|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಧುಮೇಹಿಗಳ ವಿಲನ್: ಗ್ಲೈಕೋಸಿಲೇಟೆಡ್ ಹಿಮೋಗ್ಲೋಬಿನ್

ಮಧುಮೇಹಿಗಳ ವಿಲನ್: ಗ್ಲೈಕೋಸಿಲೇಟೆಡ್ ಹಿಮೋಗ್ಲೋಬಿನ್ಮಧುಮೇಹ ಅಥವಾ ಸಿಹಿಮೂತ್ರ ರೋಗ ಎನ್ನುವುದು ನಿರ್ನಾಳ ಗ್ರಂಥಿಗೆ ಸಂಬಂಧಿಸಿದ ರೋಗವಾಗಿದ್ದು, ಕಾರ್ಬೊಹೈಡ್ರೇಟ್ ಅಥವಾ ಶರ್ಕರಪಿಷ್ಠ ಹಾಗೂ ಸಕ್ಕರೆ ಅಥವಾ ಗ್ಲುಕೋಸ್‌ಗಳ ಚಯಾಪಚಯ ಪ್ರಕ್ರಿಯೆಯ ವ್ಯತ್ಯಯದಿಂದ ಉಂಟಾಗುವ ರೋಗಸ್ಥಿತಿಯಾಗಿರುತ್ತದೆ. ದೇಹದಲ್ಲಿನ ಸಕ್ಕರೆಯ ಮೆಟಬಾಲಿಸಮ್‌ಗೆ ಅಗತ್ಯವಿರುವ ಇನ್ಸುಲಿನ್ ಎಂಬ ರಸದೂತ ಮೆದೋಜಿರಕ ಎಂಬ ನಿರ್ನಾಳ ಗ್ರಂಥಿಯಿಂದ ಸ್ರವಿಲ್ಪಡುತ್ತದೆ. ಇನ್ಸುಲಿನ್ ರಸದೂತದ ಕಡಿಮೆ ಸ್ರವಿಸುವಿಕೆ ಮತ್ತು ಇನ್ಸುಲಿನ್ ರಸದೂತಗಳ ಗುಣಮಟ್ಟದಲ್ಲಿನ ನ್ಯೂನ್ಯತೆಯಿಂದಾಗಿ ಮಧುಮೇಹ ರೋಗ ಬರುತ್ತದೆ. ರಕ್ತದಲ್ಲಿನ ಗ್ಲುಕೋಸ್‌ನ ಮಟ್ಟವನ್ನು ಕಾಯ್ದುಕೊಳ್ಳಲು ಇನ್ಸುಲಿನ್ ಅತಿ ಅಗತ್ಯವಾಗಿರುತ್ತದೆ ಮತ್ತು ರಕ್ತದಿಂದ ಗ್ಲುಕೋಸ್‌ನ್ನು ಜೀವಕೋಶಗಳಿಗೆ ತಲುಪಿಸುವ ಬಹುಮುಖ್ಯ ಭೂಮಿಕೆಯನ್ನು ಇನ್ಸುಲಿನ್ ರಸದೂತ ನಿರ್ವಹಿಸುತ್ತದೆ.


ಸಿಹಿಮೂತ್ರ ರೋಗದ ನಿಯಂತ್ರಣದ ಸ್ಥಿತಿಗತಿಯ ಬಗ್ಗೆ ಮಾಹಿತಿಗಾಗಿ ಹಲವಾರು ಪರೀಕ್ಷೆಗಳನ್ನು ನಡೆಸಲಾಗುತ್ತದೆ. FBS, PPBS, RBS ಎಂಬ ಎಲ್ಲಾ ಪರೀಕ್ಷೆಗಳು ಎಲ್ಲಾ ಮಧುಮೇಹಿ ರೋಗಿಗಳಿಗೆ ಪರಿಚಿತವೇ. ಈಃS ಎಂದÀರೆ ಪಾಸ್ಟಿಂಗ್ ಬ್ಲಡ್ ಷುಗರ್ ಅಂದರೆ 6 ರಿಂದ 8 ಗಂಟೆಗಳ ಕಾಲ ಏನನ್ನೂ ತಿನ್ನದೆ ರಕ್ತ ಪರೀಕ್ಷೆ ಮಾಡಿ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಪತ್ತೆ ಮಾಡಲಾಗುತ್ತದೆ. ಊಟದ ಬಳಿಕ ಮಾಡುವ ಪರೀಕ್ಷೆಗೆ PPBS ಎಂದೂ ಕರೆಯುತ್ತಾರೆ. ರಕ್ತದಲ್ಲಿನ ನರ‍್ಮಲ್ ಗ್ಲುಕೋಸ್ ಅಂಶ ೧೨೦ mg/ಜಐ ಇದ್ದಲ್ಲಿ ಈಃS ಅಂಶ ೯೦ ರಿಂದ ೧೧೦ mg/ಜಐ ನಷ್ಟಿರುತ್ತದೆ. ಅದೇ ರೀತಿ ಮೂತ್ರದಲ್ಲಿನ ರಕ್ತದ ಅಂಶವನ್ನು ಪತ್ತೆ ಹಚ್ಚಿ ಮಧುಮೇಹವನ್ನು ಪತ್ತೆ ಹಚ್ಚುತ್ತಾರೆ. ಅದಕ್ಕೆ ಈ ಎಲ್ಲಾ ಪರೀಕ್ಷೆಗಳು ದಿನಂಪ್ರತಿ ಮತ್ತು ಗಂಟೆ ಗಂಟೆಗೂ ಬದಲಾಗುತ್ತಿರುವವುದು. ಈ ಪರೀಕ್ಷೆಗಳ ಫಲಿತಾಂಶ ಆಯಾ ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತದೆ, ಮತ್ತು ಆ ದಿನದ ರಕ್ತದಲ್ಲಿನ ಸಕ್ಕರೆಯ ಅಂಶದ ಬಗ್ಗೆ ಮಾತ್ರ ಮಾಹಿತಿ ನೀಡುತ್ತದೆ. ಇದರ ಜೊತೆಗೆ ಮಾನಸಿಕ ಒತ್ತಡ, ನಿದ್ರಾಹೀನತೆ, ವ್ಯಾಯಾಮ, ಪಥ್ಯ, ಸೇವಿಸಿದ ಡಯಾಬಿಟಿಸ್ ವ್ಯಾಧಿಯ ಔಷಧಿಗಳ ಪ್ರಮಾಣ ಮುಂತಾದ ಅಂಶಗಳು ರಕ್ತದಲ್ಲಿನ ಗ್ಲುಕೋಸ್ ಮಟ್ಟದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಅದೇ ರೀತಿ ಬೆಳಗ್ಗಿನ ಹೊತ್ತು ರಕ್ತದಲ್ಲಿನ ಸಕ್ಕರೆ ಅಂಶ ಜಾಸ್ತಿ ಇದ್ದಲ್ಲಿ ಸಾಯಂಕಾಲದ ಹೊತ್ತು ಗ್ಲುಕೋಸ್ ಪ್ರಮಾಣ ಸಹಜವಾಗಿ ಕಡಿಮೆಯಾಗುತ್ತದೆ. ಹೀಗಾಗಿ ಮೇಲೆ ತಿಳಿಸಿದ ಪರೀಕ್ಷೆಗಳು, ಆಯಾ ದಿನದ ಅಥವಾ ಹಿಂದಿನ ದಿನದ ರಕ್ತದ ಸಕ್ಕರೆಯ ಮಟ್ಟವನ್ನು ತಿಳಿಸುತ್ತದೆ. ಈ ಪರೀಕ್ಷೆಗಳಿಂದ ಮಧುಮೇಹ ರೋಗದ ದೀರ್ಘಕಾಲದ ನಿಯಂತ್ರಣದ ಬಗ್ಗೆ ಯಾವ ಮಾಹಿತಿಯನ್ನು ನೀಡಲಾರದು. ಡಯಾಬಿಟಿಸ್ ಎನ್ನುವುದು ದೀರ್ಘಕಾಲಿಕ ಖಾಯಿಲೆಯಾಗಿದ್ದು, ದೀರ್ಘಕಾಲ ಅನಿಯಂತ್ರಿತ ಗ್ಲುಕೋಸ್‌ನಿಂದಾಗಿ ದೇಹದ ಪ್ರಮುಖ್ಯ ಅಂಗಗಳಾದ ಕಣ್ಣು, ರೆಟಿನಾ, ಕಿಡ್ನಿ, ಹೃದಯ, ನರಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ದೀರ್ಘಕಾಲಿಕ ಡಯಾಬಿಟಿಸ್‌ನ ನಿಯಂತ್ರಣವನ್ನು ತಿಳಿಯಲೆಂದು ಇತ್ತೀಚೆಗೆ ವಿಜ್ಞಾನಿಗಳು “ಗ್ಲೆöÊಕೋಸಿಲೇಟೆಡ್ ಹಿಮೊಗ್ಲೊಬಿನ್” ಎಂಬ ಪರೀಕ್ಷೆಯನ್ನು ಕಂಡುಹಿಡಿದ್ದಾರೆ.


ಏನಿದು ಗ್ಲೈಕೋಸಿಲೇಟೆಡ್ ಹಿಮೋಗ್ಲೋಬಿನ್?

ನಮ್ಮ ದೇಹದಲ್ಲಿನ ಕೆಲವು ಕೆಂಪು ರಕ್ತಕಣಗಳ ಒಳಗೆ  ಹಿಮೋಗ್ಲೊಬಿನ್ ಎಂಬ ಪ್ರೋಟಿನ್ ಇರುತ್ತದೆ. ಸಾಮಾನ್ಯವಾಗಿ 12 ರಿಂದ 15 g/dL ಇದರ ನಾರ್ಮಲ್ ಪ್ರಮಾಣವಾಗಿರುತ್ತದೆ. ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಜಾಸ್ತಿಯಾದಾಗ, ಹೆಚ್ಚಾದ ಸಕ್ಕರೆಯ ಅಂಶವನ್ನು ಹಿಮೋಗ್ಲೋಬಿನ್ ಹೀರಿಕೊಂಡು ಶೇಖರಿಸಿಕೊಂಡಿರುತ್ತದೆ. ಪ್ರತಿ ಕೆಂಪು ರಕ್ತಕಣಗಳ ಆಯುಷ್ಯ 120 ದಿನ ಗಳಾಗಿರುವುದರಿಂದ, ರಕ್ತದಲ್ಲಿನ ಗ್ಲೈಕೋಸಿಲೇಟಿಡ್ ಹೀಮೋಗ್ಲೋಬಿನ್ ಅಂಶ ತಿಳಿಯುದರಿಂದ ಮೂರು ತಿಂಗಳುಗಳ ರಕ್ತದಲ್ಲಿನ ಗ್ಲುಕೋಸ್ ಅಂಶವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಈ ಪರೀಕ್ಷೆ ಮುಖಾಂತರ ಮೂರು ತಿಂಗಳ ಸಕ್ಕರೆ ಪ್ರಮಾಣದ ನಿಯಂತ್ರಣವನ್ನು ನಿಖರವಾಗಿ ತಿಳಿಯಬಹುದಾಗಿದೆ. ದಿನದ ಯಾವ ಸಮಯದಲ್ಲಿಯೂ ಈ ಪರೀಕ್ಷೆ ಮಾಡಿಸಬಹುದು. ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿಯೇ ಪರೀಕ್ಷೆ ಮಾಡಬೇಕೆಂಬ ಅನಿವರ‍್ಯತೆ ಇಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಪರೀಕ್ಷೆ ಮಾಡಿಸಿ ಮಧುಮೇಹ ನಿಯಂತ್ರಣದ ನಿಖರತೆಯನ್ನು ಪರೀಕ್ಷಿಸಬಹುದಾಗಿದೆ. 7 ಕ್ಕಿಂತ ಒಳಗೆ ಈ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಅತೀ ಅಗತ್ಯ. 5 ರಿಂದ 7ರ ಮಟ್ಟವು ಅತಿ ಕಟ್ಟುನಿಟ್ಟಿನ ಮಧುಮೇಹ ನಿಯಂತ್ರಣವನ್ನು ಎತ್ತಿ ತೋರಿಸುತ್ತಾರೆ. 5ಕ್ಕಿಂತ ಕಡಿಮೆ ಇದ್ದರೆ ನಿರೆಚ್ಚರ ಅಥವಾ ಡಯಾಬಿಟಿಸ್ ಕೋಮಾಕ್ಕೆ ಹೋಗುವ ಸಾಧ್ಯತೆ ಇರುತ್ತದೆ. 8 ರಿಂದ 9 ರ ಮಟ್ಟದಲ್ಲಿ ಇದ್ದರೆ ನಿರ್ಲಕ್ಷಿತ ನಿಯಂತ್ರಣವನ್ನು  ಸಾರುತ್ತದೆ. 10 ಕ್ಕಿಂತ ಜಾಸ್ತಿ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಒಟ್ಟಿನಲ್ಲಿ ವೈದ್ಯರಿಗೆ ಈ ಪರೀಕ್ಷೆ ಮುಖಾಂತರ ರೋಗಿಯ ನಿಜವಾದ ಬಣ್ಣವನ್ನು ಬಯಲಿಗೆಳೆಯಲು ಬಹಳ ಸುಲಭವಾಗುತ್ತದೆ.


ಕೊನೆಮಾತು:

ಮಧುಮೇಹ ಎನ್ನುವುದು ದಿನ ಬೆಳಗಾಗುವುದರಲ್ಲಿ ಕೊಲ್ಲುವ ರೋಗವಲ್ಲ ನಿಧಾನವಾಗಿ ಒಂದೊಂದೇ ಅಂಗವನ್ನು ಹಾಳುಗೆಡವಿ ರೋಗಿಯನ್ನು ಕೊನೆಗೆ ಅಪೋಷನ ತೆಗೆದುಕೊಳ್ಳುತ್ತದೆ. ಮಧುಮೇಹ ರೋಗದ ಚಿಕಿತ್ಸೆಯಲ್ಲಿ ನಿರಂತರವಾದ ಮಧುಮೇಹ ನಿಯಂತ್ರಣಕ್ಕೆ ವೈದ್ಯರು ಹೆಚ್ಚು ಒತ್ತು ನೀಡುತ್ತಾರೆ. ನಿರಂತರ ವ್ಯಾಯಾಮ, ಪಥ್ಯಾಹಾರ, ಶಿಸ್ತಿನ ಔಷಧಿ ಸೇವನೆ ಮತ್ತು ಉತ್ತಮ ಜೀವನ ಶೈಲಿ ಅಳವಡಿಸಿಕೊಂಡಲ್ಲಿ, ರೋಗವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಮಧುಮೇಹ ರೋಗದ ಚಿಕಿತ್ಸೆಯಲ್ಲಿ ಖಾಯಿಲೆಯನ್ನು ಗುಣಪಡಿಸುದಕ್ಕಿಂತ, ಖಾಯಿಲೆಯ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದನ್ನು ರೋಗಿಗಳು ಅರಿತು, ವೈದ್ಯರ ಜೊತೆ ಸಹಕರಿಸಿದಲ್ಲಿ ರೋಗ ಮುಕ್ತ ಸಮಾಜವನ್ನು ನಿರ್ಮಿಸಬಹುದಾಗಿದೆ.

-ಡಾ| ಮುರಲೀ ಮೋಹನ್ ಚೂಂತಾರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post