ನಿಮ್ಮ ರಕ್ತದೊತ್ತಡವನ್ನು ಆಗಾಗ ಪರೀಕ್ಷಿಸಿಕೊಳ್ಳಿ: ಡಾ|| ಚೂಂತಾರು

Upayuktha
0



ಹೊಸಂಗಡಿ: ಪ್ರತಿ ಆರು ತಿಂಗಳಿಗೊಮ್ಮೆ 40 ವರ್ಷ ದಾಟಿದವರು ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಿಮ್ಮ ರಕ್ತದೊತ್ತಡವನ್ನು  ನೀವು ಆಗಾಗ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು. ಅಧಿಕ ರಕ್ತದೊತ್ತಡ ಎನ್ನುವುದು ಜೀವನ ಶೈಲಿಗೆ ಸಂಬಂಧಿಸಿದ ರೋಗವಾಗಿದ್ದು, ವಿಲಾಸಿ ಆಲಸ್ಯ ಜೀವನಶೈಲಿ, ಜಂಕ್ ಆಹಾರ ಸೇವನೆ, ಒತ್ತಡದ ಜೀವನ ಪದ್ಧತಿ, ದೈಹಿಕ ಕಸರತ್ತು ಇಲ್ಲದ ಜೀವನಕ್ರಮಗಳಿಂದಾಗಿ ಬರುತ್ತದೆ ಹೊರತು ಬೇರೆ ಯಾವುದೇ ನಿರ್ದಿಷ್ಟ ಕಾರಣವಿರುವುದಿಲ್ಲ. ನಮ್ಮ ಸ್ವಯಂಕೃತ ಅಪರಾಧದಿಂದಲೇ 80% ಮಂದಿಗೆ ಅಧಿಕ ರಕ್ತದೊತ್ತಡ ಕಾಯಿಲೆ ಬರುತ್ತದೆ ಹಾಗೂ 50% ಮಂದಿಗೆ ತಮಗೆ ಅಧಿಕ ರಕ್ತದೊತ್ತಡ ಇದೆ ಎಂಬುದರ ಅರಿವೇ  ಇರುವುದಿಲ್ಲ. ಹೃದಯಾಘಾತ, ಪಾಶ್ರ್ವವಾಯು ಬಂದಾಗಲೇ ಅವರಿಗೆ ತಮ್ಮ ಅಧಿಕ ರಕ್ತದೊತ್ತಡದ ಬಗ್ಗೆ ಅರಿವಾಗುತ್ತದೆ.  ಅಧಿಕ ರಕ್ತದೊತ್ತಡದಿಂದ ನಿಧಾನವಾಗಿ ಕಿಡ್ನಿ, ಹೃದಯ, ಕಣ್ಣು ಮತ್ತು ಮೆದುಳುಗಳಿಗೆ ಹಾನಿಯಾಗುತ್ತದೆ. ನಿರಂತರ ನಿಯಮಿತ ಔಷಧಿ ಬಳಕೆ ಹಾಗೂ ವೈದ್ಯರ ಸಲಹೆಯಿಂದ ರಕ್ತದೊತ್ತಡ ನಿಯಂತ್ರಿಸಿ ನೂರು ಕಾಲ ಬದುಕಲು ಸಾಧ್ಯವಿದೆ ಎಂದು ಖ್ಯಾತ ದಂತ ವೈದ್ಯ ಮತ್ತು ಬಾಯಿ ಮುಖ, ದವಡೆ ಶಸ್ತ್ರಚಿಕಿತ್ಸಕ ಡಾ|| ಮುರಲೀಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು.


ವಿಶ್ವ ರಕ್ತದೊತ್ತಡ ತಿಳುವಳಿಕಾ ದಿನಾಚರಣೆ ಅಂಗವಾಗಿ ಇಂದು (ಮೇ 17) ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಇದರ ವತಿಯಿಂದ ಉಚಿತ ರಕ್ತದೊತ್ತಡ ತಪಾಸಣೆ ಶಿಬಿರ ನಡೆಯಿತು. ದಂತ ಚಿಕಿತ್ಸಾಲಯಕ್ಕೆ ಬಂದ ಎಲ್ಲಾ ರೋಗಿಗಳು ಮತ್ತು ರೋಗಿಯ ಸಂಬಂಧಿಕರಿಗೆ ಉಚಿತವಾಗಿ ರಕ್ತದೊತ್ತಡ ಪರೀಕ್ಷೆ ಮಾಡಲಾಯಿತು.


ಬೆಳಿಗ್ಗೆ 10.00 ರಿಂದ ಸಾಯಂಕಾಲ 6.00 ರವರೆಗೆ ಶಿಬಿರ ಜರುಗಿತು. 100ಕ್ಕೂ ಹೆಚ್ಚು ಮಂದಿ ರೋಗಿಗಳು ಈ ಶಿಬಿರದ ಪ್ರಯೋಜನ ಪಡೆದರು. ಸುಮಾರು 30% ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ವೈದ್ಯರಾದ ಡಾ|| ಸುದೀಪ್ ನಾರಾಯಣ್, ದಂತ ಚಿಕಿತ್ಸಾಲಯದ  ಸಹಾಯಕಿಯರಾದ ರಮ್ಯ, ಸುಶ್ಮಿತಾ ಮತ್ತು ಚೈತ್ರಾ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top