ಉಡುಪಿ: ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದಿಂದ ಶೂನ್ಯ ನೆರಳಿನ ವಿದ್ಯಮಾನ ವೀಕ್ಷಣೆ

Upayuktha
0

ಉಡುಪಿ: ಇಂದು (ಏಪ್ರಿಲ್ 25) ಉಡುಪಿಯಲ್ಲಿ ಮಧ್ಯಾಹ್ನ 12.29 ಗಂಟೆಗೆ ಶೂನ್ಯ ನೆರಳಿನ ವಿದ್ಯಮಾನವನ್ನು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸದಸ್ಯರು ವೀಕ್ಷಿಸಿದರು. ಸಂಘದ ಯೂಟ್ಯೂಬ್ ಚಾನೆಲ್ ನ ಮೂಲಕ 12.15 ರಿಂದ 12.45 ರ ತನಕ ಶೂನ್ಯ ನೆರಳಿನ ಕ್ಷಣದ ನೇರ ಪ್ರಸಾರವನ್ನು ಮಾಡಲಾಯಿತು.


ವೀಕ್ಷಕರು ನೆರಳು ಕಣ್ಮರೆಯಾಗಿ ಹೋಗಿ ಪುನಃ ಕಾಣಿಸಿಕೊಳ್ಳುವುದನ್ನು ವೀಕ್ಷಿಸಿದರು. ಅನೇಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ತಮ್ಮ ಮನೆಯ ವಿವಿಧ ವಸ್ತುಗಳ ನೆರಳು ಮರೆಯಾಗುವ ಛಾಯಾಚಿತ್ರಗಳನ್ನು ಸೆರೆ ಹಿಡಿದರು.


ಬ್ರಹ್ಮಾವರ ಮತ್ತು ಕುಂದಾಪುರದ ಜನರು ಏಪ್ರಿಲ್ 26ರಂದು 12:20 ರಿಂದ 12:30 ರ ನಡುವೆ ಈ ವಿದ್ಯಮಾನವನ್ನು ವೀಕ್ಷಿಸಬಹುದು. ಈ ಸಂದರ್ಭದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎ.ಪಿ. ಭಟ್ ಮತ್ತು ಪ್ರಸಕ್ತ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಅವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top