ಮೇ 27: ಬಾನುಲಿಯಲ್ಲಿ 'ಮಾ ನಿಷಾದ 'ಯಕ್ಷಗಾನ ತಾಳಮದ್ದಳೆ ಪ್ರಸಾರ

Chandrashekhara Kulamarva
0

ಮಂಗಳೂರು: ಕರ್ನಾಟಕ ಯಕ್ಷಭಾರತಿ ಪುತ್ತೂರು ಪ್ರಸ್ತುತ ಪಡಿಸುವ 'ಮಾ ನಿಷಾದ' ಯಕ್ಷಗಾನ ತಾಳಮದ್ದಳೆ ಆಕಾಶವಾಣಿ ಮಂಗಳೂರು ನಿಲಯದಿಂದ ಮೇ 27 (ನಾಳೆ) ಶುಕ್ರವಾರ ರಾತ್ರಿ 9.30 ಕ್ಕೆ ಪ್ರಸಾರವಾಗಲಿದೆ. ಯಕ್ಷಗಾನ ವಾಲ್ಮೀಕಿ ದಿ.ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಜನಪ್ರಿಯ ಪ್ರಸಂಗ 'ಮಾ ನಿಷಾದ'ವನ್ನು ಯಕ್ಷ ಭಾರತಿಯ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಬಾನುಲಿ ಕಾರ್ಯಕ್ರಮಕ್ಕಾಗಿ ಸಂಯೋಜಿಸಿದ್ದಾರೆ. 


ಹಿಮ್ಮೇಳದಲ್ಲಿ ಪ್ರಶಾಂತ್ ರೈ ಪುತ್ತೂರು, ಪದ್ಯಾಣ ಜಯರಾಂ ಭಟ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಭಾಗವಹಿಸಿದ್ದಾರೆ. ಭಾಸ್ಕರ ರೈ ಕುಕ್ಕುವಳ್ಳಿ, ಎಂ.ಕೆ.ರಮೇಶಾಚಾರ್ಯ, ಗಣರಾಜ ಕುಂಬಳೆ, ರಮೇಶ ಸಾಲ್ವಣ್ಕರ್ ಮತ್ತು ಉಮೇಶಾಚಾರ್ಯ ಗೇರುಕಟ್ಟೆ ಅರ್ಥಧಾರಿಗಳಾಗಿ ಪಾತ್ರವಹಿಸಿದ್ದಾರೆ.


ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿ ಪಿ.ಎಸ್. ಸೂರ್ಯನಾರಾಯಣ ಭಟ್ ಈ ಕಾರ್ಯಕ್ರಮವನ್ನು ನಿರ್ಮಿಸಿ ಪ್ರಸಾರಕ್ಕೆ ಅಳವಡಿಸಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
To Top