ಚಿತ್ತ ಚಿತ್ತಾರಗೊಂಡಾಗ ಚಿತ್ರವಾಗುವುದು; ಅಂದದ ಚಿತ್ರಗಳ ಬರೆಯುವ ಸುಂದರ ಶ್ರಮ್ಯ

Upayuktha
0

ಕಲೆಯನ್ನು ನೋಡಿ ಆಸ್ವಾದಿಸುವುದು ಸುಲಭ, ಆದರೆ ಕಲೆಗೆ ಒಂದು ರೂಪ ನೀಡುವುದು ಕಷ್ಟದ ಕೆಲಸವೇ ಸರಿ. ಯಾವಾಗ ನಮಗೆ ಸುತ್ತಮುತ್ತಲಿನ ವಿಷಯಗಳ ಮೇಲೆ ಆಸಕ್ತಿ, ಹೊಸತನವನ್ನು ಚಿತ್ರಿಸುವ ಹಂಬಲವಿರುತ್ತದೆ ಆಗ ಮಾತ್ರ ಉತ್ತಮ ಕಲೆಗಾರರಾಗಲು ಸಾಧ್ಯ.


ಹೀಗೆ ಕಲೆಯ ಮೇಲೆ ಸಣ್ಣ ವಯಸ್ಸಿನಿಂದಲೇ ಆಸಕ್ತಿ ಬೆಳೆಸಿಕೊಂಡವಳು ಶ್ರಮ್ಯ. ಎಂ. ಈಕೆ ಮಹಾಬಲ ಸಪಲ್ಯ ಹಾಗೂ ಶ್ಯಾಮಲಾ. ಎಂ ಎಂಬವರ ಪುತ್ರಿ. 


ಸದ್ಯ ಇವರು ಎಸ್. ವಿ. ಎಸ್ ಇಂಗ್ಲಿಷ್ ಸ್ಕೂಲ್ ವಿದ್ಯಾಗಿರಿ ಬಂಟ್ವಾಳದಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಈಕೆ ಎರಡನೇ ತರಗತಿ ಓದುತ್ತಿರುವಾಗಲೇ ಚಿತ್ರಕಲೆಯನ್ನು ಆರಂಭಿಸಿದವಳು, ಕಲೆಯನ್ನು ಪ್ರೀತಿಸಿದಾಗ ಉತ್ತಮವಾಗಿ ಮೂಡಿಸಬಹುದು ಎನ್ನುವುದಕ್ಕೆ ಇವರು ಒಳ್ಳೆಯ ನಿದರ್ಶನ.


ತಮ್ಮ ಕೆಲಸಗಳಿಗೆ ಪ್ರಶಸ್ತಿ ಸಿಗಬೇಕೆಂದೇನಿಲ್ಲ. ಪ್ರೋತ್ಸಾಹ ಸಿಕ್ಕರೂ ಇನ್ನಷ್ಟು ಬೆಳೆಯಲು ಹುಮ್ಮಸ್ಸು ಜಾಸ್ತಿಯಾಗುತ್ತದೆ ಎನ್ನುವ ಇವಳು, ಸಾಕಷ್ಟು ಸ್ಪರ್ಧೆಗಳಲ್ಲಿ ಇದುವರೆಗೆ ಭಾಗವಹಿಸಿದ್ದಾಳೆ. ಅವುಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ. ಇವರು ಎಲ್ಐಸಿ ಡ್ರಾಯಿಂಗ್ ಕಾಂಪಿಟೇಶನ್ ನಲ್ಲಿ ಪ್ರಥಮ ಸ್ಥಾನ, ಉದಯವಾಣಿ ಚಿನ್ನರ ಬಣ್ಣ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಳು. ನಂತರ ಇಂಟರ್ನ್ಯಾಷನಲ್ ಪೀಸ್ ಪೋಸ್ಟರ್ 2021ರಲ್ಲಿ ತಾಲೂಕು ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡು ನಂತರ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಳು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡ್ರಾಯಿಂಗ್ ಕಾಂಪಿಟೇಶನ್ ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಸಣ್ಣ ವಯಸ್ಸಿಗೆ ಕಲೆಯ ಮೇಲೆ ಅತೀವ ಆಸಕ್ತಿ ಹೊಂದಿರುವ ಇವಳು ಮುಂದೆ ಚಿತ್ರಕಲೆಯಲ್ಲಿ ಇನ್ನಷ್ಟು ಸಾಧಿಸುವ ಆಶಾಭಾವನೆಯನ್ನು ತನ್ನಲ್ಲಿ ಇರಿಸಿಕೊಂಡಿದ್ದಾಳೆ.


ಈಕೆಯ ಆಸಕ್ತಿಗೆ ಪೋಷಕರ ಮತ್ತು ಶಿಕ್ಷಕರ ಉತ್ತಮ ಪ್ರೋತ್ಸಾಹ ದೊರಕುತ್ತಿದೆ. ಬಂಟ್ವಾಳ ಲಯನ್ಸ್ ಕ್ಲಬ್ ಪ್ರಾಯೋಜಿತ 34 ನೇ ಇಂಟರ್ನ್ಯಾಷನಲ್ ಪೀಸ್ ಪೋಸ್ಟರ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಉತ್ತಮ ಪೋಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಜೊತೆಗೆ, ಮೆರಿಟ್ ಅವಾರ್ಡ್ ವಿಜೇತಳಾಗಿದ್ದರೆ, 55 ದೇಶದ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತಳಾಗಿರುವುದು ನಮ್ಮ ದೇಶಕ್ಕೆ ಹೆಮ್ಮೆಯ ವಿಷಯ. ಚಿತ್ರಕಲೆಯಲ್ಲೆ ಅತೀವ ಆಸಕ್ತಿ ಹೊಂದಿರುವ ಇವಳು, ಇನ್ನಷ್ಟು ಚಿತ್ರಗಳನ್ನು ಮೂಡಿಸುವ ಕನಸು ಹೊತ್ತಿದ್ದಾಳೆ. ಇವಳ ಈ ಕಲಾಸಕ್ತಿ ಹೀಗೆ ಮುಂದುವರಿದು ಇನ್ನಷ್ಟು ಪ್ರಶಸ್ತಿಗಳ ಗರಿಮೆ ಇವಳ ಮುಡಿಗೆರಲಿ ಎಂಬ ಆಶಯ ನಮ್ಮದು.


-ದೀಕ್ಷಿತಾ ಜೇಡರಕೋಡಿ

ವಿವೇಕಾನಂದ ಕಾಲೇಜು ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top