ವೈದ್ಯ ವೃತ್ತಿಯಲ್ಲಿರುವವರಿಗೆ ಕಾನೂನಿನ ಅರಿವು ಅಗತ್ಯ

Upayuktha
0

ಮೂಡುಬಿದಿರೆ: ವೈದ್ಯ ವೃತ್ತಿಯಲ್ಲಿರುವವರು ತಮ್ಮ ವೃತ್ತಿಗೆ ಸಂಬಂಧಪಟ್ಟಂತೆ ಸಂವಿಧಾನದಲ್ಲಿ ಲಭ್ಯವಿರುವ  ಕಾನೂನಿನ ಕುರಿತು ಜ್ಞಾನವನ್ನು ಹೊಂದಿರುವುದು ಅತೀ ಅಗತ್ಯ ಎಂದು ಮಣಿಪಾಲ ಮಾಹೆಯ ಸೆಂಟರ್ ಫಾರ್ ಬಿಸಿನೆಸ್ ಪ್ಯಾಕ್ಟೀಸ್‍ನ ಸಹಾಯಕ ಪ್ರಾಧ್ಯಪಕ ಡಾ ನವೀನ್ ಕುಮಾರ್ ಕೂಡಾಮರ ತಿಳಿಸಿದರು.


ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್‍ವತಿಯಿಂದ ಇಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ವೈದ್ಯ ವೃತ್ತಿಯಲ್ಲಿರುವವರಿಗೆ ಕಾನೂನಿನ ಅರಿವು ಎಂಬ ವಿಷಯದ ಕುರಿತು ಮಾತನಾಡಿದರು.


ವೈದ್ಯ ವೃತ್ತಿಯನ್ನು ನಿರ್ವಹಿಸುವಾಗ ಹತ್ತು ಹಲವು ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಬೇಕಾಗಿ ಬರಬಹುದು. ಅಂತಹ ಸಂಧರ್ಭದಲ್ಲಿ ಸೂಕ್ತ ಕಾನೂನಿನ ಅರಿವಿದ್ದರೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯ. ಅದೇ ರೀತಿ ರೋಗಿಗಳೂ ಸಹ ವೈದ್ಯರಿಂದ ಏನಾದರೂ ಸಮಸ್ಯೆಗಳಾದರೆ ಗ್ರಾಹಕ ನ್ಯಾಯಲಯದಲ್ಲಿ ದೂರನ್ನು ದಾಖಲಿಸಬಹುದು ಎಂದರು.


ರೋಗಿಗಳು ಹೇಗೆ ರಾಷ್ಟೀಯ ಗ್ರಾಹಕ ಸಹಾಯವಾಣಿ ಮುಖಾಂತರ ದೂರನ್ನು ದಾಖಲಿಸಬಹುದು ಎಂಬುದರ ಕುರಿತು ಮಾಹಿತಿ ನೀಡಿದರು. ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ಸಂಧರ್ಭದಲ್ಲಿ ಅನುಸರಿಸಬೇಕಾದ ಕಾನೂನಿನ ಸಲಹೆಗಳನ್ನು ನೀಡಿದರು.


ತುರ್ತುಚಿಕಿತ್ಸೆ ಸಂಧರ್ಭದಲ್ಲಿ ವೈದ್ಯರಾದವರು ರೋಗಿಗೆ ಚಿಕಿತ್ಸೆ ನೀಡುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕೇ  ಹೊರತು ಕಾನೂನಿನ ಔಪಚಾರಿಕತೆಗಳಿಗಲ್ಲ. ಚಿಕಿತ್ಸೆ ನೀಡಿದ ನಂತರ ಆ ವಿಷಯಗಳಿಗೆ ಗಮನ ನೀಡಬೇಕು ಎಂದರು. ನಂತರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಂವಾದದಲ್ಲಿ ಉತ್ತರಿಸಿದರು.


ಕೆಲವು ಸಂಧರ್ಭಗಳಲ್ಲಿ ಸತ್ಯ ಸಂಗತಿಗಳ ಕುರಿತು ತಾಮಸ ತೋರಿದರೂ ಒಪ್ಪಿಗೆಯಾಗಬಹುದು, ಆದರೆ  ಈ ನೆಲದ ಕಾನೂನಿನ ಕುರಿತು ಅಜ್ಞಾನ ತೋರ್ಪಡಿಸಿದರೆ ಅದು ಎಂದೂ ಸ್ವೀಕಾರಾರ್ಹವಲ್ಲ. 


ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ವೈದ್ಯ ವೃತ್ತಿ ಶ್ರೇಷ್ಠ ವೃತ್ತಿ. ಆ ವೃತ್ತಿಯ ಶ್ರೇಷ್ಠತೆಯನ್ನು ಎಲ್ಲಾ ಆಯಾಮದಲ್ಲೂ  ಕಾಪಾಡಿಕೊಂಡು ಬರಲೂ ಕಾನೂನಿನ ಅರಿವು ಅಗತ್ಯ. ಇಂದು ಗ್ರಾಮೀಣ ಭಾಗದಲ್ಲಿ ಆಯುಷ್ ವೈದ್ಯರು ಗಣನೀಯ ಸೇವೆಯನ್ನು ನೀಡಿತ್ತಿದ್ದಾರೆ. ಇದು ಪ್ರಶಾಂಸರ್ಹ ಎಂದರು.


ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಚಾರ್ಯ ಡಾ ರೋಶನ್ ಪಿಂಟೋ, ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಪಾಚಾರ್ಯೆ ಡಾ ವನಿತಾ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ಹೋಮಿಯೋಪತಿ ಕಾಲೇಜಿನ ವಿದ್ಯಾರ್ಥಿನಿ ಶ್ರುತಿ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top