ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಕ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕ ನರಸಿಂಹಯ್ಯ ಎನ್ ಅವರ “ಮಂಗಳೂರು ಕರವಾಳಿಯ ನೇತ್ರಾವತಿ ಮತ್ತು ಗುರುಪುರ ಅಳಿವೆಯಲ್ಲಿನ ಸಿಲ್ವರ್ ಬಿಡ್ಡೀಸ್, ಗೆರ್ರೆಸ್ ಫಿಲೋಮೆಂಟೋಸಸ್ (ಕುವೇರ್)ನ ಜೀವಶಾಸ್ತ್ರ ಮತ್ತು ಜೀವಪರಸ್ಥಿತಿಶಾಸ್ತ್ರೀಯ ಅಧ್ಯಯನ” ಎಂಬ ಸಂಶೋದನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಮಂಗಳೂರಿನ ಮೀನುಗಾರಿಕಾ ಮಾಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಎಂ. ಶಿವಪ್ರಕಾಶ್ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಇವರು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳಗಳಲ್ಲಿ ಭಾಗವಹಿಸಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ ಹಾಗೂ ವೈಜ್ಞಾನಿಕ ನಿಯತಾಕಾಲಿಕೆಗಳಲ್ಲಿ ಇವರ ಹಲವಾರು ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ