಿನ್ನ, 6 ಬೆಳ್ಳಿ, 7 ಕಂಚು

Upayuktha
0

6 ಕೂಟ ದಾಖಲೆ | ಸತತ 2ನೇ ಬಾರಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಾಂಪಿಯನ್



ಮೂಡುಬಿದಿರೆ: ಜೈನ್ ಯುನಿವರ್ಸಿಟಿ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಮಂಗಳೂರು ವಿವಿ ಸತತ ಎರಡನೇ ಬಾರಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಮಂಗಳೂರು ವಿವಿಯು 7 ಚಿನ್ನ, 6 ಬೆಳ್ಳಿ, 7 ಕಂಚು ಪದಕಗಳೊಂದಿಗೆ 109 ಅಂಕ ಗಳಿಸಿ ಅಥ್ಲೆಟಿಕ್ ವಿಭಾಗದ  ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ. ಪದಕ ವಿಜೇತ ವಿದ್ಯಾರ್ಥಿಗಳೆಲ್ಲರೂ ಆಳ್ವಾಸ್ ಸಂಸ್ಥೆಯ ಕ್ರೀಡಾಪಟುಗಳು.


ದೇಶದ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ನೀಡುವ 1044 ವಿಶ್ವವಿದ್ಯಾನಿಲಯಗಳ 45,000 ಕಾಲೇಜುಗಳ 11 ಕೋಟಿ 68 ಲಕ್ಷ ವಿದ್ಯಾರ್ಥಿಗಳ ಕ್ರೀಡಾಕೂಟಗಳಲ್ಲಿ ಆಳ್ವಾಸ್ ಸತತವಾಗಿ ಎರಡನೇ ಬಾರಿ ಖೇಲೋ ಇಂಡಿಯಾ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಪುರುಷರ ತಂಡವು 61 ಅಂಕಗಳೊಂದಿಗೆ ಗೆಲುವು ಸಾಧಿಸಿದರೆ, ಮಹಿಳಾ ತಂಡವು 48 ಪಾಯಿಂಟ್‍ಗಳೊಂದಿಗೆ ಚಾಂಪಿಯನ್ ಪಟ್ಟ ಪಡೆದಿದೆ.


ಮಂಗಳೂರು ವಿವಿ ಪ್ರತಿನಿಧಿಸಿದ್ದ ಪುರುಷರ ವಿಭಾಗದಲ್ಲಿ ವಿಘ್ನೇಶ್ 100ಮೀ ಓಟ, 200ಮೀ ಓಟ ಹಾಗೂ 4X100 ರಿಲೇಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ದೇವಯ್ಯ (800ಮೀ ಓಟದಲ್ಲಿ ಬೆಳ್ಳಿ, 4X400ರಿಲೇ ಚಿನ್ನ), ನಿಹಾಲ್ (400 ಮೀ ಓಟ ಬೆಳ್ಳಿ, 4X400 ರಿಲೇಚಿನ್ನ), ಬಸುಕೇಶ್ ಪುನಿಯಾ (ಡಿಸ್ಕಸ್‍ತ್ರೋ ಬೆಳ್ಳಿ), ಅನಿಲ್ ಕುಮಾರ್ (ಉದ್ದಜಿಗಿತ ಬೆಳ್ಳಿ), ಪರಂಜೀತ್ (20ಕಿಮೀ ನಡಿಗೆ ಕಂಚು), ಮಹಾಂತೇಶ್ (400ಮೀ ಓಟ ಕಂಚು, 4X400ಮೀ ರಿಲೇ ಚಿನ್ನ) ತೀರ್ಥೇಶ್ (200ಮೀ ಓಟ ಕಂಚು, 4X100 ರಿಲೇ ಚಿನ್ನ), ಸಿಜಿನ್ (4X100 ಮೀ ರಿಲೇ ಚಿನ್ನ) ಪಡೆದಿದ್ದಾರೆ. 

ಮಹಿಳೆಯರ ವಿಭಾಗದಲ್ಲಿ ಕೆಎಂ. ಲಕ್ಷ್ಮೀ (10000ಮೀ ಓಟ ಚಿನ್ನ), ಕೆಎಂ. ರಾಧಾ (1500ಮೀ ಚಿನ್ನ), ಕರಿμÁ್ಮ ಸನಿಲ್ (ಜಾವೇಲಿನ್ ತ್ರೋ ಬೆಳ್ಳಿ), ಲಿಖಿತ (400ಮೀ ಓಟ ಕಂಚು), ರೇಖಾ (ಶಾಟ್ ಪುಟ್ ಕಂಚು), ಶ್ರುತಿ ಲಕ್ಷ್ಮೀ (ಉದ್ದಜಿಗಿತದಲ್ಲಿ ಕಂಚು), ನವಮಿ (4X100  ರಿಲೇ ಬೆಳ್ಳಿ, ದೇಚಮ್ಮ (4X100 ರಿಲೇ ಬೆಳ್ಳಿ), ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಆ್ಯನ್ ಮರಿಯಾ ಚಿನ್ನದ ಪದಕ ಪಡೆದಿದ್ದಾರೆ.


ದೇಶಿಯ ಕ್ರೀಡೆ ಮಲ್ಲಕಂಬದಲ್ಲಿ ಆಳ್ವಾಸ್ ತಂಡ 5ನೇ ಸ್ಥಾನ ಪಡೆದಿದೆ. ಕ್ರೀಡಾಪಟು ವಿಘ್ನೇಶ್ 2 ಕೂಟ ದಾಖಲೆಗಳೊಂದಿಗೆ, 3 ಚಿನ್ನ ಪಡೆಯುವ ಮೂಲಕ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿದರು.  


ಆಳ್ವಾಸ್ ವಿದ್ಯಾರ್ಥಿಗಳ ನೂತನ ಕೂಟದಾಖಲೆಗಳು

ಕ್ರೀಡಾಕೂಟದ ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಆ್ಯನ್ ಮರಿಯಾ ರಾಷ್ಟ್ರೀಯ ದಾಖಲೆ,  100 ಮೀ ಹಾಗೂ 200 ಮೀ ಓಟದಲ್ಲಿ ಆಳ್ವಾಸ್ ಕಾಲೇಜಿನ ವಿಘ್ನೇಶ್ ನೂತನ ಕೂಟ ದಾಖಲೆ ಮೆರೆದರೆ, ಲಕ್ಷ್ಮೀ 10,000 ಮೀ ಓಟದಲ್ಲಿ, 4X400 ಮೀ ಹಾಗೂ 4X100 ಮೀ ಪುರುಷರ ರಿಲೇಯಲ್ಲಿ ನೂತನ ಕೂಟ ದಾಖಲೆ ಬರೆಯುವ ಮೂಲಕ ಆಳ್ವಾಸ್ ವಿದ್ಯಾರ್ಥಿಗಳಿಂದ ಈ ಬಾರಿಯ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ 6 ಕೂಟ ದಾಖಲೆ ನಿರ್ಮಾಣಗೊಂಡಿದೆ.


ಗೆಲುವಿನ ಹಿಂದಿನ ಶಕ್ತಿ ಆಳ್ವಾಸ್

ಆಳ್ವಾಸ್ ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ಮಂಗಳೂರು ವಿವಿ ಎರಡನೇ ಬಾರಿಯ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಈ ಹಿಂದೆ ಪದಕ ವಿಜೇತರೆಲ್ಲರೂ ಆಳ್ವಾಸ್ ಸಂಸ್ಥೆಯ ಕ್ರೀಡಾದತ್ತು ಸ್ವೀಕಾರದಡಿ ಉಚಿತ ಶಿಕ್ಷಣ ಪಡೆಯುತ್ತಿರುವವರೆನ್ನುವುದು ಗಮನಾರ್ಹ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top