ಏ.16ರಂದು ವಿವಿವಿ ಪಾಕಲೋಕ- ಸಾಂಪ್ರದಾಯಿಕ ವಿ ವಿ ವಿ ಪಾಕಮೇಳ 2022

Upayuktha
0

`ವಿಶೇಷ ವಿಶಿಷ್ಟ ವಿಷಮುಕ್ತ' ಬಾಳೆಮೇಳ ಪೂರ್ವಭಾವೀ ಸಿದ್ಧತಾ ಸಭೆ 



ಬದಿಯಡ್ಕ: ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಮುಳ್ಳೇರಿಯ ಹವ್ಯಕ ಮಂಡಲದ ಮತ್ತು ಮಹಿಳೋದಯ ಬದಿಯಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ವಿವಿವಿ ಪಾಕಲೋಕ ಸಮಿತಿಯ ನೇತೃತ್ವದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಪ್ರಚಾರದಂಗವಾಗಿ ಶ್ರೀ ಭಾರತೀ ವಿದ್ಯಾ ಪೀಠ ಬದಿಯಡ್ಕ ಇದರ ಪರಿಸರದಲ್ಲಿ ದಿನಾಂಕ 16 ಎಪ್ರಿಲ್ 2022  ಶನಿವಾರ- ವಿವಿವಿ ಪಾಕಲೋಕ- ಸಾಂಪ್ರದಾಯಿಕ ವಿವಿವಿ ಪಾಕಮೇಳ 2022- ಸಮಾರಂಭವು ಜರಗಲಿದ್ದು ಈ ಕುರಿತು ಪೂರ್ವಭಾವೀ ಸಿದ್ಧತಾ ಸಭೆಯು ಬದಿಯಡ್ಕ ಶ್ರೀ ಭಾರತೀ ವಿದ್ಯಾ ಪೀಠದಲ್ಲಿ ಮಾರ್ಚ್‌ 30ರಂದು ಜರಗಿತು.

 

ಮಂಡಲಾಧ್ಯಕ್ಷ ಹಾಗೂ ವಿವಿವಿ ಪಾಕಲೋಕ ಸಮಿತಿಯ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಇವರು ಅಧ್ಯಕ್ಷಸ್ಥಾನ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸಭಾ ನಿರ್ವಹಣೆ ಮಾಡಿದರು. ಪಾಕಲೋಕ ಸಮಿತಿಯ ಗೌರವಾಧ್ಯಕ್ಷ ಡಾ. ವೈ.ವಿ.ಕೃಷ್ಣಮೂರ್ತಿ ಇವರು ಸಾಮಾರಂಭದ ಸಮಗ್ರ ಸ್ವರೂಪದ ಕುರಿತು ಮಾಹಿತಿಗಳನ್ನಿತ್ತರು.


ಪ್ರಧಾನ ಕಾರ್ಯದರ್ಶಿ ಈಶ್ವರಿ ಬೇರ್ಕಡವು ಇವರು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿರುವ ಬಾಕಾಹುವಿನ ವಿವಿಧ ಉತ್ಪನ್ನಗಳ ತಾಯಾರಿ ವಿತರಣೆ ವಿಧಾನಗಳ ಮಾಹಿತಿಗಳನ್ನು ವಿವರಿಸಿದರು.


ವಿಭಾಗವಾರು ಪ್ರಮುಖರು ತಮ್ಮ ವಿಭಾಗ ಪ್ರಗತಿ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸಿ ಸಮಗ್ರ ವಿಚಾರ ವಿಮರ್ಶೆ ನಡೆಯಿತು.


ಈ ಸಂದರ್ಭದಲ್ಲಿ ಬಾಕಾಹು ಉತ್ಪನ್ನಗಳ ಮಾರಾಟ ಮತ್ತು ಖರೀದಿಯನ್ನು ಮತ್ತು ಡಿಜಿಟಲ್ ಪಾವತಿಯ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು.


ವಿ.ವಿ.ವಿ. ಪಾಕಲೋಕ ಸಮಿತಿ ಸದಸ್ಯರು, ಮಂಡಲ, ವಲಯ ಪದಾಧಿಕಾರಿಗಳು, ಸಂಪರ್ಕ ಸೇತು ಸದಸ್ಯರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top