|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅನಾಥರೊಂದಿಗೆ ವಿಷು ಹಬ್ಬ ಆಚರಿಸಿ ಸಂಭ್ರಮಿಸಿದ ಮಂಜೇಶ್ವರದ ಯುವ ನ್ಯಾಯವಾದಿ ನವೀನ್ ರಾಜ್ ಕೆ.ಜೆ

ಅನಾಥರೊಂದಿಗೆ ವಿಷು ಹಬ್ಬ ಆಚರಿಸಿ ಸಂಭ್ರಮಿಸಿದ ಮಂಜೇಶ್ವರದ ಯುವ ನ್ಯಾಯವಾದಿ ನವೀನ್ ರಾಜ್ ಕೆ.ಜೆ


ಮಂಗಳೂರು: ಸಮಾಜ ಸೇವಕ, ಬಿಜೆಪಿ ಮುಖಂಡ, ಖ್ಯಾತ ಯುವ ನ್ಯಾಯವಾದಿ ನವೀನ್ ರಾಜ್ ಕೆ.ಜೆ  ಅವರು ಅನಾಥ ಆಶ್ರಮವಾಸಿಗಳೊಂದಿಗೆ ಈ ವರ್ಷದ ವಿಷು ಹಬ್ಬವನ್ನು ಆಚರಿಸಿಕೊಂಡು ಸಮಾಜಕ್ಕೆ ಸಶಕ್ತ ಸಂದೇಶ ಸಾರುವಲ್ಲಿ ಮಾದರಿಯಾಗಿದ್ದಾರೆ.


ವಿಷು ಹಬ್ಬದ ಮುನ್ನಾದಿನದಂದು ಮಂಗಳೂರಿನ ಕಾಪಿಕ್ಕಾಡ್‌ನಲ್ಲಿರುವ ಸ್ನೇಹ ದೀಪಂ ಅನಾಥಾಶ್ರಮಕ್ಕೆ ಹಣ್ಣು, ತರಕಾರಿ ಮತ್ತು ಇತರ ದಿನಸಿ ಸಾಮಾನುಗಳೊಂದಿಗೆ ತಮ್ಮ ತಂಡದೊಂದಿಗೆ ಭೇಟಿ ನೀಡಿದ  ನ್ಯಾಯವಾದಿ ನವೀನ್ ರಾಜ್ ಕೆ.ಜೆ. ಸುಮಾರು ಎರಡು ಗಂಟೆಗಳ ಕಾಲ ಅಲ್ಲಿನ ಮಕ್ಕಳೊಂದಿಗೆ ಮತ್ತು ಆಶ್ರಮದ ನಿರ್ವಾಹಕರೊಂದಿಗೆ ಕಳೆದರು. ಬಳಿಕ "ಸೇವಾಶ್ರಮ"ದ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿಗೂ ತರಕಾರಿ ಹಣ್ಣುಹಂಪಲು ಇನ್ನಿತರ ನಿತ್ಯೋಪಯೋಗಿ ಸಾಮಾಗ್ರಿಗಳನ್ನು ನೀಡಿ ತಮ್ಮ ವಿಶಿಷ್ಟ ಸೇವೆಯನ್ನು ನೀಡುವ ಮೂಲಕ ಆನಾಥ ಆಶ್ರಮವಾಸಿಗಳ ಸಂತೋಷದಲ್ಲಿ ಪಾಲ್ಗೊಂಡು ಪ್ರೇರಣದಾಯಕರಾದರು.


ಕಳೆದ ಹಲವಾರು ವರ್ಷಗಳಿಂದ ತನ್ನ ಸಮಾಜ ಸೇವಾನುಷ್ಠಾನದಿಂದ ಜನಜನಿತರಾಗಿರುವ ನವೀನ್ ರಾಜ್ ಅವರು ಈ ಬಾರಿಯೂ ವರ್ಷಂಪ್ರತಿಯಂತೆ ವಿಶಿಷ್ಟಮಯವಾಗಿ ವಿಷು ಹಬ್ಬದ ಸಡಗರಕ್ಕೆ ಸ್ಪೂರ್ತಿಯಾಗಿದ್ದಾರೆ. ಪ್ರತಿ ವರ್ಷ ಕೇರಳದ ವಿವಿಧ ಆನಾಥ ಆಶ್ರಮಗಳಲ್ಲಿ ಆಚರಿಸುತ್ತಿದ್ದ ನವೀನ್ ರಾಜ್ ಅವರು ಈ ಬಾರಿ ಕರ್ನಾಟಕದ ಮಂಗಳೂರಿನ ಎರಡು ಸೇವಾಶ್ರಮಗಳನ್ನು ಆಯ್ಕೆ ಮಾಡಿಕೊಂಡಿದ್ದರು.


ಈ ಬಗ್ಗೆ ಆಶ್ರಮದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಾ "ಜಗತ್ತಿನಾದ್ಯಂತ ಎರಡು ಮುಖದ ಜನರು ಕಾಣ ಸಿಗುತ್ತಾರೆ. ಒಂದು ಅತೀ ಶ್ರೀಮಂತಿಕೆಯಿಂದ ಆಡಂಬರದ ಜೀವನ ನಡೆಸುವವರು ಹಾಗೂ ಇನ್ನೊಂದು ಏನೂ ಇಲ್ಲದೆ ಬಡತನದಿಂದ ನಿಸ್ಸಾಹಯಕರಾದವರು. ಮಾನವ ಜೀವನದಲ್ಲಿ ಕಂಡು ಬರುವ ಈ ಎರಡು ಮುಖಗಳಲ್ಲಿ ಸಾಮೀಪ್ಯತೆ ಸೃಷ್ಠಿಸಬೇಕೆಂಬ ಉದ್ದೇಶದಿಂದ ತಾವು ಅನಾಥರೆಂದು ಅನಿಸಿದವರಲ್ಲಿ ತಮಗೇನೂ ಆಚರಿಸಲು ಸಾಧ್ಯವಿಲ್ಲ ಎಂಬುದನ್ನು ದೂರೀಕರಿಸಲು ಅಂತಹವರನ್ನು ರಕ್ಷಿಸಲು ಸಿದ್ಧರಿರುವ ಜನರಿದ್ದಾರೆ ಎಂಬ ಭಾವನೆಯನ್ನು ಹುಟ್ಟು ಹಾಕಬೇಕೆಂಬ ಉದ್ದೇಶದಿಂದ ಅವರು ಹಬ್ಬ ಆಚರಣೆಗಳನ್ನು ನಡೆಸಿ ಸಂತೋಷ ಪಡುವಾಗ ಅದಕ್ಕೆ ಅಗತ್ಯ ಸಹಕಾರ ನೀಡುವುದೇ ಈ ರೀತಿಯ ಸಮಾಜ ಸೇವೆಯ ಹಿಂದಿನ ಉದ್ದೇಶ" ಎಂದರು.


"ಸಮುದಾಯದ ಒಳಿತಿಗಾಗಿ ನಮ್ಮಿಂದ ಸಾಧ್ಯವಾದುದನ್ನು ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂಬ ಸಂದೇಶಕ್ಕೆ ಇದು ಪ್ರೇರಣದಾಯಕವಾಗಲಿ" ಎಂದರು.


ಆನಾಥ ಆಶ್ರಮವಾಸಿಗಳಿಗೆ ಸ್ವತಃ ಸಿಹಿ ತಿಂಡಿ ನೀಡಿ ಎಲ್ಲರಿಗೂ ವಿಷು ಹಬ್ಬದ ಶುಭಾಶಯ ಕೋರಿ ಈ ಪರಿಸರದಲ್ಲಿ ಹೊಸ ಸ್ಪೂರ್ತಿ ಸೃಷ್ಠಿಸಿ ಹಬ್ಬ ಆಚರಣೆಗೊಂದು ಕಳೆ ತಂದರು.


ಈ ಸಂದರ್ಭದಲ್ಲಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ. ಅವರೊಂದಿಗೆ ಸಾಮಾಜಿಕ ಕಾರ್ಯಕರ್ತರಾದ ತುಳಸಿದಾಸ್ ಮಂಜೇಶ್ವರ, ರತನ್ ಕುಮಾರ್ ಹೊಸಂಗಡಿ, ಯಶ್ ರಾಜ್ ಮಂಜೇಶ್ವರ, ಕಿಶೋರ್ ಭಗವತೀ ಅವರು ಪಾಲ್ಗೊಂಡಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم