|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಮೃತ ಭಾರತಿಗೆ ಕನ್ನಡದ ಆರತಿ- 28ರಂದು ಮಂಗಳೂರು, ಅಮರಸುಳ್ಯ, ಉಳ್ಳಾಲದಲ್ಲಿ ದೇಶಭಕ್ತಿ ಜಾಗೃತಿ ಕಾರ್ಯಕ್ರಮ: ಸಚಿವ ಸುನಿಲ್ ಕುಮಾರ್

ಅಮೃತ ಭಾರತಿಗೆ ಕನ್ನಡದ ಆರತಿ- 28ರಂದು ಮಂಗಳೂರು, ಅಮರಸುಳ್ಯ, ಉಳ್ಳಾಲದಲ್ಲಿ ದೇಶಭಕ್ತಿ ಜಾಗೃತಿ ಕಾರ್ಯಕ್ರಮ: ಸಚಿವ ಸುನಿಲ್ ಕುಮಾರ್


ಮಂಗಳೂರು: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಇದೇ ಮೇ.28ರಂದು ಮಂಗಳೂರಿನ ಕೇಂದ್ರ ಮೈದಾನ, ಸುಳ್ಯ ತಾಲೂಕಿನ ಅಮರ ಸುಳ್ಯ ಹಾಗೂ ಉಳ್ಳಾಲ ತಾಲೂಕಿನ ಉಳ್ಳಾಲದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಎಂಬ ಕಾರ್ಯಕ್ರಮದಡಿ ದೇಶಭಕ್ತಿ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಕರೆ ನೀಡಿದರು.


ಅವರು ಮೇ.17ರ ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಎಂಬ ಕಾರ್ಯಕ್ರಮದ ಆಯೋಜನೆ ಕುರಿತಂತೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮೇ 28ರ ಶನಿವಾರ ಮಂಗಳೂರು, ಉಳ್ಳಾಲ ಹಾಗೂ ಅಮರ ಸುಳ್ಯದಲ್ಲಿ ದೇಶಭಕ್ತಿಯನ್ನು ಸಾರುವ ವಿವಿಧ ರೀತಿಯ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವೇದಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ, ದೇಶ ಭಕ್ತಿ ಮೂಡಿಸುವ ಕಿರುಚಿತ್ರಗಳ ವೀಕ್ಷಣೆ ಸೇರಿದಂತೆ ಇನ್ನಿತರೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಅದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ಸಂಬಂಧಿಸಿದ ತಾಲೂಕುಗಳ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರ ಸಹಕಾರ ಅಗತ್ಯ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವರ್ಷಗಳ ಹಿನ್ನಲೆಯಲ್ಲಿ ಆ ಹೋರಾಟಕ್ಕೆ ಕರ್ನಾಟಕದ ಕೊಡುಗೆಯನ್ನು ಈ ಸಂದರ್ಭದಲ್ಲಿ ತಿಳಿಸಿಕೊಡುವ ಅಗತ್ಯವಿದೆ, ಅದನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಗುವುದು, ಸ್ವಾತಂತ್ರ್ಯಕ್ಕಾಗಿ ರಾಜ್ಯದಲ್ಲೂ ಸಾವಿರಾರು ಜನರ ಬಲಿದಾನವಾಗಿದೆ, ಸಾಕಷ್ಟು ಯಶೋಗಾಥೆಗಳಿವೆ, ಇನ್ನೂ ಕೆಲವು ಇತಿಹಾಸದ ಪುಟ ಸೇರಿಲ್ಲ, ಅಂತಹವುಗಳನ್ನು ಜಿಲ್ಲೆಯ ಯುವಜನತೆಗೆ ತಿಳಿಸಿಕೊಡಲಾಗುವುದು, ಈ ರೀತಿಯ ಅರ್ಥಪೂರ್ಣ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ ಎಂದು ಹೇಳಿದರು.


ಅದರ ಹಿನ್ನಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಕರ್ನಾಟಕದಲ್ಲಿ ಪ್ರಮುಖವಾಗಿ ಹೋರಾಟ ಮಾಡಿದ ಪ್ರಮುಖ 75 ಸ್ಥಳಗಳನ್ನು ಗುರುತಿಸಿ, ಆ ಬಗ್ಗೆ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಮೇ.28ರಂದು ಸಾವರ್ಕರ್ ಜಯಂತಿಯನ್ನು ಕೇಂದ್ರವಾಗಿಟ್ಟುಕೊಂಡು, ಅಮೃತ ಭಾರತಿಗೆ ಕನ್ನಡದಾರತಿಗೆ ರೂಪ ನೀಡಲಾಗಿದೆ ಎಂದರು.


ಜುಲೈ ಒಂದರಿಂದ 15ರ ವರೆಗೆ ಹೋರಾಟದ ನೆಲದಲ್ಲಿ ಒಂದು ದಿನ ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದೆ, ಸ್ವಾತಂತ್ರ್ಯಕ್ಕಾಗಿ ಪ್ರಮುಖ ಹೋರಾಟ ನಡೆದ ರಾಜ್ಯದ ಈಸೂರು, ಸುರಪುರ, ಅಮರಸುಳ್ಯ, ವಿಧುರಾಶ್ವತ್ಥ, ಕಿತ್ತೂರು, ನಂದಗಡ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಲ್ಲಿ ಪಿಕ್ನಿಕ್ ರೂಪದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೋಗುವಂತಹ ಕಾರ್ಯಕ್ರಮವಾಗಿದ್ದು, ಅಲ್ಲಿ ಸ್ಥಳದ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರ ಪರಿಚಯ, ಕಿರುಚಿತ್ರಗಳನ್ನು ತೋರಿಸಲಾಗುವುದು ಎಂದು ವಿವರಿಸಿದರು.


ಅದೇ ರೀತಿ ಆಗಸ್ಟ್ ಒಂದರಿಂದ 8ರ ವರೆಗೆ ರಾಜ್ಯದ 4 ಕಡೆಗಳಿಂದ ರಥಯಾತ್ರೆಯೊಂದನ್ನು ಆಯೋಜಿಸಲಾಗಿದೆ, ಮೈಸೂರು, ಬೆಂಗಳೂರು, ಬೆಳಗಾಂ ಹಾಗೂ ಕಲಬುರ್ಗಿಯ ಜಿಲ್ಲಾ ಕೇಂದ್ರದಿಂದ ಇವು ಹೊರಟು ರಾಜಧಾನಿಯನ್ನು ತಲುಪುತ್ತವೆ, ಆಗಸ್ಟ್ 9 ರಿಂದ ಮೂರು ದಿನ ಎಲ್ಲರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ತಿಳಿಸಲಾಗುವುದು ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲೆಯ ನಾಗರಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು, ಅದು ಸರ್ಕಾರಿ ಕಾರ್ಯಕ್ರಮವಾಗದೇ, ಎಲ್ಲರ ಕಾರ್ಯಕ್ರಮವಾಗಬೇಕು, ಅದಕ್ಕಾಗಿ ಸಾರ್ವಜನಿಕರ ಸಹಭಾಗಿತ್ವ ಅತಿ ಅಗತ್ಯವಾಗಿದೆ ಎಂದ ಸಚಿವರು, ಬ್ರಿಟಿಷರಿಗೂ ಮುನ್ನ ಮಂಗಳೂರಿನಲ್ಲಿ ಪೆÇೀರ್ಚುಗೀಸರ ವಿರುದ್ಧ ಹೋರಾಟ ನಡೆಸಲಾಗಿತ್ತು, ಅಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಸ್ತುವಾರಿ ಜಿಲ್ಲೆಯಲ್ಲೇ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಬೇಕು ಎಂದು ಹೇಳಿದರು.


ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ದಿ. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಧ್ಯಕ್ಷರಾದ ಸಂತೋಷ್ ರೈ ಬೋಳಿಯಾರ್, ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ್ ಆಳ್ವ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಶ್ರೀನಾಥ್, ಮಂಗಳೂರು ತಾಲೂಕು ಅಧ್ಯಕ್ಷ ಮಂಜುನಾಥ ರೇವಣಕರ್, ಸಾಹಿತಿಗಳು ಸೇರಿದಂತೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم