ಸೂರತ್: ಗುಜರಾತ್ನ ಸೂರತ್ನಲ್ಲಿ ವಿಶಿಷ್ಟವಾದ ಶಾಲೆಯೊಂದಿದೆ. ಈ ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಬೇವಿನ ರಸ ಕುಡಿಯುವ ಶಿಕ್ಷೆ ನೀಡಲಾಗುತ್ತದೆ. ಇದರ ಜೊತೆಗೆ ರಾಷ್ಟ್ರಾಭಿಮಾನವನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ.
ಸೂರತ್ನ ಅಡಾಜನ್ ಪ್ರದೇಶದ ವಿದ್ಯಾಕುಂಜ್ ಶಾಲೆಯ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸದೆ ಶಾಲೆಗೆ ಬಂದರೆ ಅಥವಾ ತಮ್ಮ ಮನೆಕೆಲಸವನ್ನು ಮುಗಿಸದೆ ಶಾಲೆಗೆ ಬಂದರೆ ಅವರಿಗೆ ಬೇವಿನ ರಸ ನೀಡಲಾಗುತ್ತದೆ.