ಒಂದು ರೂಮ್ ಇರುವ ಬಸ್ ಸ್ಟಾಂಡ್‌ಗೆ 6 ಲಕ್ಷ; 2 ಕಿಲೋ ಮೀಟರ್ ರಸ್ತೆಗೆ 2 ಕೋಟಿ... ಬಡವನಿಗೆ ಟಾಯ್ಲೆಟ್ ಕಟ್ಟಿಸಲು ಮಾತ್ರ 12,000 ರೂ

Upayuktha
0

ಪ್ರಾತಿನಿಧಿಕ ಚಿತ್ರ


ಬಸ್ ಸ್ಟಾಂಡ್, ರಸ್ತೆ, ಬ್ರಿಡ್ಜ್, ತಡೆಗೋಡೆ ಇತ್ಯಾದಿ ಗಳಿಗೆ ಕೋಟಿ ಕೋಟಿ ಹಣ ಬಿಡುಗಡೆ ಆಗುತ್ತಿದೆ. ಅದೇ ಬಡವನೊಬ್ಬ ಹಳ್ಳಿಯಲ್ಲಿ ಬಯಲು ಶೌಚ ಮಾಡುವ ಕುಟುಂಬಕ್ಕೆ ಟಾಯ್ಲೆಟ್ ಗೆ ಹಣ ಕೇಳಿದರೆ 12000 ಕೊಡುತ್ತೇವೆ, ನೀನು ಟಾಯ್ಲೆಟ್ ಕಟ್ಟು, ನೀನು ಕಟ್ಟಿದ ಮೇಲೆ ಫೋಟೋ ತಾ; ಹಣ ಮುಂದಿನ ದಿನಗಳಲ್ಲಿ ನಿನ್ನ ಅಕೌಂಟ್ಗೆ ಕ್ರೆಡಿಟ್ ಆಗತ್ತೆ. ಇದು ಪಂಚಾಯತ್‌ಗಳಲ್ಲಿ ಪಿಡಿಓಗಳು ಹೇಳುವ ಮಾತು. ಸರಕಾರ ಅವರ ಬಾಯಿಯಿಂದ ಹೇಳಿಸುವ ಮಾತುಗಳು. ನಿಜಕ್ಕಾದರೆ 12,000 ರೂ ಗಳಲ್ಲಿ ಟಾಯ್ಲೆಟ್ ಕಟ್ಟುವುದು ಬಿಡಿ ಟಾಯ್ಲೆಟ್ ಗುಂಡಿಗೆ ರಿಂಗ್ ಇಳಿಸಲೂ ಸಾಧ್ಯವಿಲ್ಲ. ಆ ಬಡವ ಕಿಸೆಯಲ್ಲಿ 100 ರೂ ಹಿಡಿದು ಪಂಚಾಯತ್‌ಗೆ ಹೋಗಿದ್ದಕ್ಕೆ ತಲೆ ಚಚ್ಚಿ ಕೊಳ್ಳುತ್ತಿದ್ದಾನೆ. ಇಂದು ಉಡುಪಿಯ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ವೇ ನಡೆಸಿದರೆ, ತಾಲೂಕಲ್ಲಿ 100ಕ್ಕೂ ಹೆಚ್ಚು ಮನೆಗಳು ಬಹಿರ್ದೆಸೆಗೆ ಬಯಲನ್ನೇ ನೆಚ್ಚಿಕೊಂಡಿದೆ. ಇನ್ನು ಉಡುಪಿ ಬಯಲು ಶೌಚಾಲಯ ಮುಕ್ತ ಜಿಲ್ಲೆ ಎಂದು ಸರ್ಟಿಫಿಕೇಟ್ ಮಾಡಿಸಿದ್ದಾರೆ ಅವಿವೇಕಿಗಳು.


ಕೇವಲ ಅವರ ರಾಜಕೀಯ ಲಾಭಕ್ಕೋಸ್ಕರ ಬಜೆಟ್‌ನಲ್ಲಿ ಟಾಯ್ಲೆಟ್‌ಗೆಂದು ಬರುವ ಹಣವನ್ನು ಈ ಮೂಲಕ ನಿಲ್ಲಿಸುತ್ತಿದ್ದಾರೆ.


ಮೊದಲು ಟಾಯ್ಲೆಟ್ ನಿರ್ಮಾಣಕ್ಕೆ ಕೊಡುವ ಹಣವನ್ನು ರೂ 30,000ಕ್ಕೆ ಏರಿಸಿ. ಈ ಹಣ ಸರಿಯಾದ ಫಲಾನುಭವಿಗೆ ತಲುಪುವಂತೆ ಕಾರ್ಯಯೋಜನೆ ರೂಪಿಸಿ. ಆಗ ಮಾತ್ರ ನಿಮ್ಮ ಜಿಲ್ಲೆ /ತಾಲೂಕು/ ಗ್ರಾಮ ಬಯಲು ಮುಕ್ತ ಆಗಬಹುದು.


ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳಿರುವ ಇಂತಹ ಬಡವರ ಮನೆಗಳು ಸಾಕಷ್ಟು ಇವೆ ಇಲ್ಲಿ. ಸ್ವಲ್ಪವೂ ಕನಿಕರ ಇಲ್ಲದ, ದುಡ್ಡು ಮಾಡುವ ರಾಜಕಾರಣಿಗಳು ಪಂಚಾಯತ್ ಲೆವೆಲ್‌ನಿಂದಲೇ ಇದ್ದಾರೆ. ಕೇವಲ ಅವರ ಸ್ವಾರ್ಥ ನೋಡುವುದು ನೋಡಿದರೆ ನಿಜಕ್ಕೂ ವಾಕರಿಕೆ ಬರುತ್ತಿದೆ.


ಮನಸ್ಸು ಮಾಡಿದರೆ 100/200 ಟಾಯ್ಲೆಟ್ ಗಳನ್ನು ಅವರ  ಸ್ವಂತ ದುಡ್ಡಲ್ಲಿ ಮಾಡಿಕೊಟ್ಟರೂ 3 ತಲೆಮಾರು ಕೂತು ತಿಂದರೂ ಖಾಲಿಯಾಗದಷ್ಟು ಆಸ್ತಿ ಮಾಡಿಟ್ಟಿದ್ದಾರೆ ಇಲ್ಲಿಯ ರಾಜಕಾರಣಿಗಳು.

ಇನ್ನು ಮುಂದಿನ ಚುನಾವಣೆಗೆ ಓಟು ಕೇಳಲು ಟಾಯ್ಲೆಟ್ ಇಲ್ಲದ ಮನೆಗೆ ಯಾವ ಮುಖ ಹಿಡಿದು ಬರುತ್ತಾರೆ ನೋಡಬೇಕಿದೆ? ಅವರು ಬರುತ್ತಾರೆ ಬಿಡಿ, ಅವರಿಗೂ ಗೊತ್ತು ರಾಜಕೀಯ ಹೊಲಸು ಎಂದು.


-ಡಾ. ಶಶಿಕಿರಣ್ ಶೆಟ್ಟಿ, ಉಡುಪಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top