ತುಳು ಎಂ.ಎ: ಮಣಿ ರೈ, ವಿಜಯಲಕ್ಷ್ಮೀ ರೈಗೆ ರ‍್ಯಾಂಕ್

Upayuktha
0

ಮಂಗಳೂರು: 2021-22ನೇ ಶೈಕ್ಷಣಿಕ ಸಾಲಿನ ದ್ವಿತೀಯ ವರ್ಷದ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗಕ್ಕೆ ಎರಡು ರ‍್ಯಾಂಕ್‌ಗಳು ಲಭಿಸಿವೆ. ಮಣಿ ಎಂ.ರೈ ಹಾಗೂ ವಿಜಯಲಕ್ಷ್ಮಿ ಪಿ. ರೈ ಇವರಿಬ್ಬರೂ 8.3 ಗ್ರೇಡ್ ಪಡೆದಿದ್ದು, ಪ್ರಥಮ ರ‍್ಯಾಂಕ್‌ ಹಂಚಿಕೊಂಡಿದ್ದಾರೆ.


ಮಂಗಳೂರು ವಿಶ್ವವಿದ್ಯಾನಿಲಯವು 2018 ರಲ್ಲಿ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಆರಂಭಿಸಿದ್ದು, ತುಳು ಎಂ.ಎ. ಪದವೀಧರರಾಗಿ ಹೊರ ಬಂದ ಎರಡನೇ ಬ್ಯಾಚ್ ಇದು. ಎಪ್ರಿಲ್ 23 ರಂದು ಮಂಗಳಗಂಗೋತ್ರಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ರ‍್ಯಾಂಕ್ ಪ್ರದಾನ ಮಾಡಲಾಯಿತು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
To Top