|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಭಯತಿಟ್ಟುಗಳ ಮೋಹಕ ಸ್ತ್ರೀವೇಷಧಾರಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ

ಉಭಯತಿಟ್ಟುಗಳ ಮೋಹಕ ಸ್ತ್ರೀವೇಷಧಾರಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ


ಯಕ್ಷಗಾನ ರಂಗದಲ್ಲಿ ರೂಪ, ಸ್ವರಬಾರ, ಆಳಂಗ, ಅಭಿನಯಗಳು ಒಂದಕ್ಕೊಂದು ಪೂರಕವಾಗಿದ್ದರೆ ಒಬ್ಬ ಕಲಾವಿದನ ಸ್ತ್ರೀವೇಷ ಎಷ್ಟು ಯಶಸ್ಸು ಗಳಿಸಬಹುದು ಎನ್ನುವುದಕ್ಕೆ ನೇರ ದ್ರಷ್ಟಾಂತ ಸದ್ಯ ತೆಂಕು-ಬಡಗುತಿಟ್ಟಿನ ಅಗ್ರಶ್ರೇಣಿಯ ಸ್ತ್ರೀವೇಷಧಾರಿಯಾಗಿ ಮೆರೆಯುತ್ತಿರುವ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರು. ಸ್ನಾತಕೋತ್ತರ ಪದವೀಧರನೊಬ್ಬನಲ್ಲಿ ಕಲೆ ಮೇಳೈಸಿಕೊಂಡಾಗ ಆ ಕಲಾವಿದ ಹೇಗೆ ಪರಿಪೂರ್ಣನಾಗಿ ಮೆರೆಯಬಹುದು ಎನ್ನುವುದಕ್ಕೆ ನೇರ ದೃಷ್ಟಾಂತ ಸುಬ್ರಹ್ಮಣ್ಯ ಹೆಗಡೆಯವರು. ಕನ್ನಡ ಸ್ನಾತಕೋತ್ತರ ಪದವೀದರರಾಗಿ ಯಕ್ಷರಂಗ ಪ್ರವೇಶಿಸಿದ ಹೆಗಡೆಯವರು ಅಂತಹ ಒಂದು ಅಪರೂಪದ ಮತ್ತು ಅಪೂರ್ವ ಪ್ರತಿಭಾ ಸಂಗಮ. ಸ್ತ್ರೀಸಹಜವಾದ ಒನಪು ವೈಯ್ಯಾರ, ಶರೀರ ಶಾರೀರ, ಸ್ವರಭಾರಗಳ, ಸರ್ವ ಅಂಗಗಳಲ್ಲಿ ಉತ್ಕೃಷ್ಟತೆ ಹೊಂದಿದ ಇವರಲ್ಲಿ ಸ್ನಾತಕೋತ್ತರ ಪದವಿಯೂ ಮೇಳೈಸಿ ಇವರೊಬ್ಬ ಪರಿಪೂರ್ಣ ಕಲಾವಿದನಾಗುವಲ್ಲಿ ಸಹಕರಿಸಿದವು.


ಬಡಾಬಡಗುತಿಟ್ಟಿನ ಯಕ್ಷಗಾನ ಲೋಕಕ್ಕೆ ಮೇರು ಕಲಾವಿದರನ್ನು ನೀಡಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪ ಯಲಗುಪ್ಪ ಎಂಬ ಗ್ರಾಮದಲ್ಲಿ ವಿಷ್ಣು ಹೆಗಡೆ, ಇಂದಿರಾ ಹೆಗಡೆಯೆಂಬ ಸುಸಂಸ್ಕೃತ ಹವ್ಯಕ ಬ್ರಾಹ್ಮಣ ದಂಪತಿಗಳ ದ್ವಿತೀಯ ಪುತ್ರನಾಗಿ 18-06-1973ರಲ್ಲಿ ಜನನ. ಯಕ್ಷಗಾನ ಮೇಲಿನ ಅತಿ ಆಸಕ್ತಿಯೇ ಇವರ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಎಂದು ಯಲಗುಪ್ಪ ಹೇಳುತ್ತಾರೆ.


ಹೆರಂಜಲು ವೆಂಕಟರಮಣ ಗಾಣಿಗ ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಆ ದಿನದ ಪ್ರಸಂಗದ ಪದ್ಯಗಳನ್ನು ಒಮ್ಮೆ ನೋಡಿಕೊಳ್ಳುತ್ತೇನೆ ಹಾಗೂ ಏನು ಆದರೂ ಹೊಸ ವಿಷಯ ಬಗ್ಗೆ ತಿಳಿದುಕೊಂಡು ಅದನು ರಂಗದಲ್ಲಿ ಉಪಯೋಗಿಸಲು ಪ್ರಯತ್ನ ಮಾಡುತ್ತೇನೆ ಎಂದು ಯಲಗುಪ್ಪ ಹೇಳುತ್ತಾರೆ.


ಪ್ರಭಾವತಿ, ಮೋಹಿನಿ, ದಾಕ್ಷಾಯಿಣಿ, ಅಂಬೆ, ಮೀನಾಕ್ಷಿ ಇತ್ಯಾದಿ ಇವರ ನೆಚ್ಚಿನ ವೇಷಗಳು.

ಸುಧನ್ವ ಕಾಳಗ, ರುಕ್ಮಾಂಗದ ಚರಿತ್ರೆ, ಪಟ್ಟಾಭಿಷೇಕ, ಭೀಷ್ಮವಿಜಯ, ದಕ್ಷಯಜ್ಞ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.


ಇಂದಿನ ಯಕ್ಷಗಾನ ಸ್ಥಿತಿ ಗತಿ ಹಾಗೂ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ಇಂದಿನ ಸ್ಥಿತಿ ಗತಿ ಶೋಚನೀಯ ಹಾಗೂ ಪ್ರೇಕ್ಷಕರು ವ್ಯಕ್ತಿ ಅಭಿಮಾನಿಗಳು ಜಾಸ್ತಿ ಇದ್ದರೆ ಎಂದು ಯಲಗುಪ್ಪ ಹೇಳುತ್ತಾರೆ.


ಯಕ್ಷಗಾನ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಅನೇಕ ಯೋಜನೆಗಳ ಬಗ್ಗೆ ಯೋಚನೆ ಇದೆ. ಆದರೆ ಯೋಚನೆಗಳೆಲ್ಲವೂ ಯೋಜನೆಗಳಾಗಿ ಮಾರ್ಪಾಡುಗೊಳ್ಳುತ್ತವೋ ಗೊತ್ತಿಲ್ಲ.


ಹಿಂದುಸ್ತಾನಿ ಸಂಗೀತ, ಭರತನಾಟ್ಯ, ಕತೆ, ಕಾದಂಬರಿ, ನಾಟಕ ಇವರ ಹವ್ಯಾಸಗಳು.

ಶ್ರೀ ಗುಂಡಬಾಳ ಮೇಳ, ಮಂದಾರ್ತಿ ಮೇಳ, ಮಾರಣಕಟ್ಟೆ ಮೇಳ, ಕಮಲಶಿಲೆ ಮೇಳ, ಸಾಲಿಗ್ರಾಮ ಮೇಳ, ತೆಂಕಿನ ಹೊಸನಗರ ಮೇಳ (೫ ವರ್ಷ), ಪ್ರಸ್ತುತ ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಇವರ ಯಕ್ಷಗಾನ ರಂಗದ ಸಾಧನೆಗೆ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.


ಯಲಗುಪ್ಪ ಸುಬ್ರಮಣ್ಯ ಹೆಗಡೆ ಅವರು ಲಕ್ಷ್ಮೀ ಇವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


#Photos_by:- 

ಪ್ರವೀಣ್ ಪೆರ್ಡೂರು, Ashok Donderangadi, Dheeraj Udupa uppinakudru.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post