ನವದೆಹಲಿ: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಶನಿವಾರ ಉಗ್ರರೊಂದಿಗೆ ನಡೆದ ಕಾಳಗದಲ್ಲಿ ಹರಿಯಾಣದ ಯೋಧ ನಿಶಾನ್ ಸಿಂಗ್ ಹುತಾತ್ಮರಾದರು.
ಹರಿಯಾಣದ ಸಿರ್ಸಾ ಜಿಲ್ಲೆಯ ಭೌದಿನ್ ಗ್ರಾಮದ ನಿಶಾನ್ ಸಿಂಗ್ 2013ರಲ್ಲಿ ಸೇನೆಗೆ ಸೇರಿದ್ದರು. 29 ವರ್ಷದ ಈ ಯೋಧ ಕಳೆದ ಎರಡು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಬೆಳಗಿನ ಜಾವ 3.15 ಸುಮಾರಿಗೆ ಅನಂತನಾಗ್ ಜಿಲ್ಲೆಯ ವತ್ನಾರ್ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಬಂದಿದ್ದು, ತಕ್ಷಣ ಪೊಲೀಸ್ ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು.
ಈ ವೇಳೆ ಉಗ್ರರು ನಡೆಸಿದ ದಾಳಿಯಲ್ಲಿ ಎದೆಗೆ ಗುಂಡು ತಗುಲಿ ನಿಶಾನ್ ಸಿಂಗ್ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಶ್ರೀನಗರದಲ್ಲಿ ರವಿವಾರ ಹುತಾತ್ಮ ಯೋಧನಿಗೆ ಸೇನಾಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ