ಹೊಸದಿಲ್ಲಿ: ರಾಮ ನವಮಿ ದಿನಂದು ಹಾಸ್ಟೆಲ್ ಮೆಸ್'ನಲ್ಲಿ ಮಾಂಸಹಾರಿ ಊಟ ನೀಡಿದ ಕಾರಣಕ್ಕೆ ಜೆಎನ್ ಯು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ರವಿವಾರ ರಾತ್ರಿ ನಡೆದಿದೆ.
ಜವಹರಲಾಲ್ ನೆಹರು ಯುನಿವರ್ಸಿಟಿ ವಿದ್ಯಾರ್ಥಿ ಸಂಘ (ಜೆಎನ್ ಯುಎಸ್ ಯು) ಮತ್ತು ಎಬಿವಿಪಿ ಯ 16 ಮಂದಿ ಗಾಯಗೊಂಡಿದ್ದಾರೆ. ಈ ಗುಂಪುಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಮನವಮಿ ದಿನದಂದು ಹಾಸ್ಟೆಲ್ ಮೆಸ್ ನಲ್ಲಿ ನಾನ್ ವೆಜಿಟೇರಿಯನ್ ಆಹಾರ ಸೇವಿಸುವುದನ್ನು ಎಬಿವಿಪಿ ಕಾರ್ಯಕರ್ತರು ತಡೆದರು ಎಂದು ಜೆಎನ್ ಯುಎಸ್ ಯು ಕಾರ್ಯಕರ್ತರು ಆರೋಪಿಸಿದ್ದಾರೆ. ಆದರೆ ಇದನ್ನು ಎಬಿವಿಪಿ ಅಲ್ಲಗಳೆದಿದ್ದು, ರಾಮನವಮಿ ಅಂಗವಾಗಿ ಹಾಸ್ಟೆಲ್ ನಲ್ಲಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮಕ್ಕೆ ಎಡಪಂಥೀಯರು ಅಡ್ಡಿಪಡಿಸಿದ್ದಾರೆ ಎಂದು ದೂರಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ