29ರಂದು ಸಾಹಿತ್ಯ ಪರಿಷತ್ ವತಿಯಿಂದ ಮನೆಯಂಗಳದಲ್ಲಿ ಮಾತುಕತೆ

Chandrashekhara Kulamarva
0


ಮಂಗಳೂರು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಜಂಟಿಯಾಗಿ ಹಿರಿಯ ಕವಿ ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರ ನಿವಾಸ ಕುಂಜತ್ತಬೈಲಿನ ಭೂಮಿಗೀತದಲ್ಲಿ ದಿನಾಂಕ 29 ರ ಭಾನುವಾರ ಅಪರಾಹ್ನ 3.30 ರಿಂದ ಸಾಹಿತಿಯೊಂದಿಗೆ ಮುಖಾಮುಖಿ- ಮನೆಯಂಗಳದಲ್ಲಿ ಮಾತುಕತೆ ಎಂಬ ವಿಶೇಷ ಕಾರ್ಯಕ್ರಮ, ದತ್ತಿ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 


ಸಾಹಿತಿ ಪೆರ್ಲರೊಂದಿಗಿನ ಸಂವಾದದಲ್ಲಿ ಪ್ರೊ. ಪಿ. ಕೃಷ್ಣಮೂರ್ತಿ ಸುರತ್ಕಲ್, ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ರಘು ಇಡ್ಕಿದು, ವಿಜಯಲಕ್ಷ್ಮಿ ಕಟೀಲು, ಪ್ರಶಾಂತಿ ಶೆಟ್ಟಿ ಇರುವೈಲು ಮತ್ತು ಸಾವಿತ್ರಿ ಪೂರ್ಣಚಂದ್ರ ಭಾಗವಹಿಸಲಿದ್ದು ಡಾ. ಸುಧಾರಾಣಿ ಸಂಯೋಜನೆ ಮಾಡುವರು. ಡಾ. ವಸಂತಕುಮಾರ ಪೆರ್ಲ ಉದ್ಘಾಟಿಸಲಿದ್ದು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.  


ಅನಂತರ ಸಾಹಿತ್ಯ ಪರಿಷತ್ತಿನ ಶ್ರೀಪಾದ್ ಕೃಷ್ಣ ರೇವಣಕರ್ ಸ್ಮಾರಕ ದತ್ತಿ ಉಪನ್ಯಾಸ ನಡೆಯಲಿದ್ದು ನಗರದ ರಾಮಕೃಷ್ಣ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿ ಕಟೀಲು ಉಪನ್ಯಾಸ ನೀಡುವರು. ತಾಲೂಕು ಕ ಸಾ ಪ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣಕರ್ ಅಧ್ಯಕ್ಷತೆ ವಹಿಸುವರು.


ಅನಂತರ ಹಿರಿಯ ಕವಿಗಳಾದ ರಘುರಾಮ ರಾವ್ ಬೈಕಂಪಾಡಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಜರಗಲಿದ್ದು ಕವಿಗಳಾದ ಡಾ. ಮೀನಾಕ್ಷಿ ರಾಮಚಂದ್ರ, ಡಾ. ದಿವಾ ಕೊಕ್ಕಡ, ಡಾ. ಬಾಲಕೃಷ್ಣ ಭಾರದ್ವಾಜ್,  ಚಂದ್ರಶೇಖರ ಎಸ್. ಅಂತರ, ಕೆ. ಶೈಲಾಕುಮಾರಿ, ಬದ್ರುದ್ದೀನ್ ಕೂಳೂರು, ಅಕ್ಷಯ ಆರ್. ಶೆಟ್ಟಿ, ಪ್ರಮೀಳಾ ದೀಪಕ್ ಪೆರ್ಮುದೆ, ಅಂಡಾಲ ಗಂಗಾಧರ ಶೆಟ್ಟಿ ಮೊದಲಾದವರು ಭಾಗವಹಿಸುವರು.


ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಡಾ. ವಸಂತಕುಮಾರ ಪೆರ್ಲ ಸಮಾರೋಪ ಭಾಷಣ ಮಾಡಲಿದ್ದು ಡಾ. ಎಂ. ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸುವರು. ಸಾಹಿತ್ಯಾಸಕ್ತರು ಈ ಸಮಾರಂಭದಲ್ಲಿ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
To Top