|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೊಳೆಹೊನ್ನೂರು: ಶ್ರೀ ವ್ಯಾಸರಾಜ ಪ್ರತಿಷ್ಠಾಪಿತ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪುನರ್‌ ಪ್ರತಿಷ್ಠಾ ಮಹೋತ್ಸವ

ಹೊಳೆಹೊನ್ನೂರು: ಶ್ರೀ ವ್ಯಾಸರಾಜ ಪ್ರತಿಷ್ಠಾಪಿತ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪುನರ್‌ ಪ್ರತಿಷ್ಠಾ ಮಹೋತ್ಸವ

ಮುಕ್ಕೋಟಿ ದೇವರನ್ನು ಪೂಜಿಸುವಂತಹ ಹಿಂದೂ ಧರ್ಮದಲ್ಲಿ ಆಂಜನೇಯ ದೇವರನ್ನು ತುಂಬಾ ವಿಶೇಷವಾಗಿ ಪೂಜಿಸಲಾಗುತ್ತದೆ. ಅದರಲ್ಲೂ ಬ್ರಹ್ಮಚಾರಿಯಾಗಿರುವ ಆಂಜನೇಯ ಸ್ವಾಮಿಯನ್ನು ಹೆಚ್ಚಾಗಿ ಅವಿವಾಹಿತ ಮಹಿಳೆಯರು ಮತ್ತು ಪುರುಷರು ಪೂಜಿಸುವರು. ಹನುಮಂತ ದೇವರು ಬೇಡಿದ ವರವನ್ನು ನೀಡುವವನು  ಎನ್ನುವ ಅಚಲ ನಂಬಿಕೆ ಭಕ್ತರದ್ದು.


ಹೊಳೆಹೊನ್ನೂರು: ತುಂಗ-ಭದ್ರಾ ನದಿಯ ಸಂಗಮ ಕ್ಷೇತ್ರವಾದ ಕೂಡಲಿಯಿಂದ 6.ಕಿ.ಮೀ ದೂರದಲ್ಲಿರುವ ಶ್ರೀ ಕ್ಷೇತ್ರ ಶ್ರೀ ವ್ಯಾಸರಾಜ ಪ್ರತಿಷ್ಠಿತ ಹೊಳೆಹೊನ್ನೂರು ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಾನದಲ್ಲಿ ಮೇ 18, 19ರಂದು ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಸನ್ಯಾಸಿಯಾಗಿದ್ದುಕೊಂಡು ವಿಜಯನಗರ ಸಾಮ್ರಾಜ್ಯವನ್ನೂ ಆಳಿದ ಯತಿ ಶ್ರೀ ವ್ಯಾಸರಾಜರು ಲೋಕ ಕಲ್ಯಾಣಾರ್ಥ ಭಾರತದಾದ್ಯಂತ 734 ಸ್ಥಳಗಳಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಿದ್ದರು. ಶ್ರೀ ವ್ಯಾಸರಾಜರು ಪ್ರತಿಷ್ಠಾಪಿಸಿದ್ದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಮಲೆನಾಡಿನ ಶಿವಮೊಗ್ಗದಿ೦ದ (ಸಿಹಿಮೊಗ್ಗೆ) 19 ಕಿ.ಮಿ. ಪರಿಕ್ರಮಿಸಿದರೆ ತು೦ಗ– ಭದ್ರ ನದಿಯ ಸ೦ಗಮ ಕ್ಷೇತ್ರ ಕೂಡಲಿ. ಅಲ್ಲಿ೦ದ ಕೇವಲ ಕಿ.ಮಿ. ಸಾಗಿದರೆ ಸಿಗುವ ಶ್ರೀ ಕ್ಷೇತ್ರ ಶ್ರೀ ವ್ಯಾಸರಾಜ ಪ್ರತಿಷ್ಠಿತ ಹೊಳೆಹೊನ್ನೂರು ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಾನ.


ಶ್ರೀ ವ್ಯಾಸರಾಜರಿಂದ ಪ್ರತಿಷ್ಠೆ ಆಗಿರುವ ಹೊಳೆಹೊನ್ನೂರು ಪಟ್ಟಣದ ಬ್ರಾಹ್ಮಣರ ಬೀದಿಯ ಶ್ರೀ ಆಂಜನೇಯ   ಸ್ವಾಮಿ ಸನ್ನಿಧಾನದಲ್ಲಿ ಪಟ್ಟಣದ ಬ್ರಾಹ್ಮಣರ ಬೀದಿಯ ಶ್ರೀ ಆಂಜನೇಯ ಸ್ವಾಮಿ, ನವಗ್ರಹ ದೇವರ  ಪುನರ್ ಪ್ರತಿಷ್ಠಾಪನೆ, ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮಗಳು ನೆರವೇರಿದವು.    

"ವಿಶೇಷ ಹೂವಿನ ಅಲಂಕಾರ" 

ಶ್ರೀ ಕ್ಷೇತ್ರ ಶ್ರೀ ವ್ಯಾಸರಾಜ ಪ್ರತಿಷ್ಠಿತ ಹೊಳೆಹೊನ್ನೂರು ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಾನದಲ್ಲಿ ಪುನರ್  ಪ್ರತಿಷ್ಠಾಪನಾ ಮಹೋತ್ಸವ ಪ್ರಯುಕ್ತ ಶ್ರೀ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು.

 "ಅನುಗ್ರಹ ಸಂದೇಶ" 

ಮೇ 19 ರಂದು ಮುಂಜಾನೆ 5.30ಕ್ಕೆ ಸುಪ್ರಭಾತ, ಬೆಳಗ್ಗೆ 9ಕ್ಕೆ ಶ್ರೀ ಸತ್ಯಧರ್ಮತೀರ್ಥ ಶ್ರೀಪಾದಂಗಳವರ  ಸನ್ನಿಧಾನದಲ್ಲಿ ಪಾದ ಪೂಜೆ, ಆಜ್ಞಾ ಸ್ವೀಕಾರ, 9.15ಕ್ಕೆ ಗಂಗಾ ಪೂಜೆ, ಗಣಪತಿ ಪೂಜೆ, ಕಲಶ ಸ್ಥಾಪನೆ, ಬಿಂಬ ಅವಾಹನ, ಪ್ರತಿಷ್ಟಾಂಗ ಹೋಮ, ಸಂಜೆ 5.30ಕ್ಕೆ ಶ್ರೀಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ  ಆಗಮನ, ಪೂರ್ಣಕುಂಭ ಸ್ವಾಗತ ಹಾಗೂ ಅನುಗ್ರಹ ಸಂದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೇ 20 ರಂದು ಬೆಳಿಗ್ಗೆ 9.30ಕ್ಕೆ ಪುನರ್ ಪ್ರತಿಷ್ಠಾಪನೆ ಹಾಗೂ ಪ್ರಧಾನ ಗೋಪುರ ಕಳಶ ಸ್ಥಾಪನೆ, 10. 30ಕ್ಕೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ 12ಕ್ಕೆ, ಶ್ರೀ ಮೂಲ ದಿಗ್ವಿಜಯರಾಮ ಮಹಾಸಂಸ್ಥಾನ ಪೂಜೆ, ತೀರ್ಥ ಪ್ರಸಾದ, ಸಂಜೆ 4.30ಕ್ಕೆ ಶ್ರೀಗಳ ಸಾನಿಧ್ಯದಲ್ಲಿ ಸಮಾರೋಪ ಅನುಗ್ರಹ ಸಂದೇಶ  ಮತ್ತು  ಸೇವಾಕರ್ತರಿಗೆ ಮಂತ್ರಾಕ್ಷತೆ ಪ್ರದಾನ ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು.

"ಜೀರ್ಣೋದ್ಧಾರ- ಇತಿಹಾಸ"

ಈ ಪುರಾತನ ದೇವಾಲಯವು ಕೆಲವೊಂದು ಭಾಗವು ಶಿಥಿಲವಾದ ಕಾರಣ ಸುತ್ತಮುತ್ತಲಿನ ಗ್ರಾಮದ ಭಕ್ತಾಧಿಗಳು ಹಾಗೂ ದಾನಿಗಳ ಸಹಕಾರದಿಂದ ೨೦೨೦ ನೇ ಇಸವಿಯಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭ ಮಾಡಿ  ಎಲ್ಲರ ಸಹಕಾರದಿಂದ ರಾಜ ಗೋಪುರವು ನಿರ್ಮಾಣ ಮಾಡಿ ಉತಾರಾಧಿ ಮಠಾಧೀಶ್ವರರಾದ ಶ್ರೀಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದಂಗಳವರವರು ರಾಜಗೋಪುರದ ಉಧ್ಘಾಟನೆ ಮಾಡಿ ಲೋಕಾರ್ಪಣೆ  ಮಾಡಿದರು. ದೇವಾಲಯದಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ.


ಆಂಜನೇಯ ಸ್ವಾಮಿ ವಿಗ್ರಹದ ಬಗ್ಗೆ

”ಶ್ರೀ ಪ್ರಾಣದೇವರ ವಿಗ್ರಹವು 5 ಅಡಿ ಎತ್ತರವಿದೆ, ಎಡಕ್ಕೆ ಮುಖ ಮಾಡಿ ಬಲಗೈಯಲ್ಲಿ ಅಭಯ ನೀಡುತ್ತಿದ್ದು, ಎಡಗೈಲ್ಲಿ ಸೌಗಂಧಿಕ ಪುಷ್ಪ ಹಿಡಿದು ನಿಂತಿರುವ ಶ್ರೀ ಸ್ವಾಮಿಯನ್ನು ವ್ಯಾಸ್ಯರಾಜರಿಂದ ಪ್ರತಿಷ್ಠಾಪನೆ ಮಾಡಿದ್ದು ಈ ಸ್ವಾಮಿಯ ವಿಶೇಷವಾಗಿದೆ ಹಾಗೂ ಉತ್ತರಾಧಿ ಮಠಾಧೀಶ್ವರರಾದ ಶ್ರೀಶ್ರೀ 1008 ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಪುನರ್ ಪ್ರತಿಷ್ಠಾಪನೆ ನೆರವೇರುತ್ತಿರುವುದು ಬಹಳ ವಿಶೇಷ ಎನ್ನುತ್ತಾರೆ ಹೊಳೆಹೊನ್ನೂರಿನ ಉತಾರಾಧಿಮಠದ ಶ್ರೀನಿವಾಸಾಚಾರ್. 


ಶ್ರೀ ವ್ಯಾಸರಾಜ ತೀರ್ಥ (1460-1539): ದ್ವೈತ ತತ್ತ್ವಶಾಸ್ತ್ರದ ಪ್ರಮುಖ ಸಂತರಲ್ಲಿ ಒಬ್ಬರಾಗಿದ್ದಾರೆ ಮತ್ತು ಎಲ್ಲಾ ಮಠಾಧೀಶರ ಶ್ರೇಣಿಯಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ.  


ಅವರು ಶ್ರೀ ಮಧ್ವಾಚಾರ್ಯ ಮತ್ತು ಜಯ ತೀರ್ಥರನ್ನು ಒಳಗೊಂಡ ‘ಮುನಿತ್ರಯ’ರಲ್ಲಿ ಒಬ್ಬರು. ಅವರು ಭಗವಾನ್ ಅಂಜನೇಯ ಸ್ವಾಮಿಯ ತೀವ್ರ ಭಕ್ತರಾಗಿದ್ದರು ಮತ್ತು ಭಾರತದಿಂದ ಹೊರಗಿದ್ದರೂ 732 ವಿಗ್ರಹಗಳನ್ನು ಸ್ಥಾಪಿಸಿದ್ದಾರೆ ಎಂದು ನಂಬಲಾಗಿದೆ. 


-ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم