|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂತ ತತ್ವ ಮಾನವೀಯತೆಯ ಪರ: ಡಾ. ಶ್ರೀಶಕುಮಾರ್

ಸಂತ ತತ್ವ ಮಾನವೀಯತೆಯ ಪರ: ಡಾ. ಶ್ರೀಶಕುಮಾರ್


ಮುಡಿಪು: ಜಗತ್ತಿನ ಎಲ್ಲ ಒಳಿತೂ ನಮ್ಮೆಡೆಗೆ ಹರಿದು ಬರಲಿ ಎಂಬ ಸದಾಶಯವನ್ನು ಹೊಂದಿದ್ದ ಸಂತ ಪರಂಪರೆ ಎಲ್ಲ ಕಟ್ಟುಪಾಡುಗಳ ಪರಿಧಿಯನ್ನು ಮೀರಿ ಸತ್ಯದ ಶೋಧನೆಯನ್ನು ಮಾಡಿದವರು. ಜಗತ್ತಿನ ಎಲ್ಲ ಸಂತರ ಮೂಲ ಆಶಯ ಮಾನವತೆಯ ಪರವಾದುದು ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ. ಶ್ರೀಶಕುಮಾರ್ ಹೇಳಿದರು.


ಅವರು ಮುಡಿಪುವಿನಲ್ಲಿ ಅಲ್ಲಮಪ್ರಭು ಪೀಠ ಕಾಂತಾವರ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ಹಾಗೂ ಶ್ರೀಕೃಷ್ಣ ಧ್ಯಾನ ಮಂದಿರ ಮುಡಿಪು ಇವುಗಳ ಸಹಭಾಗಿತ್ವದಲ್ಲಿ ಶ್ರೀಕೃಷ್ಣ ಧ್ಯಾನ ಮಂದಿರದ ಬಯಲು ರಂಗ ಮಂಟಪದಲ್ಲಿ 'ಸಂತ ಪರಂಪರೆ ಮತ್ತು ಭಾರತೀಯ ಸಮಾಜ' ಎಂಬ ವಿಷಯದಲ್ಲಿ  ಉಪನ್ಯಾಸ ನೀಡಿದರು. ಅನುಭವದ ನಡೆ ಅನುಭಾವದ ನುಡಿ ಉಪನ್ಯಾಸ ಮಾಲಿಕೆಯ 105ನೇ ಉಪನ್ಯಾಸ ಕಾರ್ಯಕ್ರಮವಿದು.


ಋತ ಎಂಬುದು ಪ್ರಕೃತಿ. ಯಾವತ್ತೂ ಬದಲಾಗದ್ದು ಸತ್ಯ ಎನ್ನುವುದು ಸಾಪೇಕ್ಷ. ಅದು ಕಾಲದೇಶಗಳ ಪ್ರಭಾವಗಳಿಗೆ ಒಳಗಾಗುತ್ತದೆ. ಆದ್ದರಿಂದಲೇ ಸತ್ಯಕ್ಕೆ ಹಲವು ಮುಖಗಳಿರುತ್ತವೆ. ಸಂತರು ಸಹಜವಾಗಿರುವ ಪ್ರಕೃತಿಯ ನಡೆಯನ್ನು ಸ್ವೀಕರಿಸಿದವರು ಎಂದರು.


ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಕೃಷ್ಣ ಧ್ಯಾನ ಮಂದಿರದ ಸ್ಥಾಪಕರಾದ ಡಾ. ಮದನ ಮೋಹನ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಅವರು ಭಗವದ್ಗೀತೆ ಜಗತ್ತಿನ ಮೊದಲ ಮನಶ್ಶಾಸ್ತ್ರ ಕೃತಿ. ಅದರ ಸಮಾನತೆ, ಪ್ರಜಾಪ್ರಭುತ್ವ ಪರವಾದ ಧ್ವನಿಯನ್ನು ನಾವಿನ್ನೂ ಕೇಳಿಸಿಕೊಂಡಿಲ್ಲ ಎಂದರು.


ಕೂರ್ನಾಡು ಗ್ರಾಮ ಪಂವಾಯತ್ ಅಧ್ಯಕ್ಷರಾದ ಗಣೇಶ್ ನಾಯಕ್ ಅತಿಥಿಗಳಾಗಿದ್ದರು. ದ.ಕ ಜಿಲ್ಲಾ ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ಸ್ವಾಗತಿಸಿದರು. ಅಲ್ಲಮ ಪ್ರಭು ಪೀಠದ ಸಂಚಾಲಕರಾದ ಕಲ್ಲೂರು ನಾಗೇಶ್ ನಿರೂಪಿಸಿದರು. ದ.ಕ ಜಿಲ್ಲಾ ಕಸಾಪ ಉಳ್ಖಾಲ ಘಟಕದ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ವಂದಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم