ಎಲ್ಲೂರು: ಇಲ್ಲಿಯ ಕುಂಜೂರು ಶ್ರೀದುರ್ಗಾ ದೇವಸ್ಥಾನದಲ್ಲಿ ಕೆ.ಎಲ್.ಕುಂಡಂತಾಯರ ದೈವ- ಭೂತಾರಾಧನೆಯ ಕುರಿತ ಲೇಖನಗಳ ಸಂಗ್ರಹ 'ನಡುವಣ ಲೋಕದ ನಡೆ' ದೈವಾರಾಧನೆಯ ನೆಲೆ- ಕಲೆ ಬಿಡುಗಡೆಗೊಂಡಿತು.
ಜಾನಪದ ವಿದ್ವಾಂಸ ಡಾ. ವೈ.ಎನ್. ಶೆಟ್ಟಿ ಹಾಗೂ ಸಾಮಾಜಿಕ ಕಾರ್ಯಕರ್ತ ಸುರೇಶ ಶೆಟ್ಟಿ ಗುರ್ಮೆ 'ನಡುವಣ ಲೋಕದ ನಡೆ'ಯನ್ನು ಬಿಡುಗಡೆಗೊಳಿಸಿದರು. ಸಾಹಿತಿ, ಲೇಖಕ ಡಾ.ಜನಾರ್ದನ ಭಟ್ ಕೃತಿಯನ್ನು ಪರಿಚಯಿಸಿದರು.
ಜಾನಪದ ವಿದ್ವಾಂಸ ಡಾ.ಅಶೋಕ ಆಳ್ವ, ಉದ್ಯಮಿ ನಾರಾಯಣ ಕೆ.ಶೆಟ್ಟಿ, ನಡಿಮನೆ ದೇವರಾಜ ರಾವ್, ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್, ದೇವಳದ ಮ್ಯಾನೇಜರ್ ರಾಘವೇಂದ್ರ ಶೆಟ್ಟಿ ಹಾಗೂ ಕೆ.ಎಲ್. ಕುಂಡಂತಾಯ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ