||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಿಗೆ  ತುಳಸಿಭಾಯ್ ಎಂದು ಹೆಸರಿಟ್ಟ ಪ್ರಧಾನಿ ಮೋದಿ

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಿಗೆ  ತುಳಸಿಭಾಯ್ ಎಂದು ಹೆಸರಿಟ್ಟ ಪ್ರಧಾನಿ ಮೋದಿ

ಗುಜರಾತ್: ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರಿಗೆ ಪ್ರಧಾನಿ ಮೋದಿ ಗುಜರಾತಿ ಹೆಸರಿಟ್ಟಿದ್ದಾರೆ. 


ಬುಧವಾರ ಗುಜರಾತ್​ನ ಗಾಂಧಿನಗರದಲ್ಲಿ ನಡೆದ ಜಾಗತಿಕ ಆಯುಷ್​ ಮತ್ತು ಆವಿಷ್ಕಾರ ಸಮ್ಮೇಳನದಲ್ಲಿ ಈ ವಿದ್ಯಮಾನ ನಡೆದಿದೆ.
ಭೇಟಿಯಾದ ಸಂದರ್ಭದಲ್ಲಿ ಡಾ.ಟೆಡ್ರೊಸ್ ನಾನು ಪಕ್ಕಾ ಗುಜರಾತಿ ಆಗಿದ್ದೇನೆ. ನೀವು ನನಗೆ ಗುಜರಾತಿ ಹೆಸರಿಡಿ ಎಂದು ಕೇಳಿದರು. ಅದು ನನಗೆ ಈಗ ನೆನಪಿಗೆ ಬರುತ್ತಿದೆ. ನಾನು ಗುಜರಾತಿಯಾಗಿ ಡಾ.ಟೆಡ್ರೊಸ್ ಅವರನ್ನು ತುಳಸಿಭಾಯ್​ ಅಂತಾ ಕರೆಯುತ್ತೇನೆ ಎಂದು ಹೇಳಿದರು. 


ತುಳಸಿಭಾಯ್​ ಹೆಸರಿಟ್ಟ ಬಗ್ಗೆಯೂ ಪ್ರಧಾನಿ ವಿವರಣೆ ನೀಡಿದ್ದು, ಇಂದಿನ ಯುವ ಪೀಳಿಗೆ ತುಳಸಿ ಸಸಿಯನ್ನು ಮರೆಯುತ್ತಿದೆ. ಆದರೆ, ಎಷ್ಟೋ ಪೀಳಿಗೆಗಳಿಂದ ಪ್ರತಿ ಮನೆಯಲ್ಲಿ ತುಳಸಿ ಪೂಜೆ ಪರಂಪರೆಯಿಂದ ಬೆಳೆದುಕೊಂಡು ಬಂದಿದೆ. ಅಲ್ಲದೇ, ದೀಪಾವಳಿ ಸಂದರ್ಭದಲ್ಲಿ ತುಳಸಿ ಲಗ್ನವೂ ನಡೆಯುತ್ತಿದೆ. 'ಭಾಯ್​' ಇಲ್ಲದೇ ಗುಜರಾತಿ ಹೆಸರಿಲ್ಲ. ಹೀಗಾಗಿ, 'ತುಳಸಿಭಾಯ್'​ ಎಂದು ಕರೆಯುವುದಾಗಿ ಮೋದಿ ತಿಳಿಸಿದರು.

0 Comments

Post a Comment

Post a Comment (0)

Previous Post Next Post