ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಗುಜರಾತ್‍ನ ಐಸೋಟೆಕ್ ಸಂಸ್ಥೆಯ ನಡುವೆ ಶೈಕ್ಷಣಿಕ ಒಡಂಬಡಿಕೆ

Upayuktha
0

ಮೂಡುಬಿದಿರೆ: ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗ ಹಾಗೂ ಗುಜರಾತ್ ಮೂಲದ ಐಸೋಟೆಕ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನಡುವೆ ಶೈಕ್ಷಣಿಕ ಒಪ್ಪಂದದ ಒಡಂಬಡಿಕೆಗೆ ಸಹಿ ಹಾಕಲಾಯಿತು.


ಐಸೋಟೆಕ್ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥ ಮಹೇಶ್ ಹೆಗ್ಡೆ, ಸಂಸ್ಥೆಯ ನಿರ್ದೇಶಕ ಪೀಟರ್ ಮರ್ವಿನ್ ಡಿಸೋಜಾ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಶೈಕ್ಷಣಿಕ ಒಡಂಬಡಿಕೆಯ ಪ್ರತಿಗೆ ಸಹಿ ಹಾಕಿದರು.


ಒಡಂಬಡಿಕೆಯ ಉದ್ದೇಶ:

ಪ್ರಸ್ತುತ ತಾಂತ್ರಿಕ ಜಗತ್ತಿನ  ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‍ಗೆ ಅವಕಾಶ ನೀಡುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು, ಕಾಲೇಜಿನಲ್ಲಿ ಅನುಕೂಲಕರ ವಾತಾವರಣ ಕಲ್ಪಿಸಿ, ಐಸೋಟೆಕ್‍ನಿಂದ ಬರುವ ಸಂಪನ್ಮೂಲ ವ್ಯಕ್ತಿಗಳಿಂದ ಜ್ಞಾನವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುವುದಾಗಿದೆ.


ನಂತರ ವಿಶ್ವ ತಾಂತ್ರಿಕ ದಿನಾಚರಣೆಯ ಅಂಗವಾಗಿ  ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಇಸಿ ವಿಭಾಗದ ಮುಖ್ಯಸ್ಥ ಡಾ| ಡಿ.ವಿ.ಮಂಜುನಾಥ್, ಡಾ| ಸತೀಶ್, ಡಾ| ದತ್ತಾತ್ರೇಯ, ಸಹಾಯಕ ಪ್ರಾಧ್ಯಾಪಕ ಗುರುಪ್ರಸಾದ್ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top