||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ 34ನೇ ವಾರ್ಷಿಕ ವಿಚಾರ ಸಂಕಿರಣ

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ 34ನೇ ವಾರ್ಷಿಕ ವಿಚಾರ ಸಂಕಿರಣಬೆಂಗಳೂರು: ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ 34ನೇ ವಾರ್ಷಿಕ ವಿಚಾರ ಸಂಕಿರಣವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸರವಾಜ ಬೊಮ್ಮಾಯಿ ಅವರು ಶುಕ್ರವಾರ ಉದ್ಘಾಟಿಸಿದರು. ಕಾರ್ಯಕ್ರಮ ಎರಡು ದಿನಗಳ ಕಾಲ ನಡೆಯುತ್ತಿದ್ದು, ಶನಿವಾರ ಸಮಾರೋಪ ನಡೆಯಲಿದೆ.

ಈ ವಿಚಾರ ಸಂಕೀರ್ಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಒಂದು ಸಾವಿರಕ್ಕೂ (1,000) ಹೆಚ್ಚು ಲೆಕ್ಕ ಪರಿಶೋಧಕರು ಭಾಗವಹಿಸುತ್ತಿದ್ದಾರೆ.


ಈ ಎರಡು ದಿನಗಳಲ್ಲಿ ವಿವಿಧ ಚಿಂತಕರು, ಶಿಕ್ಷಣ ತಜ್ಞರು, ನೀತಿ ತಜ್ಞರು, ರಾಜಕಾರಣಿಗಳು ಹಾಗೂ ಇತರ ವೃತ್ತಿ ಬಾಂಧವರು ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದಾರೆ. ಉದ್ಘಾಟನಾ ಮುಖ್ಯ ಭಾಷಣದಲ್ಲಿ ನೀತಿ ತಜ್ಞರಾದ ಡಾ|| ಆರ್. ಸುಬ್ರಮಣ್ಯಂ ಅವರು ಮಾತನಾಡಿದರು. ಗೌರವ ಅತಿಥಿಗಳಾಗಿ ಪ್ರೆಸ್ಟೀಜ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಸಿ. ಎ. ವೆಂಕಟನಾರಾಯಣ ರವರು ಪಾಲ್ಗೊಂಡರು.


ಇನ್ನುಳಿದ ಕಾರ್ಯಕ್ರಮಗಳಲ್ಲಿ ಉದಯ ಹೊಳ್ಳ (ಹಿರಿಯ ವಕೀಲರು), ಎ. ಶಂಕರ್ (ಹಿರಿಯ ವಕೀಲರು), ಸಾಯಿ ದೀಪಕ್ (ವಕೀಲರು), ಡಾ|| ನೀತಿ ಶಿಖಾ, ಡಾ|| ಸಿಎ. ಎನ್. ಸುರೇಶ್, ಕು. ಸೋನು ಭಾಸಿನ, ಶ್ರೀ ಅರ್ಜುನ್ ರಂಗಾ, ಸಿಎ, ಎಫ್. ಆರ್. ಸಿಂಘಿ ಮುಂತಾದವರು ವಿವಿಧ ವಿಷಯಗಳ ಕುರಿತು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. 21ನೇ ತಾರೀಖು ಸಾಯಂಕಾಲ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಇಂಧನ ಹಾಗೂ ಸಂಸ್ಕೃತಿ ಖಾತೆ ಸಚಿವರಾದ ಸುನಿಲ್ ಕುಮಾರ್ ಹಾಗೂ ಖ್ಯಾತ ಕಲಾ ನಿರ್ದೇಶಕರಾದ ಶ್ರೀ ಶಶಿಧರ ಅಡಪ ರವರು ಪಾಲ್ಗೊಳ್ಳಲಿದ್ದಾರೆ, ನಂತರ ಮನರಂಜನಾ ಕಾರ್ಯಕ್ರಮಗಳಲ್ಲಿ ಕುದ್ರೋಳಿ ಗಣೇಶ್‌ ಹಾಗೂ ಕಾರ್ತಿಕ್ ರಾಮನ್ ರವರು ಜನರನ್ನು ರಂಜಿಸಲಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post