ನಿಟ್ಟೆ ಹಾಗೂ ಅಟೋಲಿವ್ ಸಂಸ್ಥೆಗಳ ನಡುವೆ ಒಡಂಬಡಿಕೆ

Upayuktha
0

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಕಾಲೇಜು ಹಾಗೂ ಬೆಂಗಳೂರಿನ ಅಟೋಲಿವ್ ಇಂಡಿಯಾ ಪ್ರೈ.ಲಿ ನಡುವಿನ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಗೂ ಹಸ್ತಾಂತರ ಕಾರ್ಯಕ್ರಮವು ಏ.11 ರಂದು ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ನಡೆಯಿತು. ಒಪ್ಪಂದದ ಪ್ರಮಾಣಪತ್ರಕ್ಕೆ ನಿಟ್ಟೆ ಸಂಸ್ಥೆಯ ವತಿಯಿಂದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಎನ್.ಚಿಪ್ಳೂಣ್ಕರ್ ಹಾಗೂ ಅಟೋಲಿವ್ ವತಿಯಿಂದ ಸಂಸ್ಥೆಯ ಅಸೋಸಿಯೇಟ್ ವೈಸ್‍ಪ್ರೆಸಿಡೆಂಟ್ ಕಿರಣ್ ಶೀಲಾವಂತ್ ಸಹಿಹಾಕಿದರು.


ಈ ಸಂದರ್ಭದಲ್ಲಿ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್ ವಿಶಾಲ್ ಹೆಗ್ಡೆ, ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾ|ಐ ರಮೇಶ್ ಮಿತ್ತಂತಾಯ, ಡಾ| ಶ್ರೀನಿವಾಸ ರಾವ್ ಬಿ.ಆರ್, ರೆಜಿಸ್ಟ್ರಾರ್ ಯೋಗೀಶ್ ಹೆಗ್ಡೆ, ನಿಟ್ಟೆ ಐಐಸಿ ನಿರ್ದೇಶಕ ಡಾ| ಪರಮೇಶ್ವರನ್, ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ| ಶಶಿಕಾಂತ ಕರಿಂಕ ಹಾಗೂ ಅಟೋಲಿವ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಈ ಒಪ್ಪಂದದ ಪ್ರಕಾರ ಅಟೋಲಿವ್ ಸಂಸ್ಥೆಯು ನಿಟ್ಟೆಯ ತಾಂತ್ರಿಕ ಕಾಲೇಜು ಹಾಗೂ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಕಾಲೇಜುಗಳಲ್ಲಿ ಇನ್ಕ್ಯೂಬೇಶನ್ ಕೇಂದ್ರವನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ಬಗೆಗಿನ ತರಬೇತಿಯನ್ನು ನೀಡಲಿದೆ. ಪ್ರಸ್ತುತ ದಿನಗಳಲ್ಲಿ ಉದ್ಯೋಗಕ್ಕೆ ಬೇಕಾದ ಹಲವಾರು ಕೌಶಲ್ಯತೆಗಳನ್ನು ವಿದ್ಯಾರ್ಥಿಗಳಿಗೆ ಅರ್ಥೈಸುವ ದೃಷ್ಟಿಯಿಂದ ಈ ಒಡಂಬಡಿಕೆಯು ಸಹಕಾರಿಯಾಗಲಿದೆ.


ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ| ಶ್ರೀನಿವಾಸ ಪೈ ಸ್ವಾಗತಿಸಿದರು. ಎನ್.ಎಂ.ಐ.ಟಿ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ|ಸುಧೀರ್ ರೆಡ್ಡಿ ಅವರ ಸಂಸ್ಥೆಯಲ್ಲಿ ನಡೆಸಲಾಗುತ್ತಿರುವ ಸಂಶೋಧನಾ ಕಾರ್ಯಗಳ ಬಗೆಗೆ ವಿವರಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ| ನಿತಿನ್ ಕಾರ್ಯಕ್ರಮ ಸಂಯೋಜಿಸಿದರು. ಪ್ಲೇಸ್ಮೆಂಟ್ ಲೀಡ್ ಭರತ್ ಕುಮಾರ್ ವಂದಿಸಿದರು. ಸಹಪ್ರಾಧ್ಯಾಪಕಿ ಡಾ|ರಶ್ಮೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top