ಮಂಗಳೂರು: ನಗರದ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜು ಇಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ ಮತ್ತು ಮಂಗಳೂರು ಹವ್ಯಕ ಸಭಾ ಇವರ ಆಶ್ರಯದಲ್ಲಿ ವೇದಮಾಯು ಆಸ್ಪತ್ರೆ ಇದರ ಸಹಕಾರದೊಂದಿಗೆ ಉಚಿತ ಎಲುಬು ಸಾಂದ್ರತೆ ತಪಾಸಣೆ ಶಿಬಿರ ಇಂದು (ಭಾನುವಾರ, ಏ.3) ಜರುಗಿತು.
ಸುಮಾರು 105 ಮಂದಿ ಈ ಶಿಬಿರದಲ್ಲಿ ಎಲುಬು ಸಾಂದ್ರತೆ ತಪಾಸಣೆ ಮಾಡಿಸಿಕೊಂಡರು. ಡಾ ಕೇಶವ ರಾಜ್ ತಪಾಸಣೆ ನಡೆಸಿ ಕೊಟ್ಟರು. ಚೂಂತಾರು ಸರೋಜಿನಿ ಪ್ರತಿಷ್ಟಾನದ ಡಾ ಮುರಲಿ ಮೋಹನ್ ಚೂಂತಾರು, ಹವ್ಯಕ ಸಭಾ ಮಂಗಳೂರು ಇದರ ಅಧ್ಯಕ್ಷರಾದ ಡಾ ರಾಜೇಂದ್ರ ಪ್ರಸಾದ್, ಶ್ರೀ ಸುಬ್ರಾಯ ಭಟ್, ಡಾ ಕೇಶವ ಭಟ್, ಭಾರತಿ ಕಾಲೇಜಿನ ಶ್ರೀ ಕೃಷ್ಣ ನೀರಮೂಲೆ, ಗುರಿಕಾರ ಶ್ರೀ ಸುನಿಲ್ ಭಟ್ ಈ ಶಿಬಿರದಲ್ಲಿ ಸಹಕಾರ ನೀಡಿದರು.
40 ವರುಷ ದಾಟಿದ ಬಳಿಕ ಎಲ್ಲರೂ ಎಲುಬಿನ ಸಾಂದ್ರತೆ ತಿಳಿದು ಕೊಂಡರೆ ಮುಂದೆ ಬರುವ ತೊಂದರೆ ಗಳನ್ನು ತಡೆಗಟ್ಟಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಡ್ಡಾಯವಾಗಿ ಎಲುಬು ಸಾಂದ್ರತೆ ತಿಳಿದು ಕೊಂಡರೆ ಉತ್ತಮ ಎಂದು ಡಾ ಚೂಂತಾರು ಸಲಹೆ ನೀಡಿದರು. ಅತಿಯಾದ ಸ್ಟೀರಾಯ್ಡ್ ಸೇವನೆ, ರಸದೂತಗಳ ಅನಗತ್ಯ ಬಳಕೆ, ಅತಿಯಾದ ನೋವು ನಿವಾರಕಗಳ ಬಳಕೆ ಮತ್ತು ಅನಾರೋಗ್ಯಕರ ಆಹಾರ ಪದ್ದತಿಯಿಂದಾಗಿ ನಡು ವಯಸ್ಸಿನಲ್ಲಿಯೇ ಎಲುಬು ಟೊಳ್ಳಾಗಿ ಎಲುಬು ಮುರಿತ ಉಂಟಾಗುತ್ತದೆ ಎಂದು ಅವರು ತಿಳಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ