ಕರದಿ ದೀಪವ ಹಿಡಿದು ಇರಲು ರೋಗಿಯ ಬಳಿಯೆ
ನೆರೆದು ಹಗಲಿರುಳೂ ಸೇವೆಯ ಬಳಿಯೆ
ಅರಮನೆಯು ಆಸ್ಪತ್ರೆ ಎನುವ ಭಾವದ ದಾದಿ
ಹರಿಸಿರುವ ತೆರ ಮನೆಮಂದಿಯ ಬಳಿಯೆ
ಇರದೆ ತನ್ನಯ ಪರಿವೆ ಮೆರೆವಾಸೆ ಆಶಯವು
ಸುರಿಸಿ ಭಾವನೆ ಕರುಳ ಕುಡಿಯ ಬಳಿಯೆ
ಗುರಿಯಾಗಿ ಆತುರರ ಆರೋಗ್ಯ ಮೊದಲಾಗಿ
ಇರುವವಳು ದಿನವೂ ರೋಗಿಯ ಬಳಿಯೆ
ಬರಿಯ ಮನುಜನಿಗಿಂತ ಮಿಗಿಲಾದ ದೇವತೆಯ
ತೆರದಿ ನಮಿಸು ಉಪಸ್ತಾತೆಯ ಬಳಿಯೆ
ಮರೆಯಲಾರನು ರೋಗಿ ಆಕೆ ತೋರಿದ ಪ್ರೀತಿ
ಸುರನಾರಿ ತೋರುವ ಪ್ರೀತಿಯ ಬಳಿಯೆ
ಮರೆತುಹೋದರು ತನ್ನ ಮನೆವಾರ್ತೆ ಸಂಗತಿಯು
ಮರೆಯದೇ ಮಾಡಿ ಆರ್ತಸೇವೆಯ ಬಳಿಯೆ
ತೊರೆವುದುಂಟೇ ಮಮತೆ ತಾಯಿಗಿಂತಲು ಮಿಗಿಲು
ಹರಿಸೀಶನು ಇರಲು ದಾದಿಯ ಬಳಿಯೆ
-ಡಾ ಸುರೇಶ ನೆಗಳಗುಳಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ