ಕಿರು ಕಾದಂಬರಿ: ದೊಂಬಿ- ಭಾಗ-1

Upayuktha
0

ಅದೊಂದು ಅಮವಾಸ್ಯೆಯ ಕರಾಳ ರಾತ್ರಿ. ಹಲವು ದಿನಗಳ ಬಳಿಕ ವಿಶ್ರಾಂತಿ ಪಡೆಯಲೋ ಎಂಬಂತೆ ಚಂದ್ರಮ ಅಗಸದಿಂದ ಮರೆಯಾಗಿದ್ದ. ರಾಜಾಜಿ ನಗರ ಬಡಾವಣೆಯ ಮಧ್ಯಮ ವರ್ಗದವರು ವಾಸಿಸುತ್ತಿದ್ದ ಒಂದು ಕಿರು ಓಣಿ, ರಾತ್ರಿ ಹನ್ನೊಂದುವರೆ ಹನ್ನೆರಡಾಗಿರಬಹುದು. ಯಾರೋ ಕಿಟಾರನೆ ಕಿರುಚಿದ ಸದ್ದು.... ಎದೆ ಎದೆ ಬಡಿದ ಸದ್ದು.. ಓಣಿಯಲ್ಲಿ ಓಡಾಡಿದ ಸದ್ದು.. ನಗು...ಮತ್ತೆ ನಗು.. ಹುಚ್ಚು ನಗು...!


”ಏ ಕಣ್ಣಾ.....ನಿನ್ನ ಗುದ್ದಿ.... ಚಟ್ನಿ ಮಾಡ್ತೇನೆ... ಮಗನೇ ... ನಿನ್ನ ತಿಥಿ ಮಾಡ್ತೇನೆ... .ಓ ಮಾಲಿ.... ನಿನ್ನ ಸುಮ್ನೆ ಬಿಡ್ತೇನಾ..... ನಿನ್ನೂ ಚಟ್ನಿ ಮಾಡ್ತೇನೆ.... ಅಯ್ಯೋ.. ಪಾಪಿ.. ನಿನ್ನಿಂದ ಅಮ್ಮ ಹೋತೂ... ಅಪ್ಪ ಹೋತೂ... .ನಾನೊಬ್ಬ ಉಳ್ಕೊಂಡಿನೋ.. ಓ ಕಣ್ಣ... ನಂಗೆ ಒದ್ದಿಯಲ್ಲೋ... ಆ ಕಾಲು... ಮುರೀತೀನಿ..."


ಹುಚ್ಚ ಬಸ್ಯ ಕಿರುಚಾಡುತ್ತಿದ್ದ... ಎದೆ ಎದೆ ಬಡಿಯುತ್ತಿದ್ದ.. ಓಣಿ ತುಂಬ ಓಡಾಡುತ್ತಿದ್ದ.


ನಿದ್ರೆಯಿಂದ ಎಚ್ಚೆತ್ತ ಜನ ಇಣುಕಿ ನೋಡಿ, ಓ ಬಸ್ಯ.... .ಪಾಪ... ಪಾಪ.... ಬಸ್ಯ... ಎಂದು ಲೊಚಗುಟ್ಟಿದರು.


ಬಸ್ಯ ಕಣ್ಣನ ಮನೆಯ ಮುಂದೆ ನಿತ್ತು ಗಲಾಟೆ ಮಾಡುತ್ತಿದ್ದಾಗ ಕಣ್ಣ ತಡೆಯದಾದ.  ಬಾಗಿಲು ತೆರೆದು ತೂರಾಡುತ್ತಾ, ಕೆಂಗಣ್ಣು ಬಿಡುತ್ತಾ ಹೊರಗೆ ಬಂದ. ಮತ್ತೆ ಬಸ್ಯನತ್ತ ”ಏ ಬಸ್ಯ, ಇನ್ನೇನಾರ ಇತ್ಲಾ....ಕಡಿ ಬಂದೀ.... ನಿನ್ನ ಉಟ್ನಿಲ್ಲ.. ಅನ್ನಿಸ್ಬಿಡ್ತೀನಿ... ಉಷಾರ್....” ಎಂದು ದಂಕಿ [ಧಮಕಿ] ಹಾಕಿದ, ಆದ್ರೆ ಬಸ್ಯ ಇನ್ನೂ ತೂರಾಡುತ್ತ... ಗಟ್ಟಿ ಸ್ವರದಲ್ಲಿ ಬಯ್ಯುತ್ತಲೇ ಇದ್ದ. ಕಣ್ಣ ... ತೂರಾಡುತ್ತಾ ಬಸ್ಯನಿದ್ದ ಕಡೆ ಬಂದು, ಅವನ ಕುತ್ತಿಗೆ ಹಿಡಿದು ಹಿಚುಕಲು ಪ್ರಾರಂಭ ಮಾಡಿದ. ಬಸ್ಯ ಹೇಗೋ ಕೊಸರಾಡಿ ಬಿಡಿಸಿಕೊಂಡು.... ”ಅಯ್ಯೋ... ಪಾಪಿ ಕೊಲ್ತಾನಪ್ಪೋ... ಬನ್ರೋ... ಕಾಪಾಡ್ರಪ್ಪೋ... ಎಂದು ಬೊಬ್ಬೆ ಹೊಡೆಯತೊಡಗಿದ.


ಯಾರೋ ಒಂದಿಬ್ಬರು ಮನೆಯವರು ಹೊರಗೆ ಬಂದು ಇಬ್ಬರಿಗೂ ಬೈದು ಸುಮ್ಮನಾಗಲು ಹೇಳಿದ್ದರು. ಕಣ್ಣನ ಕೈಯಿಂದ ಹೇಗೋ ತಪ್ಪಿಸಿಕೊಂಡ ಬಸ್ಯ ತೂರಾಡುತ್ತಲೇ ದೂರ ಹೊರಟು ಹೋದ. ಕಣ್ಣ ಮತ್ತೆ ತನ್ನ ಮನೆಯೊಳಗಡೆ ಬಂದು ಬಾಗಿಲು ಹಾಕಿಕೊಂಡ.

[ಇನ್ನೂ ಇದೆ]

-ಶಂಕರ ಭಟ್


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top