ಮಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಪಡೆದಿದ್ದಾರೆ.
ಮಂಗಳೂರಿನ ಗ್ರಾಮೀಣ ಭಾಗದ ಮುಡಿಪುವಿನಲ್ಲಿ ಇರುವ ಸೂರಜ್ ಸಮೂಹದ ಜ್ಞಾನದೀಪ ಪ್ರೌಢಶಾಲೆಯ ವಿದ್ಯಾರ್ಥಿನಿ ಬ್ಲೆನಿಶಾ ಕುಟಿನ್ಹಾ 625ಕ್ಕೆ 624 ಅಂಕಗಳನ್ನು (ಶೇ 99.84) ಗಳಿಸಿ ರಾಜ್ಯದಲ್ಲೇ ಎರಡನೇ ಸ್ಥಾನಿಯಾಗಿ ಆಗಿ ಹೊರಹೊಮ್ಮಿದ್ದಾಳೆ. ಈಕೆ ಕನ್ನಡದಲ್ಲಿ 125ಕ್ಕೆ 124 ಅಂಕಗಳನ್ನು ಪಡೆದಿದ್ದು, ಉಳಿದ ಎಲ್ಲಾ ವಿಷಯಗಳಲ್ಲಿ (ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ) ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾಳೆ.
ಈಕೆಯ ಸಾಧನೆಗೆ ಸೂರಜ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಮಂಜುನಾಥ ರೇವಣಕರ್ ಅವರು ಮೆಚ್ಚುಗೆ ಸೂಚಿಸಿ ಸಂಸ್ಥೆಗೆ ಹೆಮ್ಮೆ ತಂದಿದ್ದಾಳೆ ಎಂದು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈಕೆ ತನ್ನ ಪಿಯುಸಿ ಶಿಕ್ಷಣವನ್ನೂ ಸೂರಜ್ ಪಿಯು ಕಾಲೇಜಿನಲ್ಲಿ ಮುಂದುವರಿಸುವ ಇಚ್ಛೆ ವ್ಯಕ್ತಪಡಿಸಿದ್ದಾಳೆ.
ರಾಜ್ಯದಲ್ಲಿ ಒಟ್ಟಾರೆ ಶೇಕಡಾವಾರು 85.63 ಫಲಿತಾಂಶ ಬಂದಿದೆ. ಕಳೆದ 10 ವರ್ಷಗಳಲ್ಲೇ ಇದು ದಾಖಲೆಯ ಫಲಿತಾಂಶವಾಗಿದೆ. ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಫಲಿತಾಂಶ ಪ್ರಕಟಿಸಿದ್ದಾರೆ,
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ