ಮಂಗಳೂರು: ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ತಜ್ಞ, ಮಿಶ್ರ ಪದ್ಧತಿ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರಿಗೆ ಚಿತ್ರದುರ್ಗದ ತ.ರಾ.ಸು ರಂಗಮಂದಿರದಲ್ಲಿ "ಕರುನಾಡ ಹಣತೆ ಸಾಹಿತ್ಯ ರತ್ನ" ಪ್ರಶಸ್ತಿಯನ್ನು ಎ.24ರಂದು ಪ್ರದಾನ ಮಾಡಲಾಯಿತು.
ಇವರ ವೈದ್ಯಕೀಯ ಸೇವೆ ಹಾಗೂ ಸಾಹಿತ್ಯ ಸೇವೆಯನ್ನು ಗುರತಿಸಿ ಚಿತ್ರದುರ್ಗದ ಕರುನಾಡ ಹಣತೆ (ರಿ) ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲಾ ಸಂಘವು ಹಾರ, ತುರಾಯಿ, ಪೇಟ, ಪ್ರಶಸ್ತಿ ಫಲಕ ಸಹಿತವಾಗಿ ಈ ಪ್ರಶಸ್ತಿಯನ್ನು ನೀಡಿದೆ.
ಸಂಸ್ಥೆ ಯ ತೃತೀಯ ವಾರ್ಷಿಕೋತ್ಸವ ದ ಈ ಸಂದರ್ಭದಲ್ಲಿ ಪ್ರಥಮ ಮಹಿಳಾ ಘಟಕದ ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆಯು ಸಹ ಅಂತಾರಾಷ್ಟ್ರೀಯ ಯೋಗ ಪಟು, ಸಾಹಿತಿ, ಸಮಾಜ ಸೇವಕಿಯರಾದ ಮಂಗಳಾ ಜಿ ಶಿರಸಿಯವರಿಂದ ನೆರವೇರಿತು. ಆಶಯ ನುಡಿಯನ್ನು ರಾಜ್ಯಾಧ್ಯಕ್ಷ ರಾಜುಕವಿ ಸೂಲೇನ ಹಳ್ಳಿ ಯವರು ನೆರವೇರಿಸಿದರು.
ಇದೇ ವೇಳೆ ಕರುನಾಡ ಹಣತೆ ಕಾಸರಗೋಡು ರಾಜ್ಯ ಘಟಕದ ನೂತನ ಅಧ್ಯಕ್ಷರಾದ ಕಾಸರಗೋಡಿನ ಡಾ ವಾಣಿಶ್ರೀಯವರಿಗೆ ಸಾಧಕ ಸನ್ಮಾನ ಹಾಗೂ ಘಟಕದ ಪದಗ್ರಹಣ ವಿಧಿ, ವಿವಿಧ ಕವಿಗಳಿಂದ ಕವಿಗೋಷ್ಠಿ, ಪುಸ್ತಕ ಬಿಡುಗಡೆ ಮತ್ತು ಹಲವರಿಗೆ ಸ್ಥಳೀಯ ಸಾಧಕ ಸನ್ಮಾನಗಳು ಸಹ ಈ ನಡೆದುವು.
ಸ್ಥಾಪಕಾಧ್ಯಕ್ಷ ಕನಕಪ್ರೀತೀಶ್ ಕಲಮರ ಹಳ್ಳಿ ಹಾಗೂ ರಾಜ್ಯಾಧ್ಯಕ್ಷ ಎಸ್ ರಾಜು ಸೂಲೇನ ಹಳ್ಳಿ ಇವರ ಸಾರಥ್ಯದಲ್ಲಿ ಹಿರಿಯ ಸಾಹಿತಿ ಶ್ರೀಮತಿ ಜ್ಯೋತಿ ಬಾದಾಮಿ ಇವರ ಅಧ್ಯಕ್ಷತೆಯಲ್ಲಿ ಚಿತ್ರದುರ್ಗದ ತ.ರಾ.ಸು ರಂಗ ಮಂದಿರದಲ್ಲಿ ಈ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರಂಭ ಸಂಪನ್ನವಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ