'ಅಪ್ಪೆ ಮಂತ್ರದೇವತೆ' ಟೈಟಲ್ ಲಾಂಚ್

Upayuktha
0

ಮಂಗಳೂರು: "ಶ್ರೀ ಪ್ರಾಪ್ತಿ ಕಲಾವಿದೆರ್ ಕುಡ್ಲ" ಪೌರಾಣಿಕ /ಜನಪದ ನಾಟಕ "ಅಪ್ಪೆ ಮಂತ್ರದೇವತೆ" ಶೀಘ್ರ ತೆರೆಗೆ ಬರಲಿದ್ದು, ಟೈಟಲ್ ಲಾಂಚ್ (ಶೀರ್ಷಿಕೆ ಬಿಡುಗಡೆ) ನೆರವೇರಿದೆ.


ಈ ಸಂದರ್ಭ ದಾಯ್ಜಿವರ್ಲ್ಡ್ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಪ್ರೊಡಕ್ಷನ್ ಮುಖ್ಯಸ್ಥ ಸ್ಟ್ಯಾನಿ ಬೇಳ, ಪ್ರಸಿದ್ಧ ಹಾಸ್ಯ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಭಾಗವತ ಸುದೇಶ್ ಹೆಗ್ಡೆ ಕುತ್ತೆತ್ತೂರು, ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ., ಕೊರಿಯೋಗ್ರಾಫರ್ ಸುಹಾನ್ ಕುಳಾಯಿ ಇದ್ದರು.


ಪ್ರಶಾಂತ್ ಸಿ.ಕೆ. ರಚನೆ, ನಿರ್ದೇಶನದ ಮಂತ್ರದೇವತೆ ಪೌರಾಣಿಕ ನಾಟಕಕ್ಕೆ ಜಿತೇಂದ್ರ ಕುಂದೇಶ್ವರ ಹಾಗೂ ಸುಹಾನ್ ಕುಳಾಯಿ ಅವರ ಸಮಗ್ರ ನಿರ್ವಹಣೆ ಇರಲಿದೆ. ರಂಗದರಸೆ ಜೆ.ಕೆ ರೈ ಪಿಲಾರ್ ಮೊದಲಾದ ಅಭಿಜಾತ ಕಲಾವಿದರ ಮೂಲಕ ತುಳು ರಂಗಭೂಮಿಗೆ ಧುಮುಕಲಿದೆ.


ನಾಟಕ ಪ್ರದರ್ಶನಗಳು:

ಪ್ರಶಾಂತ್ ಸಿಕೆ ರಚಿಸಿರುವ "ಮಲೆತ ಮೈಮೆ, ಸತ್ಯೊದ ಬಿರುವೆರ್, ಕಾರ್ಣಿಕದ ತಂಗಡಿ, ನವನೀತ್ ಶೆಟ್ಟಿ ಕದ್ರಿಯವರ ಅಪ್ಪೆ ಭಗವತಿ, ಮುಂತಾದ ಪೌರಾಣಿಕ /ಜನಪದ ನಾಟಕಗಳನ್ನು ಅದ್ಧೂರಿಯಲ್ಲಿ ಪ್ರದರ್ಶನ ಮಾಡಿದೆ.


ನಂಕ್ ದಾಯೆ, ನಂಕ್ಲ ಕಾಲ ಬರು, ಏರೆಗ್ ಗೊತ್ತು, ಪಚ್ಚು ಪಾತೆರೊಡು, ಹಾಗೂ ಹಲವಾರು ಸಾಮಾಜಿಕ ನಾಟಕಗಳನ್ನು ಈ ತಂಡ ಯಶಸ್ವಿಯಾಗಿ ರಂಗದಲ್ಲಿ ಪ್ರದರ್ಶಿಸಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Visitor counter Code hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top