ಮುಡಿಪು: 'ಕನ್ನಡದಲ್ಲಿ ಹನಿಗವನಗಳು: ಸ್ವರೂಪ ಮತ್ತು ಅನನ್ಯತೆ' ಎಂಬ ವಿಷಯದಲ್ಲಿ ಪುತ್ತೂರಿನ ಮಲ್ಲಿಕಾ ಕುಮಾರಿಯವರು ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆಯವರ ಮಾರ್ಗದರ್ಶನದಲ್ಲಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಗೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಉಪ್ಪಿನಂಗಡಿ ಆಲಂತಾಯ ಬಿ. ವಾರಿಸೇನ ಜೈನ್ ರವರ ಪುತ್ರಿಯಾದ ಇವರು ಪುತ್ತೂರು ದರ್ಬೆ ಶಾಂತಿನಾಥ ಸ್ಟೋರ್ ನ ಮಾಲಕ ಪಿ. ಶ್ರೀಧರ್ ರವರ ಪತ್ನಿ. ಪ್ರಸ್ತುತ ಉಪ್ಪಿನಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ಕನ್ನಡ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ