ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ 12 ದಿನಗಳ ರಾಜ್ಯಮಟ್ಟದ ವಿಜ್ಞಾನ ಶಿಬಿರ ಯುರೇಕಾದ ಹತ್ತನೇ ದಿನದ ಕಾರ್ಯಕ್ರಮದಲ್ಲಿ ಪುತ್ತೂರು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಡಾ. ಶ್ರೀಶ ಭಟ್ ಮತ್ತು ಸದಸ್ಯರಿಂದ ವ್ಯಕ್ತಿತ್ವ ಅಭಿವೃದ್ದಿ ಎಂಬ ವಿಷಯದ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು. ಒಟ್ಟು ಮೂರು ಅವಧಿಯಲ್ಲಿ ಈ ಕಾರ್ಯಕ್ರಮ ರೂಪುಗೊಂಡಿತು.
ಮೊದಲ ಅವಧಿಯಲ್ಲಿ ಡಾ. ಶ್ರೀಶ ಭಟ್ ಸಾಮಾಜಿಕ ಜಗತ್ತಿನಲ್ಲಿ ಯುವಜನರ ಪ್ರಾಮುಖ್ಯತೆ, ಡಿಜಿಟಲ್ ಮಿಡಿಯಾದ ಅಗತ್ಯತೆ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿರುವ ನಿಯಮಗಳು, ಶಿಸ್ತು, ಇತ್ಯಾದಿ ವಿಷಯದ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಎರಡನೇ ಅವಧಿಯಲ್ಲಿ ಟ್ರಸ್ಟ್ನ ಸದಸ್ಯ ಅಭಿಷೇಕ್ ಎನ್ ಕಲಿಕೆಯ ಅಗತ್ಯತೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. /p>
ಮೂರನೇ ಅವಧಿಯಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಸದಸ್ಯೆ ಶರ್ವಾಣಿ ಮಾನಸಿಕ ಆರೋಗ್ಯ ಮತ್ತು ಜಾಗೃತಿ ಯ ಬಗ್ಗೆ ವಿಚಾರವನ್ನು ವಿದ್ಯಾರ್ಥಿಗಳೊಂದಿಗೆ ವಿನಿಮಯ ಮಾಡಿಕೊಂಡರು. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಯಾವುದೇ ವಿಷಯವನ್ನು ನೀಡಿ ಅದರಲ್ಲಿ ಗುಂಪು ಚರ್ಚೆ ಮತ್ತು ವಿವಿಧ ರೀತಿಯ ಚಟುವಟಿಕೆಗೆ ಅವಕಾಶ ನೀಡಲಾಯಿತು. ಈ ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕಿ ಸ್ನೇಹ ನಿರ್ವಹಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ