ಆಳ್ವಾಸ್: 'ಸೈಬರ್ ಸೆಕುರಿಟಿ ಆ್ಯಂಡ್ ಸೆಲ್ಪ್ ಡಿಫೇನ್ಸ್' ಎಫ್‍ಡಿಪಿ ಕಾರ್ಯಕ್ರಮ

Upayuktha
0


ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗ ಹಾಗೂ ಮಾನವಿಕ ವಿಭಾಗದ ಸಹಯೋಗದಲ್ಲಿ ''ಸೈಬರ್ ಸೆಕುರಿಟಿ ಆ್ಯಂಡ್ ಸೆಲ್ಪ್ ಡಿಫೇನ್ಸ್'' ಕುರಿತು ಒಂದು ದಿನದ ಶಿಕ್ಷಕ ಪುನಶ್ಚೇತನ ಕಾರ್ಯಕ್ರಮ ಕುವೆಂಪು ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೀಚರ್ ಟೈನರ್ ರುಕ್ಸಾನ್ ಹಸನ್ "ಸೈಬರ್ ಭದ್ರತೆ ಎನ್ನುವುದು ಈಗ ಜಾಗತಿಕ ಅಗತ್ಯ. ಅಪರಾಧಗಳ ಸ್ವರೂಪ ಬದಲಾದಂತೆಲ್ಲ ಈ ಭದ್ರತೆಯ ಅಗತ್ಯವೂ ಹೆಚ್ಚಾಗುತ್ತಿದೆ. ಸಮಾಜದ ಪ್ರತಿ ಹಂತದಲ್ಲೂ ಈಗ ಡಿಜಿಟಲ್ ವ್ಯವಹಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸೈಬರ್ ಭದ್ರತೆಗೆ ಹೆಚ್ಚಿನ ಒತ್ತು ಕೊಡಬೇಕಿದೆ" ಎಂದರು.


ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ ಭಾರತದ ಮೊದಲ ಮಹಿಳಾ ಬಾಡಿಗಾರ್ಡ್ ಹಾಗೂ ಟೆಡ್‍ಎಕ್ಸ್  ಸ್ಪೀಕರ್ ವೀನಾ ಗುಪ್ತಾ, ಪ್ರಜ್ಞಾವಂತರೇ ಹೆಚ್ಚಾಗಿ ಸಿಲುಕುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಇಂದು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಡಿಜಿಟಲ್ ಜಗತ್ತಿನತ್ತ ನಾವು ಸಾಗಿದಂತೆ ಅಪಾಯವು ಹೆಚ್ಚಾಗುತ್ತಿದೆ. ಕ್ಯೂಆರ್ ಕೋಡ್ ಹಗರಣ, ಡೇಟಿಂಗ್ ಅಪ್ಲಿಕೇಶನ್, ಒಟಿಪಿ, ಕ್ರೆಡಿಟ್ ಕಾರ್ಡ್ ವಂಚನೆ, ಅಂತರ್ಜಾಲದ ಮೂಲಕ ಬೆದರಿಸುವುದು ಮತ್ತು ನಿಂದಿಸುವುದು, ನಕಲಿ ವಿಡಿಯೋ, ಫೋಟೋಗಳ ತಯಾರಿಕೆ ಸೇರಿದಂತೆ ಅನೇಕ ಅಪರಾಧಗಳ ಬಗ್ಗೆ ಇಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.


ಸೈಬರ್ ಸೈಕಾಲಜಿಸ್ಟ್ ಹಾಗೂ ಟೆಡ್‍ಎಕ್ಸ್ ಸ್ಪೀಕರ್ ನಿರಾಲಿ ಭಾಟಿಯಾ ಮಾತನಾಡಿ, ಸೈಬರ್ ಕ್ರೈಮ್ ನಲ್ಲಿ ಹಲವು ವಿಧಗಳಿದ್ದು ಅದರಲ್ಲಿ ಸೈಬರ್ ಬುಲ್ಲಿಂಗ್ ಅಥವಾ ಸೈಬರ್ ಕಿರುಕುಳ ಎನ್ನುವುದು ಎಲೆಕ್ಟ್ರಾನಿಕ್ ವಿಧಾನಗಳನ್ನು ಬಳಸಿಕೊಂಡು ಬೆದರಿಸುವ ಅಥವಾ ಕಿರುಕುಳ ನೀಡುವ ಒಂದು ರೂಪವಾಗಿದೆ. ಈ ರೀತಿಯ ಆನ್‍ಲೈನ್ ಬೆದರಿಸುವಿಕೆಗೆ ಹೆಚ್ಚಿನ ಜನರು ಒಳಗಾಗುತ್ತಿದ್ದರೆ. ಡಿಜಿಟಲ್ ಮಾರುಕಟ್ಟೆ ವಿಸ್ತರಿಸಿದಂತೆ ಮತ್ತು ತಂತ್ರಜ್ಞಾನವು ಮುಂದುವರೆದಂತೆ ವಿಶೇಷವಾಗಿ ಹದಿಹರೆಯದವರು ಇಂತಹ ವಂಚನೆಗಳಿಗೆ ಒಳಗಾಗುವುದು ಹೆಚ್ಚು ಸಾಮಾನ್ಯವಾಗಿದೆ. ಇದರ ಕುರಿತು ಸರಿಯಾದ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕಿದೆ ಎಂದರು. 


ಶಿಕ್ಷಕರಿಗೆ ಆತ್ಮರಕ್ಷಣೆಯ ತಂತ್ರಗಳ ಪಾತ್ಯಕ್ಷಿಕೆಯನ್ನು ಮಾಡಿ ತೋರಿಸಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್, ಮಾನವಿಕ ವಿಭಾಗದ ಮುಖ್ಯಸ್ಥೆ ಸಂಧ್ಯಾ ಕೆ.ಎಸ್, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ| ಮಧುಮಾಲ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಗುಣೇಶ್ ಭಾರತೀಯ ನಿರೂಪಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top