||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ. ಶಿವಾನಂದ ನಾಯಕರಿಗೆ ಮಂಗಳೂರು ವಿವಿ ವಿಜ್ಞಾನ ಡಾಕ್ಟರೇಟ್ ಪದವಿ ಪ್ರದಾನ

ಡಾ. ಶಿವಾನಂದ ನಾಯಕರಿಗೆ ಮಂಗಳೂರು ವಿವಿ ವಿಜ್ಞಾನ ಡಾಕ್ಟರೇಟ್ ಪದವಿ ಪ್ರದಾನ


ಉಡುಪಿ: ಜೀವ ರಸಾಯನ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್ ಹಾಗೂ ಶಿವಾನಿ ಡಯಾಗ್ನಿಸ್ಟಿಕ್ ಮತ್ತು ರೀಸಚ೯ ಸೆಂಟರ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಉಡುಪಿ ಮೂಲದ ಡಾ.ಶಿವಾನಂದ ನಾಯಕ್ ಬಿ. ಅವರಿಗೆ ಮಂಗಳೂರು ವಿಶ್ವ ವಿದ್ಯಾಲಯ ಕೊಡ ಮಾಡುವ ವಿಜ್ಞಾನ ಡಾಕ್ಟರೇಟ್ (ಡಿ.ಎಸ್ಸಿ) ಪದವಿ ಪ್ರದಾನ ಮಂಗಳೂರು ವಿ.ವಿ.ನಲ್ವತ್ತನೇ ಘಟಿಕೇೂತ್ಸವ ಸಮಾರಂಭದಲ್ಲಿಮಾನ್ಯ ರಾಜ್ಯ ಪಾಲರು ಪ್ರದಾನಿಸಿದರು.


ಡಾ. ಶಿವಾನಂದ ನಾಯಕರು ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ 14 ವರ್ಷಗಳ ಕಾಲ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ಅನಂತರ ವೆಸ್ಟ್‌ ಇಂಡೀಸ್ ವಿ.ವಿ.ಯ ಮೆಡಿಕಲ್ ಸೈನ್ಸ್ ವಿಭಾಗದಲ್ಲಿ 16 ವರ್ಷ ಪ್ರೊಫೆಸರರಾಗಿ ವಿಭಾಗದ ಡೆಪ್ಯುಟಿ ಡೀನ್ ಆಗಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ. ಅಧ್ಯಾಪನ ಮತ್ತು ಸಂಶೋಧನಾ ರಂಗದಲ್ಲಿ 30 ವರುಷಗಳಿಗೂ ಹೆಚ್ಚು ಕಾಲ ಕೆಲಸ ನಿರ್ವಹಿಸಿರುತ್ತಾರೆ. ಇವರು ಮೆಡಿಕಲ್; ಡೆಂಟಲ್ ಹಾಗೂ ಆಲೈಡ್ ಹೆಲ್ತ್ ಹಾಗೂ ಫಾರ್ಮಸಿ ವಿದ್ಯಾರ್ಥಿಗಳಿಗಾಗಿ ಒಂಭತ್ತು  ಗ್ರಂಥಗಳನ್ನು ಪ್ರಕಟಿಸಿದ್ದಾರೆ.


ಭಾರತವೂ ಸೇರಿದಂತೆ ಟ್ರಿನಿಡಾಡ್ ಮುಂತಾದ ದೇಶಗಳ ವಿದ್ಯಾರ್ಥಿಗಳಿಗೆ ಆಕರ ಗ್ರಂಥವಾಗಿ ಸ್ವೀಕರಿಸಲ್ಪಟಿದೆ. ಸಂಶೋಧಕರಾಗಿ ಬರೆದ "Type 2 diabetes and cardiovascular diseases ಕುರಿತಾಗಿ ಬರೆದ ಮಹಾ ಪ್ರಬಂಧ ಹಾಗೂ160 ಕ್ಕೂ ಹೆಚ್ಚಿನ ಪ್ರಬಂಧ ಲೇಖನಗಳು ರಾಷ್ಟ್ರೀಯ  ಅಂತರರಾಷ್ಟ್ರೀಯ ಜನ೯ಲ್ ಗಳಲ್ಲಿ ಪ್ರಕಟಗೊಂಡಿದೆ. ಇವರ ಸಮಗ್ರ ಸಂಶೋಧನಾ ಸಾಧನೆಗಾಗಿ 2020ರ ಇನ್ಸ್ಟಿಟ್ಯೂಟ್ ಆಫ್ ಸ್ಕಾಲರ್ ಆವಾಡ್೯ ದೊರೆತಿದೆ. ಹತ್ತು ಹಲುವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಡಾ. ನಾಯಕ್ ಅವರ ಸಂಶೋಧನಾ ಸಾಧನೆಯನ್ನು ಪರಿಗಣಿಸಿ ಸುಮಾರು ಇಪ್ಪತ್ತು ವರುಷಗಳ ಅನಂತರ ಮಂಗಳೂರು ವಿ.ವಿ ಕೊಡ ಮಾಡಿದ ವಿಜ್ಞಾನ ಸಂಶೋಧನಾ ಪದವಿಗೆ ಇವರು ಭಾಜನರಾಗಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post